ಮೆಟ್ರೋದಲ್ಲಿ ಪತ್ನಿಯ ಜೊತೆಗೆ ರಹಸ್ಯವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ ಪತಿ; ವೈರಲ್ ಆಯಿತು ವಿಡಿಯೋ! ಬಿತ್ತು ಲೈಕ್ ಗಳ ಸುರಿಮಳೆ!

ಮನಮುಟ್ಟುವ ಪ್ರೀತಿಯ ವಿಡಿಯೋ ಒಂದು ಈ ಅಂಕಣದಲ್ಲಿ ನೋಡಲಿದ್ದೀರಿ. ಈ ವಿಡಿಯೋ ನಿಮ್ಮ ಮನಸ್ಸನ್ನು 100% ಗೆಲ್ಲಲಿದೆ. ಮ್ಯಾಥ್ಯೂ ಬೇನಿ ಹೆಸರಿನ ಇನ್ಸ್ಟಾಗ್ರಾಮ್ ಯೂಸರ್ ಒಬ್ಬರು ಹಾರ್ಟ್ ಇಮೋಜಿಯ ಜೊತೆಗೆ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಂತದ್ದೇನಿದೆ ಎಂದು ನೀವು ವಿಚಾರ ಮಾಡಬಹುದು. ಈ ಪುಟ್ಟ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಜನರಿಂದ ತುಂಬಿದ ಮೆಟ್ರೋದಲ್ಲಿ ತನ್ನ ಪತ್ನಿಗೆ ಹೇಳದೆ ರಹಸ್ಯವಾಗಿದೆ ಒಂದು ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿದ್ದಾನೆ. ಈ ದೃಶ್ಯ ನೋಡಿದವರೆಲ್ಲರ ಮನಸ್ಸು ಗೆಲ್ಲುತ್ತಿದೆ.

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದಂಪತಿಗಳಿಬ್ಬರೂ ಮೆಟ್ರೋದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯು ತನ್ನ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಳ್ಳುತ್ತಿದ್ದಳು. ಆಕೆಯ ಪತಿ ಅದೇ ಸಮಯದಲ್ಲಿ ಆಕೆಗೆ ಹೇಳದೆ ಕೇಳದೆ ರಹಸ್ಯವಾಗಿ ತಮ್ಮಿಬ್ಬರ ಸೆಲ್ಫಿ ಯೊಂದನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾನೆ. ಈ ಕೆಲಸದಲ್ಲಿ ಆತ ಯಶಸ್ವಿಯೂ ಆಗುತ್ತಾನೆ. ನಮ್ಮ ಅನಿಸಿಕೆ ಪ್ರಕಾರ ನಿಮಗೂ ಸಹ ಈ ವಿಡಿಯೋ ತುಂಬಾ ಕ್ಯೂಟ್ ಎನಿಸಬಹುದು.

ವಿಡಿಯೋ ನೋಡಿ

 

View this post on Instagram

 

A post shared by MANO 🥀 (@mr.mathew_benny)

ಈ ವಿಡಿಯೋ ಆನ್ಲೈನ್ ಪೋಸ್ಟ್ ಮಾಡಿದ ನಂತರ ಇಲ್ಲಿಯವರೆಗೆ 9 ಮಿಲಿಯನ್ ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದಿದೆ. ನೇಟಿಜನ್ಸ್ ಗಳು ವ್ಯಕ್ತಿಯ ಈ ಪ್ರೀತಿಯ ಚೇಷ್ಟೆಯನ್ನು ನೋಡಿ ಖುಷಿಪಟ್ಟಿದ್ದಾರೆ. ಕಮೆಂಟ್ ಸೆಕ್ಷನ್ ನಲ್ಲಿ ಈ ಬಗ್ಗೆ ಪ್ರೀತಿಯ ಹಾಗೂ ಅಷ್ಟೇ ಮಜವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಯೂಸರ್ ‘ಈ ಪ್ರೀತಿ ಕೊನೆಯವರೆಗೆ ಇರಲಿ’, ಎಂದರೆ ಇನ್ನೊಬ್ಬ ‘ಈ ಪ್ರೀತಿಯನ್ನು ಅನುಭವಿಸಿಕೊಳ್ಳಿ’ ಎಂದಿದ್ದಾನೆ.