ಏನ್ ಗುರು ಈ ನಾಯಿಯ ಓವರ್ ಆಕ್ಟಿಂಗ್, ಇದರ ಮುಂದೆ ಎಲ್ಲರ ಆಕ್ಟಿಂಗ್ ಜೀರೋ’ ಎಂದ ನೆಟ್ಟಿಗರು! ವಿಡಿಯೋ ನೋಡಿ…!!
ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಜಗತ್ತಿನಲ್ಲಿಯೇ ವಿಶ್ವಾಸಕ್ಕೆ ಪಾತ್ರವಾದ ಪ್ರಾಣಿಗಳಲ್ಲಿ ಮೊದಲ ನಂಬರ್ ನಾಯಿಯದೇ ಎಂದರೆ ತಪ್ಪಲ್ಲ. ಇದು ತುಂಬಾ ಜಾಣ ಪ್ರಾಣಿಯಾಗಿರುವುದರೊಂದಿಗೆ ತನ್ನ ಮಾಲೀಕನ ಜೊತೆಗೆ ಯಾವತ್ತೂ ನಿಷ್ಠೆಯಿಂದ ಇರುತ್ತದೆ. ಹೀಗಾಗಿ ಇದು ಮಾನವನ ನಿಜವಾದ ಮಿತ್ರನಾಗಿದೆ. ಇಂದು ಪೋಲೀಸರ ಕೈಲಾಗದ ಕೆಲಸ ನಾಯಿ ಮಾಡಿ ತೋರಿಸುತ್ತದೆ ಅಂದರೆ ಅಪರಾಧಿ ಎಲ್ಲಿದ್ದಾನೆ ಎಂಬುದು ಅಥವಾ ಸಂಶಯಾಸ್ಪದ ವ್ಯಕ್ತಿ ಯಾರೆಂಬುದು ನೋಡು ನೋಡುವಷ್ಟರಲ್ಲಿ ನಾಯಿ ಕಂಡು ಹಿಡಿಯುತ್ತದೆ.
ನಾಯಿಯ ಸಾಹಸದ ಎಷ್ಟೋ ವಿಡಿಯೋ ನಾವು ಸಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಆದರೆ ನಾಯಿಗಳು ಎಷ್ಟು ಜಾಣವಾಗಿರುತ್ತವೆಯೋ ಅಷ್ಟೇ ಕಪಟಸಹ ಆಗಿರುತ್ತವೆ ಅನ್ನೋದು ಎಲ್ಲರಿಗೂ ಗೊತ್ತು. ಕೆಲವೊಮ್ಮೆ ನಾಯಿ ತನಗೆ ಏನು ಆಗದೆ ರಸ್ತೆಯ ಮಧ್ಯದಲ್ಲಿ ಬಿದ್ದು ಹೋಗಿ ಬರೋ ವಾಹನಗಳಿಗೆ ಅಡ್ಡಿ ಮಾಡಿ ಕೊನೆಗೆ ಇದಕ್ಕೆ ಸಹಾಯ ಮಾಡಲು ಜನರು ಬಂದಾಗ ಅಲ್ಲಿಂದ ಎದ್ದು ಹೋಗಿರುವ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ನಾಯಿ ನಾಯಿಗಳ ಮದ್ಯೆ ಜಗಳವಾದಗ ಅಲ್ಲಿ ಕೆಲವೊಂದು ನಾಯಿಗಳು ಮಾಡಿರುವ ವಿಚಿತ್ರ ಕೃತ್ಯ ನೋಡಿದರೆ ತುಂಬಾ ನಗು ಬರುತ್ತದೆ.
ಪ್ರಸ್ತುತವಾಗಿ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ಆಕ್ಟಿಂಗ್ ಮಾಡುವದರಲ್ಲಿ ಮನುಷ್ಯನಿಗಿಂತ ನಾಯಿಯೇ ಶ್ರೇಷ್ಠವೆಂದು ನೀವೇ ಹೇಳುವಿರಿ. ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು, ಮೂರು ನಾಯಿ ಮರಿಗಳು ಜಗಳ ವಾಡುತ್ತಿರುತ್ತವೆ ಅವುಗಳಲ್ಲಿ ಒಂದು ಬಿಳಿ ನಾಯಿನರಿ ಸ್ವಲ್ಪ ದೊಡ್ಡದಿರುತ್ತೆ. ಉಳಿದ ಎರಡು ನಾಯಿಮರಿಗಳು ಚಿಕ್ಕದಿರಿತ್ತವೆ. ಈ ಎರಡು ಮರಿಗಳು ಸೇರಿಕೊಂಡು ಆ ದೊಡ್ಡ ಬಿಳಿ ನಾಯಿಮರಿಗೆ ಕಚ್ಚಲು ಹೋಗುತ್ತವೆ ಆದರೆ ಬಿಳಿ ನಾಯಿ ದೊಡ್ಡದಿದ್ದರಿಂದ ಇವೆರಡು ನಾಯಿಗಳನ್ನು ಓಡಾಡಿಸಿ ಕಚ್ಚುತ್ತದೆ. ಹೀಗಾಗಿ ಆ ಎರಡು ನಾಯಿಮರಿಗಳು ಹೌಹಾರಿ ಈ ನಾಯಿಯಿಂದ ತಪ್ಪಿಸಿಕೊಳ್ಳಲು ಕಾಲಿಗೆ ಬುದ್ದಿ ಹೇಳುತ್ತವೆ. ಆದರೂ ಸಹ ಈ ನಾಯಿ ಬಿಡದೆ ಅವುಗಳನ್ನು ಬೆನ್ನಟ್ಟಿ ಕಚ್ಚಲು ಹೋಗುತ್ತದೆ ಇದನ್ನು ಕಂಡು ಬಿಳಿ ನಾಯಿ ಮಾಲೀಕ ಅದರ ವಿಡಿಯೋ ರೆಕಾರ್ಡ್ ಮಾಡುತ್ತಿರುತ್ತಾನೆ. ಮಾಲೀಕ ಅಚಾನಕ್ಕಾಗಿ ನಾಯಿಯ ಎದುರು ಬಂದಾಗ ಈ ಬಿಳಿ ನಾಯಿ, ಆ ಎರಡು ಸಣ್ಣ ನಾಯಿಗಳು ತನಗೆ ಕಚ್ಚಿವೆ ಅನ್ನೋ ಹಾಗೆ ಹಲಬುತ್ತಾ ಕಾಲು ಮೇಲೆತ್ತಿ ತೋರುತ್ತದೆ. ಈ ನಾಯಿಯ ಆಕ್ಟಿಂಗ್ ನೋಡಿದರೆ ನೀವು ಸಹ ಆಶ್ಚರ್ಯ ಪಡುವಿರಿ.
ವಿಡಿಯೋ ನೋಡಿ.
View this post on Instagram