ಗೋಲ್ ಕೀಪರ್ ಆಗಬೇಕಾದ ಗೋಲ್ ಕೊನೆ ಕ್ಷಣದಲ್ಲಿ ತಪ್ಪಿಸಿದ ಮಿಂಚಿನ ವೇಗದಲ್ಲಿ! ಸಖತ್ ಎಫೋರ್ಟ್ ನ ಸೂಪರ್ ವಿಡಿಯೋ!
ಭಾರತದಲ್ಲಿ ಕ್ರಿಕೆಟ್ ಆಟವೇ ಅಗ್ರಗಣ್ಯವಾಗಿದೆ. ಈ ದೇಶದ ರಾಷ್ಟ್ರೀಯ ಆಟ ಹಾಕಿ ಇದ್ದರೂ ಕ್ರಿಕೆಟ್ ಆಟವನ್ನೇ ಆಡುವವರು, ಇಷ್ಟಪಡುವವರು, ನೋಡುವವರು ಹೆಚ್ಚಾಗಿದ್ದಾರೆ. ಇನ್ನು ಪುಟ್ಬಾಲ್ ಆಟವನ್ನು ಅಷ್ಟಾಗಿ ಇಷ್ಟಪಡುವುದು ದೂರದ ಮಾತು.
ಆದರೂ ಭಾರತದಲ್ಲಿ ಈಗೀಗ ಕೆಲವು ಫುಟ್ಬಾಲ್ ಕ್ಲಬ್ ಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿವೆ. ಹೀಗಾಗಿ ಫುಟ್ಬಾಲ್ ಕಡೆಗೂ ಪೋಷಕರ, ಮಕ್ಕಳ ಗಮನ ಹರಿಯುತ್ತಿದೆ. ಜಗತ್ತಿನಲ್ಲಿ ಮುಖ್ಯವಾಗಿ ಫುಟ್ಬಾಲ್ ಆಟವನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗೆ ನೋಡಲಾಗಿ ಪುಟ್ಬಾಲ್ ಆಟ ಇದು ಹೆಚ್ಚು ಸಾಮರ್ಥ್ಯದ ಆಟವಾಗಿದೆ. ಜಗತ್ತಿನ ಅನೇಕ ದೇಶಗಳು ಫುಟ್ಬಾಲ್ ಆಟವನ್ನು ತುಂಬಾ ಜೋಷ್ ದಿಂದ ಆಡುತ್ತವೆ. ಅದಕ್ಕೆ ಫುಟ್ಬಾಲ್ ಆಟದಲ್ಲಿಯ ಗೋಲ್ಕೀಪರ್ ನ ಒಂದು ವಿಶೇಷ ದೃಶ್ಯವನ್ನು ಈ ಲೇಖನದ ವಿಡಿಯೋದಲ್ಲಿ ನೋಡಲಿದ್ದೀರಿ.
ವಿಡಿಯೋದಲ್ಲಿ ಕಂಡುಬರುವ ಹಾಗೆ ಆಟಗಾರನೊಬ್ಬ ತುಂಬಾ ಕೌಶಲ್ಯದಿಂದ ಫುಟ್ಬಾಲ್ ತಳ್ಳುತ್ತಾ ಗೋಲ್ ಮಾಡುವ ಸಲುವಾಗಿ ಹೋಗುತ್ತಿದ್ದಾನೆ. ಆತನಿಗೆ ಸಹಆಟಗಾರರು ಮೂರು ಜನ ಕವರ್ ಮಾಡುತ್ತಿದ್ದಾರೆ. ಗೋಲ್ ಏರಿಯಾದ ಹತ್ತಿರ ಹೋದನಂತರ ಆಟಗಾರ ಗೋಲ್ಕೀಪರ್ ನನ್ನು ನೋಡಿ ತನ್ನ ಮೂವರು ಸಹ ಆಟಗಾರರ ಕಡೆಗೆ ಬಾಲ್ ತಳ್ಳುತ್ತಾನೆ. ಆ ಸಂದರ್ಭದಲ್ಲಿ ಗೋಲ್ಕೀಪರ್ ಬಾಲ್ ಹಿಡಿಯಲು ತುಂಬಾನೇ ಮುಂದೆ ಬಂದಿರುತ್ತಾನೆ. ಇದನ್ನು ಗಮನಿಸಿದ ಆಟಗಾರ ತನ್ನ ಸಹ ಆಟಗಾರರ ಕಡೆಗೆ ಬಾಲ್ ತಳ್ಳುತ್ತಾನೆ. ಆಗ ಸಹ ಆಟಗಾರನು ಗೋಲ್ ಕೀಪರ್ ಮುಂದೆ ಹೋಗಿದ್ದನ್ನು ಕಂಡು ತುಂಬಾ ಈಜಿಯಾಗಿ ಗೋಲ್ ಆಗುತ್ತದೆ ಎಂಬ ಆತ್ಮ ವಿಶ್ವಾಸದಿಂದ ಬಾಲ್ ಗೋಲ್ ಕಡೆಗೆ ತಳ್ಳುತ್ತಾನೆ. ಇನ್ನೇನು ಗೋಲ್ ಸಹ ಆಗಿಯೇ ಬಿಡುತ್ತದೆ ಎನ್ನುವಷ್ಟರಲ್ಲಿ ಗೋಲ್ ಕೀಪರ್ ಸೆಕೆಂಡಿನ 10 ನೆಯ ಭಾಗದ ಕೊನೆಯ ಕ್ಷಣದಲ್ಲಿ ಡ್ರೈವ್ ಮಾಡಿ ಬಾಲ್ ಗೋಲ್ ನಲ್ಲಿ ಹೋಗುವದನ್ನು ತಪ್ಪಿಸಿದ. ಗೋಲ್ ಕೀಪರ್ ನ ಈ ಎಫೋರ್ಟ್ ನಿಜಕ್ಕೂ ಬೆರಳು ಕಚ್ಚುವಂಥದ್ದು ಆಗಿತ್ತು.
ನೋಡಿ ಈ ಅದ್ಭುತವಾದ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಸ್ಕಿಲರ್ ಗೋಲ್ 90 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 9.6 ಮಿಲಿಯನ್ ಜನರು ನೋಡಿದ್ದಾರೆ ಮತ್ತು ಸುಮಾರು 4 ಲಕ್ಷ ಜನರು ಲೈಕ್ ಮಾಡಿದ್ದಾರೆ.