ವಿಶ್ವದ ಅಗ್ರ ಶ್ರೀಮಂತ ಎಲೆನ್ ಮಸ್ಕ್ ಈ ಭಾರತೀಯ ಹುಡುಗನನ್ನು 400 ಬಾರಿ ಮೆನ್ಶನ್ ಮಾಡಲು ಕಾರಣವೇನು?
ಎಲೆನ್ ಮಸ್ಕ್ ಜಗತ್ತಿನ ಅಗರ್ಭ ಶ್ರೀಮಂತ ವ್ಯಕ್ತಿ. ಇವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ನಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ವಿಶೇಷವೆಂದರೆ ಈ ಸೈಟ್ನಲ್ಲಿ ಅವರು ಸಾಕಷ್ಟು ಜನರಿಗೆ ರಿಪ್ಲಾಯ್ ಸಹಿತ ನೀಡುತ್ತಾರೆ. ಆದರೆ ಒಬ್ಬ ಭಾರತೀಯ ಹುಡುಗನಿಗೆ ಸುಮಾರು 400 ಕ್ಕಿಂತ ಹೆಚ್ಚು ಬಾರಿ ರಿಪ್ಲಾಯ್ ನೀಡಿದ್ದಾರೆ.

ಈ ಭಾರತೀಯ ವ್ಯಕ್ತಿಯ ಹೆಸರು ಪ್ರಣಯ್ ಪಟೊಲೆ. ಮೊದಲ ಬಾರಿಗೆ ಮಸ್ಕ್ ಅವರು ಈತನಿಗೆ 2018 ರಲ್ಲಿ ಉತ್ತರಿಸಿದ್ದರು. ಜನವರಿ 2018 ರಲ್ಲಿ ಪ್ರಣಯ್ ಪುಣೆಯಲ್ಲಿ ಸಾಫ್ಟ್ವೇರ್ ಎಂಜಿನಿಯರಿಂಗ್ ಕಲಿಯುತ್ತಿದ್ದರು. ಮಳೆಯಲ್ಲಿ ಕಾರಿನಲ್ಲಿ ಬರುವ ನೀರಿನ ಸಂದರ್ಭವನ್ನು ಆಯ್ದು ಆಗ ಪ್ರಣಯ್ ಟ್ವೀಟ್ ಮಾಡಿದ್ದರು. ಆ ಟ್ವೀಟ್ ನಲ್ಲಿ ಇಷ್ಟೊಂದು ಟೆಕ್ನಾಲಜಿ ಮುಂದುವರೆದಿದ್ದರೂ ಈ ಸಮಸ್ಯೆಗೆ ಪರಿಹಾರ ಇನ್ನೋವರೆಗೂ ಯಾಕೆ ಸಿಕ್ಕಿಲ್ಲ ಎಂದಿದ್ದರು. ಈ ಟ್ವೀಟ್ ಗೆ ಎಲೆನ್ ಮಸ್ಕ್ ಅವರು ಉತ್ತರ ನೀಡಿದ್ದರು.
23 ವರ್ಷದ ಪ್ರಣಯ್ ಹೇಳುತ್ತಾರೆ, ನನಗೆ ಅವರು ರಿಪ್ಲಾಯ್ ನೀಡಿದಾಗ ಇದು ನಂಬಲಿಕ್ಕೂ ಆಗುತ್ತಿರಲಿಲ್ಲ. ಒಂದು ಕ್ಷಣ ನಾನು ವಿಶ್ವದ ಶ್ರೀಮಂತ ವ್ಯಕ್ತಿಯ ಜೊತೆಗೆ ಅಲ್ಲ, ಎಲ್ಲಿಯೋ ದೂರದ ದೇಶದಲ್ಲಿದ್ದ ಮಿತ್ರನ ಜೊತೆಗೆ ಮಾತನಾಡುತ್ತಿದ್ದೇನೆ ಎನ್ನುವಂತೆ ಭಾಸವಾಗುತ್ತಿತ್ತು. ಸದ್ಯ ಇದೆಲ್ಲ ತುಂಬಾ ನ್ಯಾಚುರಲ್ ಎನಿಸುತ್ತಿದೆ.

ಬಜ್ ಫೀಡ್ ನೀಡಿದ ರಿಪೋರ್ಟ್ ಪ್ರಕಾರ, ಪ್ರಣಯ್ ಅವರ ಟ್ವಿಟರ್ ಹ್ಯಾಂಡಲ್ ಹೊರತಾಗಿ ಮಸ್ಕ್ ಅವರು @Erdayastronaut ಮತ್ತು @teslaownersSV ಟ್ವಿಟರ್ ಯೂಸರ್ ಜೊತೆಗೆ ತುಂಬಾ ಹೆಚ್ಚು ಮಾತನಾಡುತ್ತಾರೆ. ಪ್ರಣಯ್ ಗೆ ಮಸ್ಕ್ ಇಲ್ಲಿಯವರೆಗೆ 400 ಕ್ಕಿಂತ ಹೆಚ್ಚು ಬಾರಿ ಟ್ವಿಟರ್ನಲ್ಲಿ ಉತ್ತರಿಸಿದ್ದಾರೆ.

ಮಾರ್ಚ್ 26 ರಂದು ಪ್ರಣಯ್ ಅವರು, ನೀವು ಹೊಸ ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಏನಾದರೂ ತಯಾರಿಸುವ ವಿಚಾರವನ್ನು ಹೊಂದಿದ್ದೀರಾ? ಎಂದು ಪ್ರಶ್ನೆ ಕೇಳಿದ್ದರು. ಅದರಲ್ಲಿ open source algorithm ಮೇಲೆ ಆಧಾರಿತವಾದ, ಫ್ರೀ ಸ್ಪೀಚ್ ಗೆ ಹೆಚ್ಚಿನ ಪ್ರಾಯೋರಿಟಿ ಇರುವ ಹಾಗೂ ಅಲ್ಲಿ ಪ್ರೋಪಗೆಂಡಾ ತುಂಬಾ ಕಡಿಮೆ ಇರಬೇಕು ನನಗನಿಸುವ ಮಟ್ಟಿಗೆ ಇಂಥದ್ದೊಂದು ಪ್ಲಾಟ್ ಫಾರ್ಮ್ ನ ಅವಶ್ಯಕತೆ ಇದೆ ಎಂದು ತಮ್ಮ ಮನಸ್ಸಿನ ಭಾವನೆಯನ್ನು ತಿಳಿಸಿದ್ದರು.
ಇದಕ್ಕೆ ಉತ್ತರವಾಗಿ ಮಸ್ಕ್ ಅವರು ತಮ್ಮ ಉತ್ತರದಲ್ಲಿ ಈ ವಿಷಯಕ್ಕನುಸರಿಸಿ ‘ನಾನು ತುಂಬಾ ಗಂಭೀರತೆಯಿಂದ ವಿಚಾರ ಮಾಡಲಿದ್ದೇನೆ’ ಎಂದಿದ್ದಾರೆ.
ಇಂಜಿನಿಯರಿಂಗ್, ಟೆಸ್ಲಾ, ರಾಕೆಟ್, ಸ್ಪೇಸ್ ಎಕ್ಸ್ ರೀತಿಯ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಣಯ್ ಮತ್ತು ಮಸ್ಕ್ ಇಬ್ಬರೂ ಯಾವತ್ತೂ ಮಾತನಾಡುತ್ತಿರುತ್ತಾರೆ. ಪ್ರಣಯ್ ಅವರು ಹೇಳುವ ಪ್ರಕಾರ ಎಷ್ಟೋ ಸಲ ಡೈರೆಕ್ಟ್ ಮೆಸೇಜ್ ಮುಖಾಂತರವೂ ಮಸ್ಕ್ ಜೊತೆಗೆ ಮಾತಾಡುತ್ತೇನೆ ಎಂದಿದ್ದಾರೆ.

ರಿಪೋರ್ಟ್ ಪ್ರಕಾರ ಸದ್ಯ ಪ್ರಣಯ್ ಒಂದು ಕಂಪನಿಯಲ್ಲಿ ನೌಕರಿ ಮಾಡುವದನ್ನು ಬಿಟ್ಟು ಕೆಲಸಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಸದ್ಯಕ್ಕೆ ಅಮೆರಿಕೆಯ ಯೂನಿವರ್ಸಿಟಿ ಆಫ್ ಟೆಕ್ಸಾಸ್ ನಲ್ಲಿ ಮಾಸ್ಟರ್ ಆಫ್ ಸಾಯನ್ಸ್ ಇನ್ ಬಿಜಿನೆಸ್ ಏನಲಿಟಿಕ್ಸ್ ವ್ಯಾಸಂಗ ಮಾಡುತ್ತಿದ್ದಾರೆ.