Video; ಮದುವೆ ಮಂಟಪಕ್ಕೆ ಇಂಜಿನಿಯರ್ ವಧು ಕೊಟ್ಟ ಎಂಟ್ರಿ ಸಖತ್ ಸೂಪರ್! ಪಕ್ಕಾ ರೈತನ ಮಗಳೆಂದರು ನೆಟ್ಟಿಗರು..!
ಮದುವೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ಹರಿದಾಡುತ್ತವೆ. ಈ ವಿಡಿಯೋಗಳಲ್ಲಿ ಮದುವೆಯಲ್ಲಿ ನಡೆದ ತುಂಬಾ ರೋಚಕ ಪ್ರಸಂಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಯೇ ಆಗುತ್ತವೆ. ಈ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವೂ ಆಗುತ್ತವೆ. ಸದ್ಯ ಮದುವೆಯ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧಮಾಲ್ ಮಾಡುತ್ತಿದೆ. ಈ ವಿಡಿಯೋ ನೋಡಿದಾಗ ನಿಮಗೂ ಹೆಮ್ಮೆ ಎನಿಸುತ್ತದೆ ಗ್ಯಾರಂಟಿ.
ಈ ವಿಡಿಯೋದಲ್ಲಿ ಮದುಮಗಳು ಮದುವೆ ಮಂಟಪಕ್ಕೆ ರೈತನ ಆಪ್ತಮಿತ್ರವಾದ ಟ್ರ್ಯಾಕ್ಟರ್ ಮೇಲೆ ಎಂಟ್ರಿ ಮಾಡಿದ್ದಾಳೆ. ಮದುಮಗಳು ಡ್ರೈವರ್ ಸೀಟ್ ಮೇಲೆ ಕುಳಿತು ವೆಡ್ಡಿಂಗ್ ಡ್ರೆಸ್ ನಲ್ಲಿ ಇದ್ದರೂ ಸ್ವತಃ ತಾನೇ ಟ್ರ್ಯಾಕ್ಟರ್ ಚಲಾಯಿಸುತ್ತಾ ಭರ್ಜರಿಯಾಗಿ ಎಂಟ್ರಿ ಮಾಡಿದ್ದಾಳೆ. ಜೊತೆಗೆ ತಾನು ಪಕ್ಕಾ ರೈತನ ಮಗಳೆಂದು ಅಭಿಮಾನದಿಂದ ತಾನೇ ಟ್ರ್ಯಾಕ್ಟರ್ ಚಲಾಯಿಸುತ್ತ ಬಂದಿದ್ದಾಳೆ. ನೇಟಿಜನ್ಸ್ ಗಳಿಗೆ ರೈತನ ಮಗಳಾದ ಈ ಮದುಮಗಳ ಎಂಟ್ರಿ ತುಂಬಾನೇ ಮನಸೂರೆಗೊಂಡಿದೆ. ಮತ್ತು ನೆಟ್ಟಿಗರು ಮದುಮಗಳ ಈ ಸ್ಟೈಲಿಗೆ ಫುಲ್ ಫಿದಾ ಆಗಿದ್ದಾರೆ.
ಮದುಮಗಳ ಹೆಸರು ಭಾರತಿ ತಗಡೆ ಇದ್ದು, ವ್ಯವಸಾಯದಲ್ಲಿ ಇಂಜಿನಿಯರ್ ಆಗಿದ್ದಾರೆ. ಆಕೆ ಕಣ್ಣಿಗೆ ಕಪ್ಪು ಗಾಗಲ್ ಧರಿಸಿ ಮದುವೆ ಮಂಟಪದಲ್ಲಿ ಕೆಂಪು ಬಣ್ಣದ ಡ್ರೆಸ್ ನಲ್ಲಿ ಸಖತ್ ಎಂಟ್ರಿ ಮಾಡಿದ್ದಾಳೆ. ಈ ಬಗ್ಗೆ ಭಾರತಿಗೆ ವಿಚಾರಿಸಿದಾಗ, ‘ಪಲ್ಲಕ್ಕಿ ಅಥವಾ ಕಾರಿನಲ್ಲಿ ಪ್ರವೇಶಿಸುವ ಸ್ಟೈಲ್ ತುಂಬಾ ಹಳೆಯದಾಗಿರುವುದರಿಂದ ಮದುವೆಯ ದಿನದಂದು ಸ್ವಲ್ಪ ವಿಭಿನ್ನವಾಗಿ ಏನನ್ನಾದರೂ ಮಾಡಲು ನಾನು ಬಯಸಿ ಈ ರೀತಿ ಟ್ರ್ಯಾಕ್ಟರ್ ಮೇಲೆ ಎಂಟ್ರಿ ಮಾಡಿದೆ’, ಎನ್ನುತ್ತಾಳೆ.
ವಿಡಿಯೋ ನೋಡಿ
A bride in Betul arrived at her wedding on a tractor. The bride, Bharti Tagde, is seen entering the wedding pavilion wearing black glasses and riding a tractor. On the tractor, she is accompanied by her two brothers @ndtv @ndtvindia pic.twitter.com/apdqrIBvyA
— Anurag Dwary (@Anurag_Dwary) May 27, 2022