Amazon ನಲ್ಲಿವೆ ಕಡಿಮೆ ಬೆಲೆಯಲ್ಲಿ Rechargeable LED Bulbs; ಕರೆಂಟ್ ಹೋದಾಗ್ಯೂ ಮನೆಯಲ್ಲಿ ಬೆಳಕು.
ಕರೆಂಟ್ ಹೋಗೋದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಕೆಲವು ಪಟ್ಟಣಗಳಲ್ಲಿಯೇ ಈ ಸಮಸ್ಯೆ ಇರುವಾಗ ಇನ್ನು ಹಳ್ಳಿಗಳಲ್ಲಿ ಈ ಬಗ್ಗೆ ಕೇಳುವವರೇ ಇರುವುದಿಲ್ಲ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಎಲೆಕ್ಟ್ರಿಕ್ ಮೇಲೆ ನಡೆಯುವ ಎಲ್ಲ ವಸ್ತುಗಳು ಉದಾಹರಣೆಗೆ ಫ್ರೀಜ್, ಕೂಲರ್, ಎಸಿ, ಫ್ಯಾನ್ ಎಲ್ಲವೂ ನಿಂತುಬಿಡುತ್ತವೆ. ಇದಕ್ಕಾಗಿ ಜನರು ಇನ್ವರ್ಟರ್ ಯೂಸ್ ಮಾಡುತ್ತಾರೆ. ಆದರೆ ಎಲ್ಲರ ಮನೆಯಲ್ಲಿಯೂ ಇನ್ವರ್ಟರ್ ಇರುವುದಿಲ್ಲ. ಅಥವಾ ಇನ್ವರ್ಟರ್ ಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುವ ಮನಸ್ಸಿಲ್ಲದಿದ್ದರೆ ಈ ಉಪಾಯ ತುಂಬಾ ಒಳ್ಳೆಯದಾಗಿದೆ. ಇದಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ. ಅದರ ಬದಲಾಗಿ ಅಮೆಜಾನ್ನಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಉತ್ತಮವಾದ ರೀಚಾರ್ಜೆಬಲ್ ಬಲ್ಬುಗಳನ್ನು ಖರೀದಿಸಬಹುದು. ಕರೆಂಟ್ ಹೋದಾಗ ಈ ಬಲ್ಬುಗಳು ಬೆಳಕನ್ನು ನೀಡುವ ಕೆಲಸ ತನ್ನಂತಾನೆ ಮಾಡುತ್ತಿರುತ್ತವೆ.
ಇಲ್ಲಿ ದೊರೆಯುವ ಫಿಲಿಪ್ಸ್, ಸಿಸ್ಕಾ, ದೇಸಿ ದಿಯಾ, ಫಿಲ್ಲೋ, ಹಲೋನಿಕ್ಸ್, ವಿಪ್ರೋ ಹೀಗೆ ಪ್ರತಿ ಕಂಪನಿಯ ಬಲ್ಬುಗಳು ಸುಮಾರು 2200 mAH ನಿಂದ ಹಿಡಿದು ಇದಕ್ಕೂ ಮೇಲ್ಪಟ್ಟು ಬ್ಯಾಟರಿ ಶಕ್ತಿಯನ್ನು ಹೊಂದಿವೆ. ಈ ಪ್ರತಿ ಬಲ್ಬ್ ಗಳು ಕಡಿಮೆ ಎಂದರೆ 4 ಗಂಟೆಗಳ ಬ್ಯಾಟರಿ ಬ್ಯಾಕ್ ಅಪ್ ಹೊಂದಿವೆ. ಪ್ರೈಸ್ ಬಗ್ಗೆ ಹೇಳಬೇಕಾದರೆ 165 ರೂಪಾಯಿಗಳಿಗೆ ಹಿಡಿದು 500 ರೂಪಾಯಿಗಳ ವರೆಗೆ ತುಂಬಾ ಒಳ್ಳೆಯ ಬಲ್ಬ್ ಗಳು ಸಿಗುತ್ತವೆ. ಇದಕ್ಕೂ ಹೆಚ್ಚಿನ ಬೆಲೆಯಲ್ಲಿಯೂ ನಿಮಗೆ ಬೇಕಾದಂಥ ಒಳ್ಳೆಯ ಬಲ್ಬ್ ಗಳು ಲಭ್ಯವಿವೆ.
ಇಲ್ಲಿ ನಿಮಗೆ 8W, 9W, 12W, 14W, 15W, 18W 20W ಹೀಗೆ ನಿಮಗೆ ಬೇಕಾದ ವಿವಿಧ ವ್ಯಾಟ್ ಗಳಿಗೆ ಅನುಸರಿಸಿ ಖರೀದಿ ಮಾಡಬಹುದಾಗಿದೆ, ಅದು ಕೂಡ ಕಡಿಮೆ ಬೆಲೆಯಲ್ಲಿ.