ಮಾವ ನೀಡಿದ ಗಿಫ್ಟ್ ನೋಡಿ ಭಾವುಕಳಾದ ನವವಧು; “ದೇವರೇ ಎಲ್ಲ ಹುಡುಗಿಯರಿಗೂ ಇಂಥ ಗಂಡನ ಮನೆ, ಮಾವ ಸಿಗಲಿ” ಎಂದಳು.
ಹೆಣ್ಣು ತನ್ನ ಜೀವನದ ಅರ್ಧಕ್ಕಿಂತ ಕಡಿಮೆ ವಯಸ್ಸು ತವರಿನಲ್ಲಿ ತೆಗೆದರೆ ಉಳಿದೆಲ್ಲ ಜೀವನ ಗಂಡನ ಮನೆಯಲ್ಲಿಯೇ ಆತನ ಮನೆಗಾಗಿಯೇ ಸವೆಸುತ್ತಾಳೆ. ಹುಡುಗಿಯರು ಯಾವಾಗ ಬೆಳೆದು ದೊಡ್ಡವರಾಗಿ ನಿಲ್ಲುತ್ತಾರೆ ಎಂಬುದು ಆಕೆಯ ಪೋಷಕರಿಗೂ ಗೊತ್ತಾಗುವುದಿಲ್ಲ. ಮದುವೆಯಾಗಿ ಗಂಡನ ಮನೆಗೆ ಹೋಗುವದರ ಜೊತೆಗೆ ತವರಿನ ಸೌಂದರ್ಯವನ್ನು ಸಹ ತನ್ನ ಜೊತೆಗೆ ತೆಗೆದುಕೊಂಡು ಹೋಗಿ ಬಿಡುತ್ತಾಳೆ. ಮದುವೆಯಾಗಿ ಮಗಳು ಗಂಡನ ಮನೆಗೆ ಹೋದ ನಂತರ ಮನೆಯಲ್ಲಿ ಬರೀ ಆಕೆಯ ನೆನಪುಗಳು ಮಾತ್ರ ಉಳಿದು ಬಿಡುತ್ತವೆ.
ಮದುವೆಯಲ್ಲಿ ತಂದೆ-ತಾಯಿ ತಮ್ಮ ಮಗಳಿಗೆ ಅನೇಕ ವಸ್ತುಗಳನ್ನು ಗಿಫ್ಟ್ ರೂಪದಲ್ಲಿ ನೀಡುತ್ತಾರೆ. ಆದರೆ ಇಲ್ಲಿ ನವವಧುವಿನ ಮಾವನೆ ತನ್ನ ಸೊಸೆಗಾಗಿ ಗಿಫ್ಟ್ ರೂಪದಲ್ಲಿ ಕಾರು ನೀಡಿದ ಸುದ್ದಿಯೊಂದು ಬೆಳಕಿಗೆ ಬಂದಿದೆ. ಈ ರೀತಿ ತನ್ನ ಭಾವಿ ಮಾವನಿಂದ ದೊರೆತ ಗಿಫ್ಟ್ ನೋಡಿ ಮದುಮಗಳು ತುಂಬಾ ಭಾವುಕಳಾಗಿದ್ದಾಳೆ. ಮತ್ತು ತನ್ನ ಕಣ್ಣುಗಳಿಂದ ಹರಿಯುವ ಆನಂದಾಶ್ರುಗಳನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ.
ದೊರೆತ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ ಕಾನ್ಪುರದಲ್ಲಿಯ ವ್ಯಾಪಾರಿ ತನ್ನ ಮಗನ ಮದುವೆಗಾಗಿ ರೈತನ ಮಗಳನ್ನು ನಿಶ್ಚಯ ಮಾಡಿದ್ದರು. ಮದುವೆಯಾದ ನಂತರ ವರನ ತಂದೆ ಮದುಮಗಳ ಮನೆಯ ಮುಂದೆ ಹೊಸದಾದ ಕಾರನ್ನು ತಂದು ನಿಲ್ಲಿಸಿದರು. ಮದುಮಗಳು ಹೊಸದಾದ ಕಾರು ನೋಡಿದ ನಂತರ ಈ ಕಾರು ಯಾರದ್ದು ಎಂದು ಕೇಳಿದಾಗ ಗೊತ್ತಾಯಿತು, ಗಂಡನ ಮನೆಯವರು ಈ ಕಾರನ್ನು ತನಗೆ ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆಂದು.
ಅಪರ್ಣ ಕುಮಾರ ಹೆಸರಿನ ವ್ಯವಸಾಯಿಕ ವ್ಯಕ್ತಿ ತನ್ನ ಮಗನ ಮದುವೆ ಅದೇ ಊರಲ್ಲಿ ಇರುವ ರೈತ ಚಂದ್ರಮೋಹನ್ ಅವರ ಮಗಳಾದ ಅಂಜಲಿ ಜೊತೆಗೆ ನಿಶ್ಚಯಿಸಿದ್ದರು. ಅಪರ್ಣ ಕುಮಾರ್ ಅವರ ಮಗ ಆದರ್ಶ ಕುಮಾರ್ ಮಾಡೆಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಾರೆ. ಇಬ್ಬರ ಮದುವೆ ದೊಡ್ಡ ಕಲ್ಯಾಣ ಮಂಟಪದಲ್ಲಿ ಭರ್ಜರಿಯಾಗಿ ನಡೆದಿತ್ತು.
ಮದುವೆಯ ಎರಡನೇ ದಿನ ಅಂಜಲಿಗೆ ತವರಿನಿಂದ ತಮ್ಮ ಮನೆಗೆ ಕರೆದುಕೊಂಡು ಹೋಗುವಾಗ ಆಕೆಗೆ ಹೊಸದಾದ ಕಾರಿನಲ್ಲಿ ಕೂಡಿಸಿದರು. ನಂತರ ಆಕೆಯ ಮಾವ ಅಪರ್ಣ ಕುಮಾರ್ ಬಂದು ಹೊಸದಾದ ಕಾರಿನಲ್ಲಿ ಅಂಜಲಿಯ ಕೈಯಲ್ಲಿ ಕೀ ನೀಡಿದರು.
ಮಾವ ಅಪರ್ಣ ಕುಮಾರ್ ಅವರು ಅಂಜಲಿಯ ಕೈಯಲ್ಲಿ ಕಾರಿನ ಕೀ ಕೊಟ್ಟಾಗ ಆಕೆ ಸ್ವಲ್ಪ ವಿಚಾರ ಮಾಡಲು ಶುರುಮಾಡಿದಳು. ನಂತರ ಗಂಡನಿಗೆ, ‘ಈ ಕಾರಿನ ಕೀ ನನ್ನ ಕೈಯಲ್ಲಿ ಯಾಕೆ ಕೊಟ್ಟರು’? ಎಂದು ಕೇಳಿದಳು. ಈ ಮಾತಿಗೆ ಗಂಡ ಆದರ್ಶ್, ‘ಈ ಕಾರು ನನ್ನ ತಂದೆ ನಿನಗೆ ಗಿಫ್ಟ್ ನೀಡಿದ್ದಾರೆ’ ಎಂದನು. ಈ ಮಾತನ್ನು ಕೇಳಿದ ನಂತರ ಅಂಜಲಿ ತುಂಬಾ ಭಾವುಕಳಾದಳು ಮತ್ತು ಆಕೆಯ ಕಣ್ಣಿನಿಂದ ಆನಂದಾಶ್ರುಗಳು ಹರಿಯಲು ಶುರುವಾಯಿತು. ಗಂಡನ ಮನೆಯವರು ಅಥವಾ ವಿಶೇಷವಾಗಿ ಮಾವ ತಮ್ಮ ಮಗಳಿಗೆ ಗಿಫ್ಟ್ ನಲ್ಲಿ ಕಾರು ನೀಡಿದ್ದನ್ನು ಕೇಳಿ ತವರಿನವರು ಸಹ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.
ವರನ ತಂದೆ ಅಪರ್ಣ ಕುಮಾರ ತ್ರಿವೇದಿ ಅವರು ವ್ಯಾಪಾರಿಯಾಗಿದ್ದಾರೆ. ತಮ್ಮ ಸೊಸೆ ಮತ್ತು ಆಕೆಯ ಕುಟುಂಬದವರಿಗೆ ತುಂಬಾ ದಿನಗಳಿಂದ ಗುರುತಿಸುತ್ತಿದ್ದರು. ಎರಡು ಕುಟುಂಬಗಳಲ್ಲಿ ಬಹಳದಿನಗಳಿಂದ ಮೈತ್ರಿ ನಡೆದು ಬಂದಿತ್ತು. ಅಪರ್ಣ ಕುಮಾರ್ ಅವರ ಪ್ರಕಾರ ತಮ್ಮ ಸೊಸೆ ತುಂಬಾ ಸುಸಂಸ್ಕೃತವಾಗಿದ್ದಾಳೆ. ಹೀಗಾಗಿ ಆಕೆಯ ಮುಂದೆ ಈ ಎಲ್ಲ ಸಂಪತ್ತು ತೃಣ ಸಮಾನ ಎಂದಿದ್ದಾರೆ.
ನಾನು ವರದಕ್ಷಿಣೆಗೆ ಸ್ಪಷ್ಟವಾಗಿ ವಿರೋಧ ಮಾಡುತ್ತೇನೆ, ಹೀಗಾಗಿ ನಾನು ನನ್ನ ಬೀಗರಿಂದ ಯಾವುದೇ ರೀತಿಯ ಡಿಮಾಂಡ್ ಮಾಡಿಲ್ಲ. ಗಂಡನ ಮನೆಯವರ ಕಡೆಯಿಂದ ಈ ರೀತಿಯ ದೊಡ್ಡ ಗಿಫ್ಟ್ ಸಿಕ್ಕ ನಂತರ ಅಂಜಲಿಗೆ ಈ ಬಗ್ಗೆ ವಿಚಾರಿಸಲಾಯಿತು. ಆಗ ಅಂಜಲಿ ಮೊದಮೊದಲು ತನ್ನದೇ ಕೈಯಲ್ಲಿ ಕಾರಿನ ಕೀ ಏಕೆ ಕೊಟ್ಟರು ಎಂಬುದು ತಿಳಿಯಲಿಲ್ಲ, ನಂತರ ತನ್ನ ಗಂಡನಿಗೆ ಕೇಳಿದ ಮೇಲೆ ಗೊತ್ತಾಯ್ತು ಮಾವನವರು ನನಗಾಗಿಯೇ ಈ ಕಾರನ್ನು ಗಿಫ್ಟ್ ನೀಡಿದ್ದಾರೆ ಎಂದು. ಈ ವಿಷಯ ತಿಳಿದ ನಂತರ ಅಂಜಲಿಯ ಕಣ್ಣಿಂದ ಒಂದೇ ಸವನೆ ಆನಂದ ಅಶ್ರುಗಳು ಹರಿಯತೊಡಗಿದ್ದವು. ನಾನು ನಿಜಕ್ಕೂ ತುಂಬಾ ಭಾಗ್ಯವಂತಳಿದ್ದೇನೆ, ದೇವರು ಇಂಥ ಮಾವನವರನ್ನು ಪ್ರತಿಯೊಂದು ಹುಡುಗಿಗೆ ಕೊಡಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದಳು. ಅಂಜಲಿ ಸ್ವಂತಕ್ಕೆ ತುಂಬಾ ಅದೃಷ್ಟಶಾಲಿ ಎಂದು ತಿಳಿದುಕೊಂಡಿದ್ದಾಳೆ.