ಕೊಚ್ಚಿ ಹಾಕಲು ಮಚ್ಚು ತೆಗೆದು ಏರಿ ಬಂದ ರೌಡಿಗೆ ಮಣ್ಣು ಮುಕ್ಕಿಸಿದ ರಿಯಲ್ ಸಿಂಗಮ್ ಅವರ ವಿಡಿಯೋ ವೈರಲ್!

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಿಯಲ್ ಸಿಂಗಂ ಅಥವಾ ರಿಯಲ್ ಕೆಂಪೇಗೌಡ ಎಂಬಂತೆಯೇ ಪೊಲೀಸ್ ಆಫೀಸರ್ ಒಬ್ಬರ ವಿಡಿಯೋ ಒಂದು ಸಕತ್ತಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಗಂಡೆದೆಯ ಬಂಟ ಪೊಲೀಸ್ ಆಫೀಸರ್ ರಿಯಲ್ ಹೀರೋನಂತೆ ಒಬ್ಬ ಗಲ್ಲಿ ರೌಡಿಗೆ ಫೇಸ್ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ಒಬ್ಬ ರೋಡ್ ರೌಡಿ ಬೈಕ್ ಮೇಲೆ ಕುಳಿತಿದ್ದಾನೆ. ಆತನ ಹತ್ತಿರವೇ ಎದುರುಗಡೆ ಪೊಲೀಸ್ ಜೀಪ್ ಒಂದು ನಿಂತಿದೆ. ಜೀಪಿನಿಂದ ಪೊಲೀಸ್ ಆಫೀಸರ್ ಆ ರೌಡಿಗೆ ಏನಾದರೊಂದು ಸೂಚನೆ ಅಥವಾ ಸಲಹೆ ನೀಡುತ್ತಿರಬಹುದು. ಅದು ಆತನಿಗೆ ರುಚಿಸಿಲ್ಲ ಎಂಬಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆಗ ಪೊಲೀಸ್ ಜೀಪ್ ಇನ್ನಷ್ಟು ಮುಂದೆ ಹೋಗಿ ಆತನ ಹತ್ತಿರ ನಿಂತ ಮೇಲೆ ಆಫೀಸರ್ ಜೀಪಿನ ಬಾಗಿಲು ತೆರೆದು ಕೆಳಗೆ ಇಳಿಯುವದಷ್ಟೇ ತಡ ರೌಡಿಯು ಚಾಲಾಕಿತನದಿಂದ ಸ್ಕೂಟಿ ಸ್ಟಾಂಡ್ ಮಾಡಿ ಫುಟ್ಬೋರ್ಡ್ ನಲ್ಲಿಟ್ಟ ಚೀಲದಿಂದ ಪೊಲೀಸ್ ಆಫೀಸರ್ ಗೆ ಕೊಚ್ಚಿ ಹಾಕಲು ಮಚ್ಚು ತೆಗೆಯುತ್ತಾನೆ.

ಇದನ್ನು ನೋಡಿದ ಪೊಲೀಸ್ ಆಫೀಸರ್ ಒಂದು ಕ್ಷಣ ಸ್ತಬ್ಧರಾಗುತ್ತಾರೆ. ರೌಡಿ ಹಾಗೆ ಮಚ್ಚಿನಿಂದ ಕೊಚ್ಚಿಹಾಕಲು ಮುಂದೆ ಬಂದಾಗ ಪೊಲೀಸ್ ಆಫೀಸರ್ ಆಗ ಮಾತ್ರ ಹಿಂದೆ ಸರಿಯದೆ ರೌಡಿಯ ಮೇಲೆ ಒಮ್ಮೆಲೆ ಅಟ್ಯಾಕ್ ಮಾಡಿದ್ದಾರೆ. ಈ ದಾವಂತದಲ್ಲಿ ಇಬ್ಬರು ಕೆಳಗೆ ಬೀಳುತ್ತಾರೆ. ಪೊಲೀಸ್ ಆಫೀಸರ್ ಮಾತ್ರ ಆತನ ಮೇಲೆ ಸರಿಯಾಗಿ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ ಹಾಗೂ ಆತನ ಕೈಯಲ್ಲಿದ್ದ ಮಚ್ಚು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಅಷ್ಟರಲ್ಲಿ ಇನ್ನೊಬ್ಬ ಡ್ರೈವರ್ ಪೊಲೀಸ್ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಬಂದು ಆ ರೌಡಿಯನ್ನು ಸರಿಯಾಗಿ ಮಟ್ಟ ಹಾಕಿ ಹೆಚ್ಚಿನ ಉಪಚಾರ ನೀಡುವ ಸಲುವಾಗಿ ತಮ್ಮ ಜೊತೆಗೆ ಕರೆದುಕೊಂಡು ಹೋಗಲು ಅಣಿಯಾಗುತ್ತಾರೆ. ಇಲ್ಲಿ ಪೊಲೀಸ್ ಆಫೀಸರ್ ಅವರ ಡೇರಿಂಗ್ ನಿಜಕ್ಕೂ ಮೆಚ್ಚುವಂತದ್ದೆ. ಏಕೆಂದರೆ ರೀಲ್ ಮತ್ತು ರಿಯಲ್ ತುಂಬಾ ವಿಭಿನ್ನ ಪ್ರಕಾರಗಳಾಗಿವೆ. ಮಚ್ಚು ತೆಗೆದುಕೊಂಡು ರೌಡಿ ಎದುರಿಗೆ ನಿಂತಿದ್ದರೂ ಪೊಲೀಸ್ ಆಫೀಸರ್ ಹೆದರದೆ ಆತನನ್ನು ಫೇಸ್ ಮಾಡಿ ಸರಿಯಾಗಿ ನೆಲಕ್ಕೆ ಕೆಡವಿ ಮಣ್ಣು ಮುಕ್ಕಿಸುವದು ಸುಲಭದ ಮಾತಲ್ಲ.

ವಿಡಿಯೋ ನೋಡಿ

ಈ ವಿಡಿಯೋವನ್ನು ಟ್ವಿಟರ್ನಲ್ಲಿ ಐಎಫ್ಎಸ್ ಆಫೀಸರ್ ಆದ ಡಾ. ಸಾಮ್ರಾಟ್ ಗೌಡ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ.