76 ವರ್ಷದ ಅಜ್ಜಿ ಮಾಡಿದರು ಸೂಪರ್ ಡಾನ್ಸ್! ಅಜ್ಜಿಯ ಮೂವ್ ಮೆಂಟ್ಸ್ ನೋಡಿ ಚೇರ್ ನಿಂದ ಎದ್ದು ನಿಂತರು ಶೋ ದ ಜಡ್ಜ್ ಗಳು!

ಸದ್ಯ ಟಿವಿಯಲ್ಲಿ ಡಾನ್ಸ್ ರಿಯಾಲಿಟಿ ಶೋ Did super mom ತುಂಬಾನೇ ಪ್ರಸಿದ್ಧಿಯನ್ನು ಗಿಟ್ಟಿಸುತ್ತಿದೆ. ಈ ಶೋ ವಿಶೇಷವಾಗಿ ಡಾನ್ಸಿಂಗ್ ಟ್ಯಾಲೆಂಟ್ ಇರುವ ತಾಯಂದಿರರಿಗಾಗಿ ಇದೆ. ಈ ಶೋ ವನ್ನು ಬಾಲಿವುಡ್ ನಟಿಯರಾದ ಉರ್ಮೀಲಾ ಮತೊಂಡ್ಕರ್, ಭಾಗ್ಯಶ್ರೀ ಮತ್ತು ಗ್ರೇಟ್ ಕೊರಿಯೋಗ್ರಾಫರ್ ರೆಮೋ ಡಿಸೋಜ ನಡೆಸುತ್ತಾರೆ. ಇದೇ ಶೋನಲ್ಲಿ 76 ವರ್ಷಗಳ ಹಿರಿಯ ಲಕ್ಷ್ಮಿ ಹೆಸರಿನ ಅಜ್ಜಿಯೊಬ್ಬರು ಕಂಟೆಸ್ಟೆಂಟ್ ಆಗಿ ಬಂದಿದ್ದರು. ಅಜ್ಜಿಯು ಈ ಶೋ ನಲ್ಲಿ ತಮ್ಮ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು. ಈ ನೃತ್ಯ ನೋಡಿದ ನಂತರ ಉರ್ಮೀಲಾ ಮತೊಂಡ್ಕರ್, ಭಾಗ್ಯಶ್ರೀ ಹಾಗೂ ರೆಮೋ ಡಿಸೋಜಾ ಈ ಮೂವರು ತುಂಬಾನೇ ಇಂಪ್ರೆಸ್ ಆಗಿದ್ದಾರೆ.

ಜೀ ಟಿವಿ ಚಾನಲ್ ನವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಡಿವಿಡಿ ಸೂಪರ್ ಮಾಮ್ಸ್ ಗೆ ಸಂಬಂಧಿಸಿದ ಒಂದು ವಿಡಿಯೋ ಪ್ರೋಮೋ ಜಾರಿ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲಕ್ಷ್ಮಿ ಅಜ್ಜಿ ಸ್ಟೇಜ್ ಮೇಲೆ ಹೋಗಿ ತಮ್ಮ 76 ನೇ ವಯಸ್ಸಿನಲ್ಲಿಯೂ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದ ತುಣುಕು ಇದೆ. ಅವರ ನೃತ್ಯವನ್ನು ನೋಡಿ ಶೋ ನಡೆಸುವ ಈ ಮೂವರು ಜಡ್ಜ್ ಗಳು ಆಶ್ಚರ್ಯಚಕಿತರಾಗಿ ತಮ್ಮ ಚೇರ್ ನಿಂದ ಎದ್ದುನಿಂತು ಗೌರವದ ಜೊತೆಗೆ ಅಭಿನಂದಿಸಿದರು.

ಪ್ರಸ್ತುತ ವಿಡಿಯೋದಲ್ಲಿ ಲಕ್ಷ್ಮಿ ಅಜ್ಜಿಯು ಶೋ ನಡೆಸುವ ಮೂವರು ಜಡ್ಜ್ ಜೊತೆಗೆ ತುಂಬಾ ಮಸ್ತಿ ಮಜಾಕ್ ಸಹ ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಡಿಐಡಿ ಸೂಪರ್ ಮಾಮ್ಸ್ ಗೆ ಸಂಬಂಧಿಸಿದ ಈ ವಿಡಿಯೋ ಪ್ರೋಮೋ ತುಂಬಾ ವೇಗದಲ್ಲಿ ವೈರಲ್ ಆಗುತ್ತಿದೆ. ಈ ಶೋ ನೋಡುವ ಅಭಿಮಾನಿಗಳು ಈ ವಿಡಿಯೋವನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಕಾಮೆಂಟ್ನಲ್ಲಿ ಅಭಿಮಾನಿಗಳು ಅಜ್ಜಿಯ ಬಗ್ಗೆ ತಮ್ಮ ಉತ್ತಮ ಪ್ರತಿಕ್ರಿಯೆಗಳನ್ನು ಸಹಿತ ನೀಡುತ್ತಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by ZEE TV (@zeetv)