ರಾಮಾಯಣದ ಸೀತೆ, ಅಂಬಿಯ ನಟಿ ದೀಪಿಕಾ ಮಾಡುತ್ತಿದ್ದಾರೆ ಕಾಡಿನಲ್ಲಿ ಒಲೆಯ ಮೇಲೆ ಅಡುಗೆ! ನೇಟಿಜನ್ಸ್ ಎಂದರು ಮತ್ತೆ ವನವಾಸವೆ?
ರಾಮಾನಂದ್ ಸಾಗರ್ ಅವರ ನಿರ್ದೇಶನದಲ್ಲಿ ತಯಾರಾಗಿ ಭಾರತದ ಮನೆಮನೆಗಳಿಗೆ ಮುಟ್ಟಿದ ಮೇರು ಧಾರಾವಾಹಿ ರಾಮಾಯಣದಲ್ಲಿಯ ಪಾತ್ರಗಳು ಇನ್ನುವರೆಗೂ ಜನರ ಮನಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಅದರಲ್ಲೂ ಸೀತೆಯ ಪಾತ್ರವನ್ನು ಭರ್ಜರಿಯಾಗಿ ನಿಭಾಯಿಸಿ ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರರಾದ ದೀಪಿಕಾ ಅವರನ್ನಂತೂ ಯಾರು ಮರೆಯಲಿಕ್ಕೆ ಸಾಧ್ಯವಿಲ್ಲ.
ಮುಂದೆ ಇವರು ಕನ್ನಡದಲ್ಲಿಯೂ ಕೆಲವು ಚಿತ್ರಗಳಲ್ಲಿ ತಮ್ಮ ಅಭಿನಯ ಕೌಶಲ್ಯವನ್ನು ತೋರಿ ಮಿಂಚಿದರು. ಅಂಬರೀಶ್ ಅವರ ಜೊತೆಗಿನ “ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ” ಈ ಹಾಡಂತೂ ತುಂಬಾನೇ ಫೇಮಸ್ ಆಗಿತ್ತು.
ಇವರು ಆಕ್ಟಿಂಗ್ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ತುಂಬಾ ಸಕ್ರಿಯರಾಗಿರುತ್ತಾರೆ. ಹಾಗೂ ಇವರ ಫ್ಯಾನ್ಸ್ ಫಾಲೋಯಿಂಗ್ ತುಂಬಾ ಇದೆ. ಇವರು ಯಾವಾಗಲೂ ತಮ್ಮ ಪರ್ಸನಲ್ ಹಾಗೂ ಪ್ರೊಫೆಷನಲ್ ಜೀವನಕ್ಕೆ ಸಂಬಂಧಿಸಿದ ಫೋಟೋ ಹಾಗೂ ವೀಡಿಯೊಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿರುತ್ತಾರೆ. ಅಭಿಮಾನಿಗಳೂ ಸಹ ಇವರ ಪ್ರೀತಿಯ ಪೋಸ್ಟಿಗೆ ತುಂಬಾ ಮೆಚ್ಚುಗೆಯಿಂದ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಈಗ ದೀಪಿಕಾ ಅವರು ತಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನಿಂದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋ ನೋಡಿ ಅಭಿಮಾನಿಗಳು ತುಂಬಾ ಭಾವುಕರಾಗಿದ್ದಾರೆ.
ಪ್ರಸ್ತುತ ವಿಡಿಯೋ ಕೆಲವೇ ದಿನಗಳ ಹಿಂದಿನದಿದೆ. ಈ ವಿಡಿಯೋದಲ್ಲಿ ದೀಪಿಕಾ ಅವರು ವನದಲ್ಲಿ ಕುಳಿತು ಮೂರು ಕಲ್ಲುಗಳನ್ನು ಇಟ್ಟು ಒಲೆಯ ಮೇಲೆ ಆಹಾರವನ್ನು ತಯಾರಿಸುತ್ತಿರುವದು ಕಂಡು ಬರುತ್ತಿದೆ. ಈ ಅಡುಗೆಯನ್ನು ತಯಾರಿಸುವಾಗ ಮಧ್ಯದಲ್ಲಿ ಆಗಾಗ ಒಲೆಯಲ್ಲಿ ಬೆಂಕಿ ಸರಿಯಾಗಿ ಜ್ವಲಿಸಲು ಗಾಳಿಯನ್ನು ಹಾಕುತ್ತಿದ್ದಾರೆ. ವಿಶೇಷವೆಂದರೆ ಈ ಎಲ್ಲ ಅಡುಗೆಯ ಕೆಲಸಗಳನ್ನು ದೀಪಿಕಾ ಅವರು ತುಂಬಾ ಸಹಜ ಹಾಗೂ ಸಾಮಾನ್ಯರಂತೆ ಮಾಡುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ದೀಪಿಕಾ ಅವರು ಶೇರ್ ಮಾಡಿದ ಈ ವಿಡಿಯೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ ಅನೇಕ ಹ್ಯಾಶ್ ಟ್ಯಾಗ್ ಗಳನ್ನು ಅಂದರೆ ಆಲೂಗಡ್ಡೆ, ಒಲೆ, ಫುಡ್ ಹೀಗೆ ನೀಡಿದ್ದಾರೆ. ಇದರ ಮೇಲಿಂದ ದೀಪಿಕಾ ಅವರು ಒಟ್ಟಿನಲ್ಲಿ ಒಲೆಯ ಮೇಲೆ ಆಲೂಗಡ್ಡೆಯ ಪಲ್ಲೆಯನ್ನು ಮಾಡುತ್ತಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಅವರ ಸರಳತೆಯ ಬಗ್ಗೆ ಕೊಂಡಾಡಿದ್ದಾರೆ. ಇನ್ನೂ ಕೆಲವರು ರಾಮಾಯಣದ ಸೀತೆಯ ವನವಾಸದ ಜೀವನ ಮತ್ತೆ ಮರುಕಳಿಸಿದೆಯೇ? ಎಂದು ಕೇಳಿದ್ದಾರೆ.