Video: ರಾತ್ರಿ ಹೊತ್ತು ಯಜಮಾನನ ಮನೆ ಕಾಯುವಾಗಲೇ ನಾಯಿಯ ಎದುರಿಗೆ ಬಂತು ಚಿರತೆ! ಮುಂದೆ ನಡೆದ ಕಾಳಗದಲ್ಲಿ…
ಇತ್ತೀಚೆಗೆ ಕಾಡುಮೃಗಗಳು ಜನವಸತಿಗಳಲ್ಲಿ ನುಗ್ಗಿ ಬರುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಮಾನವ ಮಾಡುತ್ತಿರುವ ತಪ್ಪು. ಅರಣ್ಯನಾಶ ಹಾಗೂ ಯಾವುದೇ ಇತಿಮಿತಿ ಇಲ್ಲದೆ ಹೆಚ್ಚುತ್ತಿರುವ ನಗರಗಳು ಇವುಗಳಿಂದಾಗಿ ಕಾಡುಮೃಗಗಳು ಮಾನವ ವಸತಿಯಲ್ಲಿ ಬಂದು ಏನಾದರೂ ಅಪಾಯವನ್ನು ಮಾಡಿ ಹೋಗುತ್ತಿವೆ. ಇದೇ ರೀತಿ ಒಂದು ಘಟನೆ ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ನಡೆದಿದೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಲ್ಲಿ ಚಿರತೆಯೊಂದು ರಾತ್ರಿ ಸಮಯದಲ್ಲಿ ಮಾನವ ವಸತಿಗೆ ಬಂದು ಲಗ್ಗೆಯಿಟ್ಟು ಅವಘಡವೊಂದು ಮಾಡಿ ಹೋಗಿದೆ. ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಸ್ವಾಮಿನಿಷ್ಠೆಗೆ ಹೆಸರಾದಂಥ ಪ್ರಾಣಿ ನಾಯಿಯೊಂದು ರಾತ್ರಿಯ ಹೊತ್ತಿನಲ್ಲಿ ಮಲಗದೆ ಕಡಿಮೆ ಎತ್ತರದ ಗೋಡೆಯ ಮೇಲೆ ಕುಳಿತು ತನ್ನ ಯಜಮಾನನ ಮನೆಯನ್ನು ರಕ್ಷಣೆ ಮಾಡುತ್ತಿದೆ. ಅದೇ ಸಂದರ್ಭದಲ್ಲಿ ನಾಯಿ ಎದುರಿಗೆ ಏನೋ ಶಬ್ದ ಬಂದಂತಾಗಿ ನಾಯಿಯು ಆ ಕಡೆಗೆ ಕಿವಿ ನಿಮಿರಿಸಿ ಗಮನವಿಟ್ಟು ನೋಡುತ್ತದೆ. ಆಗ ಕತ್ತಲೆಯಿಂದ ಚಿರತೆಯೊಂದು ಮನೆಯ ಕಡೆಗೆ ಬರುತ್ತಿರುವುದನ್ನು ಗಮನಿಸಿದ ನಾಯಿ ತಾನು ಹೆದರಿದರೂ ಸಹ ಬೊಗಳುತ್ತಾ ಅದಕ್ಕೆ ಅಲ್ಲಿಂದ ಓಡಿಸಲು ಪ್ರಯತ್ನ ಮಾಡಿದೆ. ಆದರೆ ಬೇಟೆಯಲ್ಲಿ ನಿಪುಣವಾದ ಚಿರತೆ ಬಂದ ಕೆಲಸವನ್ನು ಪೂರ್ಣ ಮಾಡಿಕೊಂಡೇ ಹೋಗಿದೆ. ನಾಯಿಯು ಬೊಗಳುತ್ತಾ ಚಿರತೆಯನ್ನು ಹೇಗಾದರೂ ಮಾಡಿ ಬಂದ ದಾರಿಗೆ ಅಟ್ಟಬೇಕೆಂದು ಪ್ರಯತ್ನ ಮಾಡಿದೆ. ಆದರೆ ಈ ಪ್ರಯತ್ನದಲ್ಲಿ ನಾಯಿಗೆ ಯಶಸ್ಸು ಸಿಕ್ಕಿಲ್ಲ ಮತ್ತು ಚಿರತೆ ಸರಿಯಾಗಿ ನಾಯಿಯ ಮೇಲೆ ಅಟ್ಯಾಕ್ ಮಾಡಿ ಅದನ್ನು ಸಾಯಿಸಿ ತೆಗೆದುಕೊಂಡು ಹೋಗಿದೆ.
ನ್ಯೂಸ್ ಏಜೆನ್ಸಿ ANI ಹೇಳುವ ಪ್ರಕಾರ, ನಾಸಿಕ್ ಜಿಲ್ಲೆಯ ಮುಂಗಸರೆ ಹೆಸರಿನ ಈ ಊರ ಜನರಿಗೆ, ಸಾಯಂಕಾಲ ಆಗುತ್ತಲೇ ಜನರು ಹೊರಗೆ ತಿರುಗಾಡುವುದನ್ನು ಆದಷ್ಟು ಕಡಿಮೆ ಮಾಡಿ ಮತ್ತು ತಮ್ಮ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಮೊದಲಿಂದಲೂ ಸೂಚನೆ ನೀಡುತ್ತಲೇ ಬಂದಿದ್ದೇವೆ ಎನ್ನುತ್ತಾರೆ, ಅರಣ್ಯ ಅಧಿಕಾರಿಗಳು. ಕಾರಣ ಈ ಪ್ರದೇಶದಲ್ಲಿ ಚಿರತೆಯ ಓಡಾಟ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ನೇಟಿಜನ್ಸ್ ಗಳು ನಾಯಿಯನ್ನು ಸಾಕುವ ಯಜಮಾನರ ಬಗ್ಗೆ ಬೇಸರ ವ್ಯಕ್ತ ಮಾಡುತ್ತಿದ್ದಾರೆ. ಕಾರಣ ಹೊರಗಿನ ಈ ಪರಿಸ್ಥಿತಿ ಎಲ್ಲರಿಗೂ ಗೊತ್ತಿದ್ದರೂ ತಾವು ಸಾಕಿದ ನಾಯಿಯನ್ನು ಹೊರಗಡೆ ಬಿಟ್ಟು ಬಾಗಿಲು ಹಾಕಿಕೊಂಡು ಒಳಗೆ ಮಲಗುವದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲಿ ನಾಯಿಯು ಯಜಮಾನನ ಮನೆಯ ರಕ್ಷಣೆ ಮಾಡುವ ಸಲುವಾಗಿ ತನ್ನ ಪ್ರಾಣವನ್ನೇ ಬಲಿ ನೀಡಿತು.
ವಿಡಿಯೋ ನೋಡಿ
#WATCH | Leopard entered a residential area in Mungsare village of Nashik, attacked a pet dog yesterday
(Source: CCTV) pic.twitter.com/OznDoeQvHR
— ANI (@ANI) June 6, 2022