ತಾನು ಕೆಲಸಕ್ಕೆ ಹೋಗುವಾಗ ಬರುವಾಗ ಮಗುವನ್ನು ಹೊತ್ತುಕೊಂಡು ಹೋಗದೆ ಆಗದಿದ್ದಾಗ ಈ ತಾಯಿ ಮಾಡಿದಳು ದೇಶಿ ಜುಗಾಡ್!! ನೋಡಿ ವಿಡಿಯೋ….

ಮಗುವಿನ ಹುಟ್ಟಿನಿಂದ ಹಿಡಿದು ಅದು ದೊಡ್ಡದಾಗುವವರೆಗೂ ತಾಯಿಯ ಪ್ರೀತಿ, ಕಾಳಜಿ ನೆರಳಿನಂತೆ ಸದಾ ಮಗುವಿಗೆ ಬೆಂಬಲವಾಗಿ ನಿಂತಿರುತ್ತದೆ. ಮಗುವಿನ ಮೊದಲ ಗುರು ತಾಯಿಯೇ ಆಗಿರುತ್ತಾಳೆ. ಅದಕ್ಕೆ ಮಾತನಾಡಲು, ಆಡಲು ಹಿಡಿದು ಅನೇಕ ಚಟುವಟಿಕೆಗಳನ್ನು ಮೊದಲು ತಾಯಿಯೇ ಕಲಿಸುತ್ತಾಳೆ. ಹೀಗಿರುವಾಗ ಮಗು ಪ್ರತಿಯೊಂದನ್ನೂ ತಾಯಿಗೆ ಅನುಕರಣೆ ಮಾಡುತ್ತದೆ. ಮಗು ಸಾಧಾರಣವಾಗಿ 8 ರಿಂದ 9 ತಿಂಗಳ ನಂತರ ಮಾತನಾಡಲು ಶುರು ಮಾಡುತ್ತದೆ. ಕೆಲವು ಮಕ್ಕಳು ಸ್ವಲ್ಪ ನಿಧಾನ ಗತಿಯಿಂದ ಮಾತನಾಡಲು ಕಲಿತರೂ ವರ್ಷಕ್ಕೆ ಹೆಚ್ಚು ಕಡಿಮೆ ಕಲಿತುಕೊಳ್ಳುತ್ತವೆ. ಆದರೆ ಮಕ್ಕಳು ಬೇಗನೆ ಮಾತು ಕಲಿತರೆ ಪೋಷಕರಿಗೆ ಅದಕ್ಕಿಂತ ಸಂತೋಷ ಬೇರೆಯಾಗಿರುವದಿಲ್ಲ. ಅದರಲ್ಲೂ ತಾಯಿಗೆ ಆಗುವ ಸಂತೋಷ ಅಷ್ಟಿಟ್ಟಲ್ಲ. ಅದು ವ್ಯಕ್ತ ಮಾಡಲು ಶಬ್ದಗಳು ಕಡಿಮೆ ಬೀಳುತ್ತವೆ.

ಸದ್ಯಕ್ಕೆ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ತಾಯಿ ದಿನಾಲೂ ತನ್ನ ಮನೆಯಿಂದ ಕೆಲಸ ಮಾಡಲು ಬಹಳಷ್ಟು ದೂರ ಹೋಗಬೇಕಾದ ಪರಸ್ಥಿತಿ ಬರುತ್ತದೆ. ಆದರೆ ತಾಯಿ ದಿನಾಲೂ ತನ್ನ ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡು ಹೋಗುತ್ತಿದ್ದಳು. ಆದರೆ ದಿನದಿಂದ ದಿನಕ್ಕೆ ಹೋಗುತ್ತಿದ್ದಂತೆಯೇ ಆಕೆಗೆ ಕಷ್ಟವಾಗತೊಡಗಿತು ಆಗ ಅವಳು ಒಂದು ಯೋಜನೆ ಮಾಡಿದಳು. ಅದೇನೆಂದರೆ ಒಂದು ಸೈಕಲ್ ತಗೆದುಕೊಂಡು ಅದರ ಮೇಲೆ ಮಗುವನ್ನು ಕರೆದುಕೊಂಡು ಹೋಗಬೇಕು ಎಂದು ವಿಚಾರ ಮಾಡಿದಳು. ಆದರೆ ಪುಟ್ಟ ಮಗು ಸೈಕಲ್ ಮೇಲೆ ಹೇಗೆ ಕುಳಿತುಕೊಳ್ಳುವದು ಎಂದು ಮತ್ತೆ ಒಂದು ಐಡಿಯಾ ಮಾಡಿದಳು. ಅದೇನೆಂದರೆ ಸೈಕಲ್ ಹಿಂದಿರುವ ಕ್ಯಾರಿಯರ್ ಮೇಲೆ ಒಂದು ಸಣ್ಣದಾದ ಖುರ್ಚಿಯನ್ನು ಕಟ್ಟಿದಳು. ಅದರ ಮೇಲೆ ಮಗುವನ್ನು ಕೂಡಿಸಿಕೊಂಡು ತನಗೆ ಎಲ್ಲಿ ಬೇಕಾದರೂ ಸಹ ಆ ಮಗುವನ್ನು ಸರಾಗವಾಗಿ ಕರೆದುಕೊಂಡು ಹೋಗುತ್ತಿದ್ದಾಳೆ. ನಿಜವಾಗಿಯೂ ತಾಯಿ ತನ್ನ ಮಗುವಿಗಾಗಿ ಏನನ್ನು ಸಹ ಮಾಡಲು ಸದಾ ತಯಾರಾಗಿರುತ್ತಾಳೆ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ.

ವಿಡಿಯೋ ನೋಡಿ

 

View this post on Instagram

 

A post shared by 💫 (@vyshak_rx)

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ vyasak_rx ಎಂಬ ಹೆಸರಿನ ಯುಜರ್ಸ್ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಎರಡು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಡಿಯೋವನ್ನು ಲೈಕ್ ಮಾಡಿದ್ದಾರೆ. ಅದೆಷ್ಟೋ ನೆಟ್ಟಿಗರು ಈ ತಾಯಿಯ ಕೌಶಲ್ಯದ ಕುರಿತು ಹಾಡಿ ಹೊಗಳಿದ್ದಾರೆ.