Video; ಶಾಲೆಗೆ ಕರೆ(ಎಳೆ)ದೊಯ್ಯುವ ಈ ರೇರ್ ಸೀನ್ ಕಾಲದ ಗರ್ಭದಲ್ಲಿ ಮರೆಯಾಗುತ್ತ ನಡೆದಿರುವುದು ನಿಜಕ್ಕೂ ವಿಷಾದದ ಸಂಗತಿ! ನೋಡಿ.
ಕೆಲವೊಂದು ಬಾಲ್ಯದ ನೆನಪುಗಳು ಮನುಷ್ಯನ ಮೆದುಳಿನಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ. ಅದರಲ್ಲಿ ಪ್ರಾಥಮಿಕ ಶಾಲೆಯ ಆ ದಿನಗಳಂತೂ ವ್ಯಕ್ತಿ ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಅದರಲ್ಲೂ ನಮ್ಮೆಲ್ಲರ ಪ್ರೀತಿಯ ಸರಕಾರಿ ಶಾಲೆಯ ಮಿತ್ರರು ಮನೆಗೆ ಬಂದು ಸಹಪಾಠಿಯನ್ನು ಜಬರ್ ದಸ್ತಿನಿಂದ ಕರೆದುಕೊಂಡು ಅಲ್ಲ ಎತ್ತಿಕೊಂಡು ಹೋಗುವದಂತೂ ಎಂದಿಗೂ ಮರೆಯುವ ಹಾಗಿಲ್ಲ, ಅಲ್ವಾ? ಇದೇ ಸುಂದರ ದೃಶ್ಯವನ್ನು ಇಂದಿನ ಈ ಲೇಖನದಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ನೋಡಲಿದ್ದೇವೆ.
ಈ ವಿಡಿಯೋದಲ್ಲಿ ತಾಯಿ ತನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ಪ್ರಯತ್ನ ಪಡುತ್ತಿದ್ದಾಳೆ. ಮಗ ಮಾತ್ರ ಶಾಲೆಗೆ ಏನೇ ಮಾಡಿದರೂ ಹೋಗಲು ತಯಾರಿಲ್ಲ. ಅದಕ್ಕೆ ತಾಯಿ ಆತನ ಮಿತ್ರರಿಗೆ ಕರೆಯಿಸಿ ಅವರೊಟ್ಟಿಗೆ ತಾನು ಮಗನ ಒಂದು ಅವಯವವನ್ನು ಹಿಡಿದು ಆತನ ಕೈಕಾಲುಗಳನ್ನು ಚೆನ್ನಾಗಿ ಕಟ್ಟಿ ಎತ್ತಿಕೊಂಡು ಶಾಲೆಗೆ ದರದರನೆ ಎಳೆದುಕೊಂಡು ಒಯ್ಯುತ್ತಿದ್ದಾರೆ. ಇದೇ ಅಪರೂಪದ ದೃಶ್ಯ ಕಾಲದ ಗರ್ಭದಲ್ಲಿ ಮರೆಯಾಗುತ್ತ ನಡೆದಿದೆ ಎಂದರೆ ಅಕ್ಷರಶಃ ತಪ್ಪಾಗುವುದಿಲ್ಲ. ಸರಕಾರಿ ಶಾಲೆಯ ಶಿಕ್ಷಕರೇ ಹಾಗೆ ವಿದ್ಯಾರ್ಥಿ ಬರಲಿಲ್ಲ ಅಂದ್ರೆ ಆಯ್ತು ಶಾಲೆಯ ಒಂದು ಸ್ಪೆಷಲ್ ಬ್ರಿಗೇಡ್ ತಯಾರಾಗಿಯೇ ಇರುತ್ತಿತ್ತು. ಶಾಲೆ ಬಿಟ್ಟ ವಿದ್ಯಾರ್ಥಿಯನ್ನು ಹೇಗಾದರೂ ಮಾಡಿ ಶಾಲೆಗೆ ತರಲು. ಕಾರಣ ಈ ಬ್ರಿಗೇಡ್ ಗೆ ತಾವು ಶಾಲೆಯಲ್ಲಿದ್ದು ಆತ ಮಾತ್ರ ಹೊರಗಿದ್ದು ಮಜಾ ಮಾಡುವದೆಂದರೆ ಅರಗಿಸಿಕೊಳ್ಳಲಾಗದ ಬೇನೆ. ಒಟ್ಟಿನಲ್ಲಿ ಈ ಅಪರೂಪದ ದೃಶ್ಯ ತುಂಬಾನೇ ಕಣ್ಮರೆಯಾಗುತ್ತಿದೆ. ಈಗಿನ ಮಕ್ಕಳು ಹೆಚ್ಚಾಗಿ ಪ್ರೈವೇಟ್ ಶಾಲೆಗೆ ಬಸ್ ಮತ್ತು ವ್ಯಾನ್ ನಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ತಂದೆ ಮತ್ತು ಹೆಚ್ಚಾಗಿ ತಾಯಂದಿರು ತಮ್ಮ ಮಕ್ಕಳನ್ನು ದಿನಾಲೂ ವಿದ್ಯಾಭ್ಯಾಸಕ್ಕೆ ಫಾರಿನ್ ಗೆ ಕಳುಹಿಸುವ ರೀತಿಯಲ್ಲಿ ಟಾಟಾ ಬೈ ಬೈ ಮಾಡಿ ಕಳುಹಿಸುತ್ತಾರೆ. ಆದರಿಲ್ಲಿ ಈ ಮಜಾ ಮಾತ್ರ ಸ್ವಲ್ಪವೂ ಬರುವದಿಲ್ಲ, ಅಲ್ವಾ?
ವಿಡಿಯೋ ನೋಡಿ
Don’t forget the efforts taken by your parents and friends to get you good education pic.twitter.com/NuzHtNBziK
— Dr.Samrat Gowda IFS (@IfsSamrat) April 27, 2022
ಈ ಸುಂದರವಾದ ಮನಮುಟ್ಟುವ ಮತ್ತು ಒಳ್ಳೆಯ ಹಳೆಯ ನೆನಪನ್ನು ತಾಜಾ ಮಾಡುವ ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ
Dr. ಸಾಮ್ರಾಟ್ ಗೌಡ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ.