Video; ಜಾಲಿ ರೈಡ್ ಮಾಡುತ್ತಿದ್ದ ಸೈಕಲ್ ಸವಾರನ ಮೇಲೆ ಹಿಂದಿನಿಂದ ಹಠಾತ್ ಅಟ್ಯಾಕ್ ಮಾಡಿತು ಚಿರತೆ! ಮುಂದೆ?
ವನ್ಯ ಜೀವಿಗಳು ಜನವಸತಿಯ ಕಡೆಗೆ ಹೆಚ್ಚಾಗಿ ಸುಳಿದು ಬರುತ್ತಿರುವಾಗ ಇನ್ನು ಕಾಡಿನ ದಾರಿ ಮಧ್ಯೆ ಬಂದು ಮನುಷ್ಯನಿಗೆ ಭೇಟಿಯಾಗುವುದರಲ್ಲಿ ಏನು ವಿಶೇಷ? ಇಲ್ಲೊಬ್ಬ ವ್ಯಕ್ತಿ ತನ್ನ ಸೈಕಲ್ ಮೇಲೆ ಆರಾಮಾಗಿ ಅಷ್ಟೇ ಜಾಲಿಯಾಗಿ ಸಾಗುತ್ತಿರುವಾಗ ಕಾಡು ಪ್ರಾಣಿಯೊಂದು ಆತನ ಮೇಲೆ ಅಟ್ಯಾಕ್ ಮಾಡಿದ ಘಟನೆಯ ದೃಶ್ಯವೊಂದು CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ವ್ಯಕ್ತಿಯೊಬ್ಬ ತನ್ನದೇ ಗುಂಗಿನಲ್ಲಿ ಜಾಲಿಯಾಗಿ ಸೈಕಲ್ ತುಳಿಯುತ್ತಾ ಅದರ ಆನಂದವನ್ನು ಸವಿಯುತ್ತಾ ಕಾಡಿನ ಅಂಚಿನಿಂದ ಮುನ್ನಡೆದಿದ್ದಾನೆ. ಅಷ್ಟರಲ್ಲಿ ಹಿಂದಿನಿಂದ ಚಿರತೆಯೊಂದು ಹಠಾತ್ ಸೈಕಲ್ ಸವಾರನ ಮೇಲೆ ಜಂಪ್ ಮಾಡಿ ಅಟ್ಯಾಕ್ ಮಾಡಿದೆ. ಇದರ ಯಾವ ಅರಿವೇಯೇ ಇಲ್ಲದೆ ಸಂಚರಿಸುತ್ತಿದ್ದ ಸೈಕಲ್ ಸವಾರ ಒಮ್ಮೆಲೆ ತನ್ನ ಬ್ಯಾಲೆನ್ಸ್ ಕಳೆದುಕೊಂಡು ಕೆಳಗೆ ಬೀಳುತ್ತಾನೆ. ವ್ಯಕ್ತಿ ಎದ್ದು ಹಡಬಡಿಸಿ ಹೊರಳಿ ನೋಡುವಷ್ಟರಲ್ಲಿ ಆತನಿಗೆ ಚಿರತೆ ಕಾಣಿಸಿದೆ. ಚಿರತೆಯನ್ನು ನೋಡಿ ವ್ಯಕ್ತಿ ತಬ್ಬಿಬ್ಬಾಗಿದ್ದಾನೆ. ಮತ್ತು ತಕ್ಷಣ ಏನು ಮಾಡಬೇಕು ಎಂಬುದು ಆತನಿಗೆ ಆ ಸಮಯದಲ್ಲಿ ಹೊಳೆದಿಲ್ಲ. ನಂತರ ಸೈಕಲ್ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಚಿರತೆಯು ಸಹ ವ್ಯಕ್ತಿ ಸೈಕಲ್ ಸಮೇತ ಕೆಳಗೆ ಬಿದ್ದದ್ದನ್ನು ನೋಡಿ ಹೆದರಿ ಬಂದ ದಾರಿಗೆ ಸುಂಕವಿಲ್ಲದಂತೆ ರಿಟರ್ನ್ ಆಗಿದೆ. ಏತನ್ಮಧ್ಯೆ ಅಲ್ಲಿ ನಡೆದ ಈ ಪುಟ್ಟ ಹಾಗೂ ಭಯಾನಕ ಇನ್ಸಿಡೆಂಟ್ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಯುವಕ ಸಾವಿನ ದವಡೆಯಿಂದ ಆಶ್ಚರ್ಯಕರ ರೀತಿಯಲ್ಲಿ ಬಚಾವ್ ಮಾತ್ರ ಆಗಿದ್ದಾನೆ ಎನ್ನಬಹುದು.
ವಿಡಿಯೋ ನೋಡಿ
And this…
Escaping from the jaws of death. WA fwd pic.twitter.com/3BKY2slsYd— Susanta Nanda IFS (@susantananda3) June 16, 2022
ಪ್ರಸ್ತುತ ಘಟನೆ ಆಸಾಮಿನ ಕಾಡಿನಲ್ಲಿ ನಡೆದದ್ದು ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಅಕೌಂಟ್ ಮುಖಾಂತರ ಶೇರ್ ಮಾಡಿದ್ದಾರೆ.