ಬೋನಿನಲ್ಲಿದ್ದ ಸಿಂಹಕ್ಕೆ ವ್ಯಕ್ತಿ ನೀಡುತ್ತಿದ್ದ ಕಿರುಕುಳ; ಕ್ಷಣದಲ್ಲೇ ಸಿಂಹ ಕಲಿಸಿತು ವ್ಯಕ್ತಿಗೆ ಸದಾ ನೆನಪಿನಲ್ಲಿಡುವಂಥ ಪಾಠ..!

ಹೆಚ್ಚಾಗಿ ಪ್ರಾಣಿಗಳು ತಮ್ಮಷ್ಟಕ್ಕೆ ತಾವಿರುತ್ತವೆ. ತಾವಾಗಿಯೇ ಯಾರ ಗೋಜಿಗೂ ಹೋಗುವುದಿಲ್ಲ. ಪ್ರಾಣಿಗಳು ಹಸಿವಿಲ್ಲದೆ ಇದ್ದಾಗ ಅನಾವಶ್ಯಕವಾಗಿ ಬೇರೆ ಪ್ರಾಣಿಗಳ ಬೇಟೆಯೂ ಆಡುವುದಿಲ್ಲ. ಆದರೆ ಇಲ್ಲಿ ವಿಮನಸ್ಕ ಮನಸ್ಸಿನ ಮನುಷ್ಯನೊಬ್ಬ ಬೋನಿನಲ್ಲಿದ್ದ ಸಿಂಹಕ್ಕೆ ಧೈರ್ಯದಿಂದ ಒಂದೇ ಸವನೆ ಕಿರುಕುಳ ನೀಡುತ್ತಿದ್ದಾನೆ. ಸಿಂಹವು ಬೋನಿನಲ್ಲಿ ಇರುವುದರಿಂದ ವ್ಯಕ್ತಿ ಬಿಂದಾಸ್ ಆಗಿ ಅದಕ್ಕೆ ಕೆಣಕುತ್ತಿದ್ದಾನೆ. ಸಿಂಹಕ್ಕೆ ಒಮ್ಮೆ ಕಣ್ಣಿಗೆ ಚುಚ್ಚು, ಒಮ್ಮೆ ಮುಖಕ್ಕೆ ಚುಚ್ಚು, ಅದರ ಬಾಯಿಯಲ್ಲಿ ಬೆರಳು ಹಾಕು, ಅದರ ಮುಂದೆ ಕೂಗು ಹೀಗೆ ನಿರಂತರವಾಗಿ ಮಾಡುತ್ತಿದ್ದಾನೆ. ಇದಕ್ಕೆ ಸಿಂಹವು ಸಹ ಬೇಸತ್ತು ಈತನಿಗೆ ಸರಿಯಾಗಿ ಪಾಠ ಕಲಿಸುವ ಒಂದೇ ಒಂದು ಅವಕಾಶ ಹುಡುಕುವದರಲ್ಲಿತ್ತು.

ಮತ್ತೇನು ಆ ಅವಕಾಶ ಸಿಕ್ಕೇ ಬಿಟ್ಟಿತು. ವ್ಯಕ್ತಿ ಹಾಗೆಯೇ ಕಿರುಕುಳ ನೀಡಲು ಕೈ ಸ್ಟೀಲ್ ಜಾಳಿಗೆಯೊಳಗಿಂದ ಒಳಗೆ ಹಾಕಿದಾಗ ಸಿಂಹ ಸಮಯ ಸಾಧಿಸಿ ಬರೋಬ್ಬರಿ ಬೆರಳುಗಳನ್ನು ಬಲವಾಗಿ ಬಾಯಿಯಲ್ಲಿ ಹಿಡಿದೇ ಬಿಟ್ಟಿದೆ. ಆಗ ನೋಡಿ ವ್ಯಕ್ತಿಗೆ ಒಮ್ಮೆಲೆ ತನ್ನ ಪ್ಯಾಂಟ್ ತೊಯ್ದ ಅನುಭವವಾಗಿದೆ. ಕ್ಷಣದಲ್ಲಿ ಅಮ್ಮ, ಅಪ್ಪ, ಅಜ್ಜ, ಅಜ್ಜಿ ಎಲ್ಲರಿಗೂ ಒಂದೇ ಬಾರಿಗೆ ನೆನೆಸಿಕೊಂಡಿದ್ದಾನೆ ವ್ಯಕ್ತಿ.

ವ್ಯಕ್ತಿ ಏನೇ ಮಾಡಿದರೂ ಎಷ್ಟೇ ಬೊಬ್ಬೆ ಇಟ್ಟರೂ ಸಿಂಹದ ಬಾಯಿಯಿಂದ ತನ್ನ ಕೈಬೆರಳುಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಯಾಕಾದರೂ ಈ ರೀತಿ ಮಾಡಲು ಮುಂದಾದೇನು ಎಂಬ ಪಶ್ಚಾತ್ತಾಪ ವ್ಯಕ್ತಿಗೆ ಆಗಿರಬೇಕು. ಆತ ಎಷ್ಟೇ ಲಾಗ ಹಾಕಿದರೂ ಸಿಂಹ ಮಾತ್ರ ಆತನ ಕೈಬೆರಳನ್ನು ಬಿಡಲಿಕ್ಕೆ ತಯಾರಿರಲಿಲ್ಲ. ಸಿಂಹಕ್ಕೆ ಕಿರುಕುಳ ನೀಡಿದ್ದು ಮಾತ್ರ ವ್ಯಕ್ತಿಗೆ ಚೆನ್ನಾಗಿಯೇ ದುಬಾರಿ ಬಿದ್ದಿತ್ತು. ಸಾಕಷ್ಟು ಪ್ರಯತ್ನದ ನಂತರ ವ್ಯಕ್ತಿ ತನ್ನ ಕೈಬೆರಳನ್ನು ಬಿಡಿಸಿಕೊಳ್ಳಲು ಯಶಸ್ವಿಯಾದ. ಜಾಳಿಗೆಗೆ ಕಾಲಿನ ಜೋರು ಹಚ್ಚಿ ಕೈಬೆರಳನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಿರುವಾಗ ಸಿಂಹ ಬಾಯಿಯಲ್ಲಿ ಹಿಡಿದ ಬೆರಳು ಬಿಟ್ಟಾಗ ಇತ್ತ ವ್ಯಕ್ತಿ ಒಮ್ಮೆಲೆ ಜೋರಾಗಿ ನೆಲಕ್ಕೆ ಬಿದ್ದಿದ್ದಾನೆ.

ವಿಡಿಯೋ ನೋಡಿ

ಈ ರೀತಿ ತಿಳಿದವರು ಮಾಡುವ ಕೆಲಸವಲ್ಲ. ಸುಮ್ಮನೆ ಮೂಕ ಪ್ರಾಣಿಗಳಿಗೆ ಕಿರುಕುಳ ನೀಡುವುದು ಸರಿಯಲ್ಲ. ಒಮ್ಮೆ ಅವುಗಳಿಗೆ ಸಿಟ್ಟು ಬಂದರೆ ಪ್ರಾಣವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ಮೂಲಕ ಶೇರ್ ಮಾಡಲಾಗಿದೆ.