ಜೀವಕ್ಕೆ ಕುತ್ತು ಬಂದಾಗ ಒಂದು ಕೈ ನೋಡಿಯೇ ಬಿಡಬೇಕಾಗುತ್ತೆ; ಸಾಲಿಡ್ ಎಕ್ಸಾಂಪಲ್ ನೀಡಿದ ಕಾಡು ಹಂದಿ!

ವೈಲ್ಡ್ ಲೈಫ್ ಅಂದ್ರೆ ತನ್ನೊಡಲಲ್ಲಿ ಸದಾ ಹೊಸದು ಸದಾ ರೋಚಕತೆಯನ್ನು ತುಂಬಿಕೊಂಡ ಅದ್ಭುತ ಜಗತ್ತು. ಇಲ್ಲಿ ಕ್ಷಣ ಕ್ಷಣವೂ ವಿಚಿತ್ರದಿಂದ ಕೂಡಿರುತ್ತದೆ. ಇಲ್ಲಿರುವ ಕಾಡು ಪ್ರಾಣಿಗಳು ಹಸಿವಾದಾಗ ಇನ್ನೊಂದು ಜೀವಿಗೆ ಯಾವಾಗ ತಿಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಲಿ ಎಂದು ಹರಸಾಹಸ ಮಾಡುತ್ತಿರುತ್ತಿರುವಾಗ ಸಾಧು ಪ್ರಾಣಿಗಳು ಈ ಮೃಗಗಳಿಂದ ತಮ್ಮ ಜೀವ ಹೇಗೆ ಬದುಕೀತು ಎಂಬ ಪ್ಲಾನ್ ಮಾಡುತ್ತಾ ಕ್ಷಣ ಕ್ಷಣವೂ ಹೆದರಿ ತಮ್ಮ ಜೀವ ಉಳಿಸಿ ಕೊಳ್ಳುವದರಲ್ಲಿ ತೊಡಗಿರುತ್ತವೆ. ಈ ಪ್ರಾಣಿಗಳು ಬೇಟೆಯಾಡುವಾಗ ವೈಲ್ಡ್ ಲೈಫ್ ಫೋಟೋ ಗ್ರಾಫರ್ ಗಳ ಕ್ಯಾಮೆರಾದಲ್ಲಿ ತುಂಬಾ ವಿಶೇಷ ದೃಶ್ಯಗಳು ಸೆರೆಯಾಗುತ್ತವೆ. ಆ ಅದ್ಭುತ ದೃಶ್ಯಗಳು ಎಷ್ಟೋ ಸಲ ಮಾನವನಿಗೆ ಪಾಠದ ಜೊತೆಗೆ ಪ್ರೇರಣೆಯೂ ನೀಡುವದುಂಟು. ಈಗ ಇದೇ ರೀತಿಯ ಒಂದು ಸುಂದರ ದೃಶ್ಯ ನಿಮಗಾಗಿ ತಂದಿದ್ದೇವೆ.

ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ವೇಗದಲ್ಲಿ, ಬೇಟೆಯಲ್ಲಿ ಚತುರವಾದ ಪ್ರಾಣಿ ಚಿರತೆಯೊಂದು ಕಾಡುಹಂದಿಯ ಮೇಲೆ ಕಣ್ಣಿಟ್ಟು ಬೇಟೆಗಾಗಿ ಅದರ ಹಿಂದೆ ಓಡುತ್ತಿದೆ. ಕಾಡುಹಂದಿಯೂ ಸಹ ತನ್ನ ಜೀವ ಇನ್ನೇನು ಉಳಿಯಲಿಕ್ಕಿಲ್ಲ ಎಂದು ತಿಳಿದು ಜೀವದ ಹಂಗು ತೊರೆದು ಒಂದೇ ಸವನೆ ಬದುಕಲು ಪಣತೊಟ್ಟು ಹುಚ್ಚನಂತೆ ದಿಕ್ಕೆಟ್ಟು ಓಡುತ್ತಿದೆ. ಆದರೆ ಚಿರತೆಯ ಕೈಯಿಂದ ತಪ್ಪಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಚಿರತೆ ಇನ್ನೇನು ತನ್ನನು ಮುಗಿಸಿಯೇ ಬಿಡುತ್ತದೆ ಎನ್ನುವಷ್ಟರಲ್ಲಿ ಕಾಡುಹಂದಿ ಕೊನೆಯ ಕ್ಷಣದಲ್ಲಿ ತನ್ನ ವರಸೆಯನ್ನೇ ಬದಲಾಯಿಸಿದೆ.

ಹೇಗೂ ತನ್ನ ಸಾವು ಖಚಿತವಾಗಿದೆ ಅಂದ ಮೇಲೆ ಹೆದರಿ ಚಿರತೆಗೆ ಆಹಾರವಾಗುವ ಮುನ್ನ ಹೋರಾಟ ಮಾಡಿ ಸಾಯುವುದೇ ಲೇಸು ಎಂದು ತಿಳಿದು ಕಾಡುಹಂದಿಯು ಮೊದಲು ತನ್ನ ವೇಗ ಕಡಿಮೆ ಮಾಡಿದೆ. ಹೀಗಾಗಿ ರಭಸದಲ್ಲಿ ಬೆನ್ನಟ್ಟಿ ಬರುತ್ತಿದ್ದ ಚಿರತೆ ವೇಗದ ಕಾರಣದಿಂದಾಗಿ ಹಂದಿಯ ಎದುರಿಗೆ ಬಂದಿದೆ. ಇದೇ ಅವಕಾಶದ ಸದುಪಯೋಗ ಪಡೆದು ಚಿರತೆ ಎದುರಿಗೆ ಬರುವದಷ್ಟೆ ತಡ ತನ್ನ ಚೂಪಾದ ಹಲ್ಲುಗಳಿಂದ ದುಪ್ಪಟ್ಟು ವೇಗದಲ್ಲಿ ಹಂದಿ ಚಿರತೆಯ ಮೇಲೆ ಅಟ್ಯಾಕ್ ಮಾಡಿದೆ. ಹಠಾತ್ ಆದ ಬದಲಾವಣೆಗೆ ಚಿರತೆ ಒಮ್ಮೆಲೆ ಬೆಚ್ಚಿ ಬಿದ್ದಿದೆ. ತನ್ನ ಜೀವವೇ ಹೇಗಾದರೂ ಉಳಿದರೆ ಸಾಕು ಎಂದು ತಿಳಿದು ಈಗ ಹಂದಿಯಂತೆ ದಿಕ್ಕೆಟ್ಟು ಓಡುವ ಸರದಿ ಚಿರತೆಯದ್ದಾಗಿತ್ತು. ಚಿರತೆಯ ಪೇಚಾಟ ಇಲ್ಲಿ ನೋಡುವಂಥದ್ದು. ಹಂದಿಯ ಕೋಪಕ್ಕೆ ಚಿರತೆ ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಾಡಿದೆ.

ವಿಡಿಯೋ ನೋಡಿ

ಒಟ್ಟಿನಲ್ಲಿ ಜೀವಕ್ಕೆ ಕುತ್ತು ಬಂದಾಗಲೂ ನೀವು ರಿಯಾಕ್ಟ್ ಮಾಡದೇ ಇದ್ದರೆ ಹೇಗೆ? ಸಾಯುವ ಮುನ್ನ ಸದೆಬಡಿಯುವ ಒಂದು ಪ್ರಯತ್ನವನ್ನಾದರೂ ಮಾಡಲೇಬೇಕು ಎನ್ನುವ ಉತ್ತಮ ಪಾಠ ಇಲ್ಲಿ ಕಾಡುಹಂದಿ ನೀಡಿದೆ. ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ. ಪ್ರಯತ್ನ ಮಾಡುವ ಛಲವೇ ಇಲ್ಲದಿರುವಾಗ ಫಲದ ಅಪೇಕ್ಷೆ ಎಲ್ಲಿಂದ?