ನಡು ರಸ್ತೆಯಲ್ಲಿ ಮನುಷ್ಯರಂತೆ ಒಂದನ್ನೊಂದು ತಬ್ಬಿಕೊಂಡ ಹಲ್ಲಿಗಳು! ಒಮ್ಮೆ ನೋಡಿ ಈ ವೈರಲ್ ವಿಡಿಯೋ

ನವದೇಹಲಿ: ಸಾಮಾನ್ಯವಾಗಿ ಹಲ್ಲಿ(lizard)ಗಳನ್ನು ಮನೆಯಲ್ಲಿ ಎಷ್ಟೋ ನೋಡಿರುತ್ತೇವೆ. ಅವು ಲೈಟ್ ಕೆಳಗೆ, ಗೋಡೆಯ ಮೇಲಿರುವ ಫೋಟೊಗಳ ಹಿಂದೆ ಹೀಗೆ ಮನೆಯಲ್ಲಿಯ ಎಷ್ಟೋ ಸ್ಥಳಗಳಲ್ಲಿ ಅಡಗಿಕೊಂಡಿರುತ್ತವೆ. ಅವುಗಳನ್ನು ನೋಡಿದರೆ ಕೆಲವರಿಗೆ ತುಂಬಾ ಹೆದರಿಕೆಯೂ ಸಹ ಆಗುವದು. ಹಲ್ಲಿಯೂ ತಮ್ಮದೇ ಆದ ಬೇರೆ ಜಗತ್ತೇ ನಿರ್ಮಾಣ ಮಾಡಿಕೊಂಡಿರುತ್ತವೆ. ಅದರಲ್ಲಿ ಅವು ತಮ್ಮ ಸ್ಥಳಕ್ಕೆ ತಕ್ಕಂತೆ ಬದುಕುತ್ತವೆ. ಸಣ್ಣ ಹಲ್ಲಿಗಳ ಹೊರತಾಗಿ ಅವುಗಳ ಜಾತಿಯಲ್ಲಿ ದೊಡ್ಡ ಹಲ್ಲಿ ಅಂದರೆ ಲೀಜಾರ್ಡ್ ಸಹ ಇರುತ್ತವೆ. ಕೆಲವು ದಿವಸಗಳ ಹಿಂದೆ ಲೀಜಾರ್ಡ್ ಗಳ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಸು ಕಾಬಾರಾ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎರಡು ಲೀಜಾರ್ಡ್ಗಳು ಮನುಷ್ಯರು ಬಹಳಷ್ಟು ದಿವಸಗಳ ಮೇಲೆ ಭೇಟಿಯಾದಾಗ ಹೇಗೆ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವರೋ ಹಾಗೇ ಈ ಎರಡು ಲೀಜಾರ್ಡ್ ಗಳು ಒಂದನ್ನೊಂದು ಅಪ್ಪಿಕೊಳ್ಳುತ್ತಿವೆ. ಈ ಒಂದು ಸುಂದರವಾದ ದೃಶ್ಯ ರಸ್ತೆಯ ಬದಿಗೆ ಕಂಡುಬಂದಿದೆ. ಅಲ್ಲಿ ಹೋಗಿ ಬರುತ್ತಿರುವ ಜನರು ಈ ದೃಶ್ಯ ಕಣ್ತುಂಬ ನೋಡುತ್ತಿದ್ದರೂ ಸಹ ಅವು ತಮ್ಮ ಪ್ರೀತಿಯಿಂದ ಇನ್ನಷ್ಟು ಜೋರಾಗಿ ಅಪ್ಪಿಕೊಳ್ಳುತ್ತಿವೆ. ಅಲ್ಲದೆ ಒಂದಕ್ಕೊಂದು ಜೋರಾಗಿ ಎಳೆದುಕೊಳ್ಳುತ್ತ ರಸ್ತೆಯ ಮೇಲೆ ತಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತಿವೆ.

ವಿಶೇಷವೆಂದರೆ, ಎರಡೂ ಹಲ್ಲಿಗಳ ಉತ್ಸಾಹವನ್ನು ನೋಡುವುದಕ್ಕೆ ಕಣ್ಣುಗಳೇ ಸಾಲದು. ಅಲ್ಲದೆ ಅವೆರಡೂ ಮನುಷ್ಯರಂತೆ ಪರಸ್ಪರ ತಬ್ಬಿಕೊಳ್ಳುತ್ತಿವೆ. ಈ ಲಾಕ್ಡೌನ್ ಕಾಲದಲ್ಲಿ ಈ ಭೇಟಿ ನೋಡಿ ತಮ್ಮ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತ ವಿಡಿಯೋ ನೋಡುತ್ತಿದ್ದಾರೆ. ಈ ವಿಡಿಯೋವನ್ನು ನೋಡಿ ‘ಎ ದೊಸತಿ ಹಮ್ ನಹೀ ಛೋಡೆಂಗೆ…..ಛೋಡೆಂಗೆ ಗಮ್ ಅಗರ್ ತೇರಾ ಸಾಥ್ ನಹೀ ಛೋಡೆಂಗೆ…..ಎಂದು ಕಾಮೆಂಟ್ ಮಾಡುತ್ತಿದ್ದಾರೆ ಅಲ್ಲದೆ ಇನ್ನೊಬ್ಬರು ಏಕ್ ಪ್ಯಾರ್ ಕೀ ಛಪ್ಪಿ ತೋ ಬನತಾ ಹೈ…ಎಂದು ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಹಲ್ಲಿಯ ಒಂದು ಆರ್ಟ್ ವರ್ಕ್ ಕೂಡಾ ಬೆಳಕಿಗೆ ಬಂದಿತ್ತು.

ಕೆಲವು ತಿಂಗಳುಗಳ ಹಿಂದೆ, ಆಸ್ಟ್ರೇಲಿಯಾದ ಕಾಡಿನಲ್ಲಿ ಭಾರಿ ಬೆಂಕಿಯು ಹತ್ತಿದ್ದರಿಂದ ಅಲ್ಲಿಯ ಅನೇಕ ಜನರು ಮತ್ತು ಪ್ರಾಣಿಗಳ ಪ್ರಾಣ ಹಾನಿ ಹಾಗೂ ಸಂಪತ್ತು ಹಾನಿಯುಂಟು ಮಾಡಿತ್ತು. ಸಂತ್ರಸ್ತರ ಸಲುವಾಗಿ ಇಡೀ ಜಗತ್ತಿನಿಂದ ಸಹಾಯ ಬರುತ್ತಿತ್ತು. ಅದೇ ಸಂದರ್ಭದಲ್ಲಿ ಒಂದು ಹಲ್ಲಿ ಕೂಡ ಈ ಕೆಲಸದಲ್ಲಿ ಸಹಕರಿಸುತ್ತಿರುವುದು ಕಂಡುಬಂತು. ಆರ್ಟ್ ಗ್ಯಾಲರಿಯಲ್ಲಿ ಕಂಡುಬರುವ ವರ್ಣಚಿತ್ರಗಳಿಗಾಗಿ, ಹಲ್ಲಿ ಕೂಡ ತನ್ನ ಕಲೆಯನ್ನು ಪ್ರದರ್ಶಿಸಿಸುವ ಸಲುವಾಗಿ ಕ್ಯಾನ್ವಾಸ್‌ನಲ್ಲಿ ತನ್ನ ಪಾದಗಳಿಂದ ವರ್ಣಚಿತ್ರವನ್ನು ಮಾಡಿ ಅದನ್ನು ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಟ್ಟಿತು. ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ.

ಈ ವೀಡಿಯೊದಲ್ಲಿ ಹಲ್ಲಿ ತನ್ನ ಕಾಲುಗಳ ಹಾಗೂ ತನ್ನ ಬಾಲದ ಸಹಾಯದಿಂದ ಪೇಂಟಿಂಗ್ ಮಾಡುತ್ತಿರುವದು ನೋಡುವದಕ್ಕೆ ನಮ್ಮ ಕಣ್ಣುಗಳೇ ಸಾಲದು. . ಅಲ್ಪಾವಧಿಯಲ್ಲಿ ಹಲ್ಲಿ ಕ್ಯಾನ್ವಾಸ್‌ನಲ್ಲಿ ಸಾವಕಾಶವಾಗಿ ಚಲಿಸುತ್ತ ವರ್ಣರಂಜಿತ ಚಿತ್ರವನ್ನು ಬಿಡಿಸಿದೆ.