ಕರಡಿ ಕಂಡು ಹೆದರಿದ ಯುವತಿಯ ಹತ್ತಿರ ಅದೇ ಕರಡಿ ಹೋಗಿ ಮಾಡಿದ್ದೇನು? ನೋಡಿ ಈ ವಿಡಿಯೋದಲ್ಲಿ…
ಪ್ರಾಣಿಗಳಿಗೂ ಸಹ ಮನಸ್ಸಿರುತ್ತದೆ, ಅವುಗಳಿಗೂ ಸಹ ಮನುಷ್ಯನ ಹಾಗೆ ಭಾವನೆಗಳಿರುತ್ತವೆ. ಇಷ್ಟಾದರೂ ಈ ಪ್ರಾಣಿಗಳು ಯಾವಾಗ ಏನು? ಯಾವ ರೀತಿ ವರ್ತಿಸುತ್ತವೆ? ಎಂಬುದು ಹೇಳಲು ಸಾಧ್ಯವಿಲ್ಲ. ಕೆನಡಾದ ಕಾಡಿನಲ್ಲಿ ಯುವತಿಯ ಜೊತೆಗೆ ಕರಡಿಯೊಂದು ವರ್ತಿಸಿದ ರೀತಿ ತುಂಬಾ ವಿಚಿತ್ರ ಹಾಗೂ ಅಷ್ಟೇ ಮಜವಾಗಿದೆ.
ಈ ವಿಡಿಯೋದಲ್ಲಿ ಕಂಡುಬರುವ ಹಾಗೆ ಕಾಡಿನ ಮಧ್ಯದ ದಾರಿಯಲ್ಲಿ ಯುವತಿಯೊಬ್ಬಳು ನಡೆದುಕೊಂಡು ಬರುವಾಗ ಹಠಾತ್ ಕರಡಿಯೊಂದು ಭೇಟಿಯಾಗಿದೆ. ಕರಡಿಯನ್ನು ನೋಡಿ ಆಕೆ ಗಾಬರಿಯಾಗಿದ್ದರೂ ಅದನ್ನು ತೋರಗೊಡದೆ ಧೈರ್ಯದಿಂದ ಯಾವುದೇ ರೀತಿಯ ಚಲನವಲನೆ ಮಾಡದೆ ಹಾಗೆಯೇ ನಿಂತಿದ್ದಾಳೆ. ವ್ಯಕ್ತಿ ಹೆಚ್ಚು ಕಡಿಮೆ ಯಾವುದೇ ಚಲನವಲನೆ ಮಾಡದೆ ಸುಮ್ಮನೆ ನಿಂತಾಗ ಕರಡಿಗಳು ಅಂಥವರ ಗೋಜಿಗೆ ಹೋಗುವುದಿಲ್ಲ. ಆದರೆ ಈ ಕರಡಿಯು ಆ ಯುವತಿಯ ಹತ್ತಿರ ಹೋಗಿ ಆಕೆಯ ಮಂಡಿಗೆ ಟಚ್ ಮಾಡಿದೆ. ಕರಡಿಯು ಯುವತಿಯ ಮಂಡಿಗೆ ಟಚ್ ಮಾಡಿದ್ದೇ ತಡ ಶಾಕ್ ಹೊಡೆದ ಹಾಗೆ ಅಲ್ಲಿಂದ ಸರ್ರನೆ ಬದಿಗೆ ಸರಿದು ನಿಂತಿದೆ. ಈ ದೃಶ್ಯ ನೋಡಲು ತುಂಬಾ ವಿಚಿತ್ರ ಹಾಗೂ ಅಷ್ಟೇ ತಮಾಷೆಯಿಂದ ಕೂಡಿದೆ. ಕರಡಿಯು ಬದಿಗೆ ಸರಿಯುತ್ತಲೇ ಯುವತಿ ಇದೇ ಒಳ್ಳೆಯ ಅವಕಾಶವೆಂದು ತಿಳಿದು ಅಲ್ಲಿಂದ ಬೇಗನೆ ಓಡಿ ತನ್ನವರ ಕಡೆಗೆ ಬಂದಿದ್ದಾಳೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ todotoronto ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋಗೆ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದು ಸಾವಿರಾರು ಜನರು ಲೈಕ್ ಮಾಡಿದ್ದಾರೆ.