ಮನರಂಜನೆಗಾಗಿ ನಿರ್ಗತಿಕ ಜನರಿಗೆ ವಿಷಪೂರಿತ ಆಹಾರವನ್ನು ನೀಡಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಂಧನ.

ಕ್ಯಾಲಿಫೋರ್ನಿಯಾದ ಒಬ್ಬ ವಿಲಕ್ಷಣ ವ್ಯಕ್ತಿಯನ್ನು ತನ್ನ ಮನೋರಂಜನೆಯ ಸಲುವಾಗಿ ಮನೆಯಿಲ್ಲದೇ ರಸ್ತೆಯ ಮೇಲೆ ವಾಸವಾಗಿರುವ ಜನರಿಗೆ ವಿಷಪೂರಿತ ಆಹಾರ ನೀಡಿ ಅವರ ವಿಡಿಯೋ ರೆಕಾರ್ಡಿಂಗ್ ಮಾಡುವ ಆರೋಪದ ಮೇರೆಗೆ ಬಂಧಿಸಿದ್ದಾರೆ. 38 ವರ್ಷದ ವಿಲಿಯಮ್ ರಾಬರ್ಟ್ ಕೇಬಲ್ ಅವರ ಮೇಲೆ ಆರೋಪ ನಡೆಸಿದ್ದಾರೆ. ರಸ್ತೆಯ ಮೇಲೆ ಅಲೆದಾಡುವ ಜನರಿಗೆ ಒಲಿಯೋರೆಸಿನ್ ಕ್ಯಾಪ್ಸಿಕಂ ಹೆಸರಿನ ವಿಷಾರಿ ಪದಾರ್ಥ ತಿಂಡಿಯಲ್ಲಿ ಮಿಶ್ರಣ ಮಾಡಿ ಅದನ್ನು ರಸ್ತೆ ಬದಿಯಲ್ಲಿದ್ದ ಜನರಿಗೆ ತಿನಿಸಿದರು. ಅದನ್ನು ತಿಂದ ಕಾರಣ ಅಲ್ಲಿದ್ದ ಜನರ ಆರೋಗ್ಯ ಹದಗೆಟ್ಟಿತು ಅವರ ಆ ನೋವನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಏಕೆಂದರೆ ಬೇಜಾರದಾಗ ಅವರ ನೋವಿನ ವಿಡಿಯೋ ನೋಡಿ ಮನೋರಂಜನೆ ಮಾಡುವದು ಅವರ ಉದ್ದೇಶವಾಗಿದೆ.

ವಿಷಪೂರಿತ ಆಹಾರ ಸೇವನೆ ಮಾಡಿದ್ದರಿಂದ ಕೆಲವು ಜನರ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿತು ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲೆ ಮಾಡಲಾಯಿತು. ಪೊಲೀಸ್ ರಿಗೆ ರಾಬರ್ಟ್ ಅವರು ತಮ್ಮ ಜೊತೆಗೆ ಇನ್ನಿತರ ಜನರ ಜೊತೆಗೂಡಿ ಈ ಕೃತ್ಯ ಮಾಡಿದ್ದಾರೆ ಎಂಬುದು ಸಂಶಯ ಬಂದಿದೆ.

ಆರೆಂಜ್ ಕೌಂಟಿ ಡಿಸ್ಟ್ರಿಕ್ಟ್ ಅಧಿಕಾರಿಗಳ ಪ್ರಕಾರ, ‘ರಾಬರ್ಟ್ ಅವರು ಹಂಟಿಂಗ್ಟನ್ ಬೀಚ್‌ನಲ್ಲಿರುವ ಈ ಎಂಟು ಮಂದಿ ಮನೆಯಿಲ್ಲದ ಜನರಿಗೆ ರಾಬರ್ಟ್ ಒಲಿಯೊರೆಸಿನ್ ಕ್ಯಾಪ್ಸಿಕಂ ಎಂಬ ವಿಷಕಾರಿ ವಸ್ತುವನ್ನು ಒಳಗೊಂಡಿರುವ ಆಹಾರವನ್ನು ಸೇವನೆ ಮಾಡಲು ನೀಡಿದರು, ತದನಂತರ ವಿಷಪೂರಿತ ಆಹಾರ ಸೇವಿಸಿದ ಜನರ ನೋವಿನ ಪರಸ್ಥಿತಿಗಳನ್ನು ವಿಡಿಯೋ ರೆಕಾರ್ಡಿಂಗ್ ಮಾಡಿ ನಂತರ ಮನರಂಜನೆಗಾಗಿ ಅದನ್ನು ಸಂಗ್ರಹಿಸಿಟ್ಟಿದ್ದಾರೆ. ಮೆಣಸಿನಕಾಯಿ ಸಸ್ಯದಿಂದ ಒಲಿಯೊರೆಸಿನ್ ಕ್ಯಾಪ್ಸಿಕಂ ಎಂಬ ವಿಷಪೂರಿತ ಪದಾರ್ಥ ಹೊರತೆಗೆಯಲಾಗುತ್ತದೆ, ಇದನ್ನು ವಿಶೇಷವಾಗಿ ಪೇಪರ್ ಸ್ಪ್ರೇ ಸಲುವಾಗಿ ಬಳಸಲಾಗುತ್ತದೆ.

ಪೊಲೀಸರ ಪ್ರಕಾರ, ರಾಬರ್ಟ್ ಅಲ್ಲಿದ್ದ ಜನರಲ್ಲಿ ಅವರಲ್ಲಿ ಕೆಲವರಿಗೆ “ತುಂಬಾ ಮಸಾಲೆಯುಕ್ತ ಆಹಾರ ಸೇವನೆ ಮಾಡುವ ಸ್ಪರ್ಧೆಯನ್ನು ನಡೆಸಲಿದ್ದೇನೆ, ಅದರಲ್ಲಿ ಎಲ್ಲರೂ ಭಾಗವಹಿಸಬಹುದು” ಎಂದು ಹೇಳಿದರು. ಈ ಅಪಾಯಕಾರಿ ವಸ್ತುವಿನ ಬಗ್ಗೆ ತಿಳಿದಿಲ್ಲದ ಹೆಚ್ಚಿನ ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಒಪ್ಪಿದರು. ಕೆಲವು ಜನರಿಗೆ ವಿಷಕಾರಿ ಆಹಾರವನ್ನು ಸೇವಿಸುವುದರಿಂದ ವಾಂತಿ, ತಲೆತಿರುಗುವಿಕೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಉಂಟಾದವು. ಈ ಆರೋಪದಿಂದ ರಾಬರ್ಟ್ ಅವರ ಮೇಲೆ ಎಂಟು ಕೇಸ್ ಚಾರ್ಜ್ ಮಾಡಿದ್ದಾರೆ. ಈ ಅಪರಾಧಕ್ಕೆ ಸಂಬಂಧಿಸಿದಂತೆ ಅವರಿಗೆ 19 ವರ್ಷ 3 ತಿಂಗಳು ಶಿಕ್ಷೆ ವಿಧಿಸಬಹುದು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾನೆ.