ಈ ಫೇಮಸ್ ಆಟೋ ಡ್ರೈವರ್ ಗೆ ಹುಡುಗಿಯೊಬ್ಬಳು ತನ್ನ ಜೊತೆಗೆ ನೇರ ಮದುವೆಯ ಪ್ರಸ್ತಾಪವನ್ನೇ ಇಟ್ಟಿದ್ದಾಳೆ…!

ಇಪ್ಪತ್ತು ವರ್ಷಗಳವರೆಗೆ ಪ್ರೈವೇಟ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಈಗ ಆಟೋ ಚಲಾಯಿಸುತ್ತಿದ್ದಾರೆ. ಇವರ ಲೈಫ್ ಸ್ಟೋರಿ ಕಳೆದ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಆಟೋ ಡ್ರೈವರ್ ಹೇಳುವ ಪ್ರಕಾರ, ಸದ್ಯ ಅವರಿಗೆ ಹಗಲು ರಾತ್ರಿ ಫೋನ್ ಕರೆಗಳು ಬರುತ್ತಿವೆಯಂತೆ. ಅವರಲ್ಲಿ ಒಬ್ಬಳು ಹುಡುಗಿಯಂತೂ ತನ್ನನ್ನು ಮದುವೆಯಾಗುತ್ತೀರಾ? ಎಂದು ಕೇಳಿದ್ದಾಳೆ.

ಈ ಆಟೋ ಡ್ರೈವರ್ ಅವರ ಹೆಸರು ಪಟ್ಟಾಭಿ ರಾಮನ್ ಇದ್ದು ಇವರು ಮುಂಬೈಯ ಪ್ರೈವೇಟ್ ಕಾಲೇಜ್ ಒಂದರಲ್ಲಿ 20 ವರ್ಷಗಳವರೆಗೆ ಇಂಗ್ಲಿಷ್ ವಿಷಯವನ್ನು ಕಲಿಸುತ್ತಿದ್ದರು. ತದನಂತರ ಈಗ ಬೆಂಗಳೂರಿನಲ್ಲಿ ಆಟೋ ಚಲಾಯಿಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಇವರ ಲೈಫ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 74 ವರ್ಷಗಳ ಹರೆಯದ ಪಟ್ಟಾಭಿ ರಾಮನ್ ಅವರೇ ಹೇಳುವ ಪ್ರಕಾರ, ನನ್ನ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಹಗಲು-ರಾತ್ರಿ ಫೋನ್ ಕರೆಗಳು ಬರುತ್ತಿವೆ. ಹಾಗೂ ಎಲ್ಲರೂ ನನ್ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೇಳಲು ಇಷ್ಟಪಡುತ್ತಿದ್ದಾರೆ.

ಒಂದು ಇಂಟರ್ವ್ಯೂನಲ್ಲಿ ಪಟ್ಟಾಭಿ ರಾಮನ್, ಚೆನ್ನೈನ ಒಂದು ಹುಡುಗಿ ಇವರಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪವನ್ನು ಇಟ್ಟಿದ್ದಳು. ಹುಡುಗಿ ಕಡಿಮೆ ವಯಸ್ಸಿನ ಹುಡುಗರ ಜೊತೆಗೆ ಸಂಬಂಧವಿಟ್ಟು ಬೇಸರಿಸಿದ್ದಾಳೆ. ಹೀಗಾಗಿ ಆಕೆ ನನಗೆ ತನ್ನ ಜೊತೆಗೆ ಮದುವೆಯಾಗುತ್ತೀರಾ ಎಂದು ಕೇಳಿದ್ದಾಳೆ. ಇದಕ್ಕೆ ಉತ್ತರವಾಗಿ ಪಟ್ಟಾಭಿ ರಾಮನ್ ಅವರು ನನಗೂ ಒಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ ಎಂದಾಗ ಹುಡುಗಿಯು ಬೆಚ್ಚಿಬಿದ್ದಿದ್ದಾಳೆ. ಆಗ ಪಟ್ಟಾಭಿ ರಾಮನ್ ಅವರು ಹುಡುಗಿಗೆ, ನನಗೂ ಮದುವೆಯಾಗಿದೆ ನನ್ನ ಹೆಂಡತಿಯ ಜೊತೆಗೆ ನಾನು ಗರ್ಲ್ ಫ್ರೆಂಡ್ ತರನೇ ಟ್ರೀಟ್ ಮಾಡೋದು ಎಂದು ಸಮಜಾಯಿಷಿ ಹೇಳಿದ್ದಾರೆ.

ಪಟ್ಟಾಭಿ ರಾಮನ್ ಅವರ ಲೈಫ್ ಸ್ಟೋರಿ ಕಳೆದ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅವರ ಆಟೋದಲ್ಲಿ ಕುಳಿತ ಪ್ಯಾಸೆಂಜರ್ ನಿಕಿತಾ ಅಯ್ಯರ್ ಅವರು ಇವರ ಕಥೆಯನ್ನು ಪೋಸ್ಟ್ ಮಾಡಿದ್ದರು. ನಿಕಿತಾ ಅಯ್ಯರ್ ಅವರಿಗೆ ಆಫೀಸಿಗೆ ಹೋಗಲು ಲೇಟ್ ಆಗಿದ್ದಾಗ ಬೇರೆ ಆಟೋದವರು ಆಫೀಸಿಗೆ ಒಯ್ಯಲು ತಯಾರಿಲ್ಲದಾಗ ಪಟ್ಟಾಭಿ ರಾಮನ್ ಅವರು ಸಹಾಯ ಮಾಡಿದರು. ಇವರು ಸ್ವಂತಕ್ಕೆ ರೋಡ್ ಕಿಂಗ್ ತಿಳಿದುಕೊಳ್ಳುತ್ತಾರೆ.

ಇವರು ಮುಂಬೈಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ಇಪ್ಪತ್ತು ವರ್ಷಗಳವರೆಗೆ ಕೆಲಸ ಮಾಡಿದ್ದಾರೆ. ತಮ್ಮ ಮಕ್ಕಳಿಂದ ಹಣ ತೆಗೆದುಕೊಳ್ಳಲು ಇವರಿಗೆ ಸ್ವಲ್ಪವೂ ಇಷ್ಟವಿಲ್ಲ. ಅವರೇ ಹೇಳುವ ಪ್ರಕಾರ ಎಲ್ಲಿಯವರೆಗೆ ಕೆಲಸ ಮಾಡಬಹುದು ಅಲ್ಲಿಯವರೆಗೆ ಮನುಷ್ಯ ಕೆಲಸ ಮಾಡುತ್ತಲೇ ಇರಬೇಕು ಎನ್ನುತ್ತಾರೆ.

ಇವರು MAMEd ವರೆಗೆ ವ್ಯಾಸಂಗ ಮಾಡಿದ್ದರೂ ಆಟೋ ಚಲಾಯಿಸಿ ದಿನನಿತ್ಯ 1000 ದಿಂದ 1500 ರೂಪಾಯಿಗಳನ್ನು ಗಳಿಸುತ್ತಾರೆ. ಈ ಗಳಿಕೆ ನನಗೂ ಮತ್ತು ನನ್ನ ಗರ್ಲ್ ಫ್ರೆಂಡ್ ಗೆ ಸಾಕಾಗುತ್ತೆ. ನಾವು ಯಾರ ಹಂಗಿನಲ್ಲಿಯೂ ಬದುಕಬಾರದು. ಮತ್ತು ನಮ್ಮ ಜೀವನವನ್ನು ಖುಷಿ ಖುಷಿಯಾಗಿ ಜೀವಿಸಬೇಕು ಎನ್ನುತ್ತಾರೆ.