ವೈರಲ್ ಕಂಟೆಂಟ್! ತಾಯಿ ತನ್ನ 6 ವರ್ಷದ ಮಗನಿಗಾಗಿ ತಯಾರಿಸಿದಳು ಟೈಮ್ ಟೇಬಲ್; ಎಲ್ಲರಿಗೂ ಬೇಕು ಇಂಥ ಸೂಪರ್ ಮಾಮ್ ಎಂದರು ನೆಟ್ಟಿಗರು.
ನಮ್ಮಲ್ಲಿ ಎಷ್ಟೋ ಜನರು ಚಿಕ್ಕಂದಿನಲ್ಲಿ ಟೈಮ್ ಟೇಬಲ್ ತಯಾರು ಮಾಡಿರುತ್ತಾರೆ ಅಲ್ವಾ? ಅದರಲ್ಲಿ ಆಟ, ಪಾಠ ಹಿಡಿದು ಊಟ ತಿಂಡಿಯವರೆಗೆ ಹೀಗೆ ದಿನನಿತ್ಯದ ಎಲ್ಲ ಕೆಲಸಗಳನ್ನು ಆಡ್ ಮಾಡಲಾಗುತ್ತಿತ್ತು.
ದಿನನಿತ್ಯದ ಈ ರೂಟೀನ್ ಫಾಲೋ ಮಾಡುವ ಸಲುವಾಗಿ ಪೋಷಕರು ಮಕ್ಕಳಿಗೆ ತರತರದ ಆಮಿಷವನ್ನು ನೀಡುತ್ತಿದ್ದರು. ಹಾಗೆ ನೋಡಲಾಗಿ ಇಂಟರ್ ನೆಟ್ ನಲ್ಲಿ ಸದ್ಯ ಇದೇ ರೀತಿಯ ಒಂದು ಟೈಮ್ ಟೇಬಲ್ ವೈರಲ್ ಆಗುತ್ತಿದೆ. ಈ ಟೈಮ್ ಟೇಬಲ್ ಒಬ್ಬಳು ತಾಯಿಯು ತನ್ನ 6 ವರ್ಷದ ಮಗನಿಗಾಗಿ ತಯಾರಿಸಿದ್ದಾಳೆ. ಈ ಟೈಮ್ ಟೇಬಲ್ ನೆಟ್ಟಿಗರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದನ್ನು ನೋಡಿದ ನೆಟಿಜನ್ಸ್ ಗಳು ತರತರದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.