ಟ್ರ್ಯಾಫಿಕ್ ನಲ್ಲಿ ದೊಡ್ಡ ವಾಹನಗಳ ಫ್ರಂಟ್ ಸೈಡ್ ನಿಂದ ಎಂದಿಗೂ ಬೈಕ್ ಡ್ರೈವ್ ಮಾಡಬೇಡಿ! ಯಾಕೆ? ನೋಡಿ ಈ ವೀಡಿಯೋ.

ಪಟ್ಟಣಗಳಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ರಸ್ತೆಗಳ ಅಗಲತೆ ಮಾತ್ರ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿನನಿತ್ಯ ಪಟ್ಟಣಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಜೊತೆಗೆ ಈ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಮಾತ್ರ ಸಾಕಷ್ಟು ಆಗುತ್ತಿವೆ. ಅದರಲ್ಲೂ ದೊಡ್ಡ ವಾಹನಗಳಿಂದ ಚಿಕ್ಕ ವಾಹನಗಳಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇಲ್ಲಿ ಚಿಕ್ಕ ವಾಹನಗಳ ಅಥವಾ ಬೈಕ್ ಸವಾರರ ಜೀವಕ್ಕೆ ತುಂಬಾ ಅಪಾಯವಿರುತ್ತದೆ. ಈಗ ಇದೇ ರೀತಿಯ ಒಂದು ಅಪಘಾತವನ್ನು ಈ ವಿಡಿಯೋದಲ್ಲಿ ನೀವು ನೋಡಲಿದ್ದೀರಿ.

ಪ್ರಸ್ತುತ ಘಟನೆಯಲ್ಲಿ ಹುಡುಗಿಯೊಬ್ಬಳು ತನ್ನ ಸ್ಕೂಟಿ ತೆಗೆದುಕೊಂಡು ದೊಡ್ಡದಾದ ಟ್ರಕ್ಕಿನ ಮುಂದುಗಡೆ ನಿಂತಿದ್ದಾಳೆ. ಅವಳು ಅಲ್ಲಿ ನಿಂತದ್ದು ಟ್ರಕ್ಕಿನ ಡ್ರೈವರ್ ಗೆ ಸ್ವಲ್ಪವೂ ಕಾಣಿಸಿಲ್ಲ. ಟ್ರಾಫಿಕ್ ಸಡಿಲಿಸದ ನಂತರ ಟ್ರಕ್ಕಿನ ಡ್ರೈವರ್ ಯಾವುದೇ ವಿಚಾರ ಮಾಡದೇ ಮತ್ತು ತನ್ನ ವಾಹನದ ಮುಂದೆ ಯಾರು ಇರಲಿಕ್ಕಿಲ್ಲ ಎಂಬ ಭಾವನೆಯಿಂದ ಹಾಗೆಯೇ ತನ್ನ ವಾಹನವನ್ನು ಚಲಾಯಿಸಿದ್ದಾನೆ. ಆಗ ಸ್ಕೂಟಿ ಚಲಿಸುತ್ತಿರುವ ಯುವತಿ ಟ್ರಕ್ಕಿನ ಕೆಳಗಡೆಯೇ ಸಿಕ್ಕು ಬೀಳುತ್ತಾಳೆ. ಟ್ರಕ್ ಚಾಲಕ ಹಾಗೆಯೇ ತನ್ನ ವಾಹನ ನಡೆಸುತ್ತಾನೆ. ಇದರಲ್ಲಿ ಯುವತಿಯ ಅದೃಷ್ಟ ತುಂಬಾ ಚೆನ್ನಾಗಿತ್ತು, ಬರೀ ವಾಹನ ಜಖಂ ಹೊಂದಿದೆ ಆದರೆ ಯುವತಿಗೆ ಮಾತ್ರ ಯಾವುದೇ ರೀತಿಯ ಸೀರಿಯಸ್ ಗಾಯ ಅಥವಾ ಪೆಟ್ಟು ತಗುಲಿಲ್ಲ. ಟ್ರಕ್ ಆಕೆಯ ಮೇಲಿಂದ (ಅಂತರದಿಂದ) ಸರಿದು ಹೋದ ನಂತರ ಯುವತಿ ಬೇಗನೆ ಎದ್ದು ಬದಿಗೆ ಸರಿದಿದ್ದಾಳೆ. ಅದಕ್ಕೆ ಹೇಳುವದು ವಾಹನ ನಡೆಸುವಾಗ ವಿಶೇಷವಾಗಿ ಟ್ರ್ಯಾಫಿಕ್ ನಲ್ಲಿ ಸಿಕ್ಕಾಗ ದೊಡ್ಡ ದೊಡ್ಡ ವಾಹನಗಳ ಮುಂದೆ ಪುಟ್ಟ ವಾಹನಗಳನ್ನು ತೆಗೆದುಕೊಂಡು ಹೋಗುವಾಗ ತುಂಬಾ ಗಮನವಿರಬೇಕು. ಅಷ್ಟೇ ಅಲ್ಲ ಹೆಚ್ಚಾಗಿ ಅಂತ ವಾಹನಗಳ ಬದಿಯಿಂದಲೇ ಚಲಾಯಿಸುತ್ತ ಹೋಗಬೇಕು.

ವಿಡಿಯೋ ನೋಡಿ