Viral Video: ಭಾರತೀಯ ಯುವತಿಯ ಪ್ರೀತಿಯಲ್ಲಿ ಮುಳುಗಿದ ಆಫ್ರಿಕನ್; ಮದುವೆಯಾಗುತ್ತಲೇ ಈ ಕೆಲಸ ಮಾಡಿ ಗೆದ್ದ ಪತ್ನಿಯ ಮನಸ್ಸು!
ದಿನನಿತ್ಯ ಇಂಟರ್ನೆಟ್ನಲ್ಲಿ ಒಂದಕ್ಕಿಂತ ಒಂದು ಒಳ್ಳೆಯ ವಿಡಿಯೋ ಮತ್ತು ಫೋಟೋಗಳು ನೋಡಲು ಸಿಗುತ್ತವೆ. ಇವುಗಳಲ್ಲಿ ಮದುವೆಯ ವಿಡಿಯೋಗಳು ಸಾಕಷ್ಟು ಇರುತ್ತವೆ. ಈ ರೀತಿಯ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಆಕರ್ಷಿಸುತ್ತವೆ. ಈಗ ಮದುವೆಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಸ್ವಲ್ಪ ಬೇರೆಯಾಗಿದೆ. ಇಲ್ಲಿ ಆಫ್ರಿಕನ್ ವ್ಯಕ್ತಿಯೊಬ್ಬ ಭಾರತೀಯ ಹುಡುಗಿಯ ಪ್ರೀತಿಯಲ್ಲಿ ಮುಳುಗಿದ್ದಾನೆ. ಆತ ತನ್ನ ಪತ್ನಿಯ ಪ್ರೀತಿ ಮತ್ತು ವಿಶ್ವಾಸವನ್ನು ಇನ್ನಷ್ಟು ಪಡೆಯುವ ಸಲುವಾಗಿ ಅಥವಾ ಆಕೆಯ ಇನ್ನಷ್ಟು ಹತ್ತಿರ ಹೋಗುವ ಸಲುವಾಗಿ ತುಂಬಾ ಮಹತ್ವದ ಕೆಲಸವನ್ನೇ ಮಾಡಿದ್ದಾನೆ. ತನ್ನ ಭಾವಿಪತ್ನಿಗಾಗಿ ಮಾಡಿದ ಆತನ ಪ್ರಯತ್ನ ನೇಟಿಜನ್ಸ್ ಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಡಿಯೋದಲ್ಲಿ ಯುವತಿಯ ಮುಖ ಕಾಣಿಸುತ್ತಿಲ್ಲ. ಆದರೆ ಆಕೆಯ ಪ್ರೀತಿಗಾಗಿ ಹುಡುಗನು ಮಾಡಿದ ಪ್ರಯತ್ನ ಮಾತ್ರ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.
ಪ್ರಸ್ತುತ ಈ ವಿಡಿಯೋವನ್ನು ಜೇನೋವ ಜೂಲಿಯನ್ ಪ್ರಾಯರ್ ಕೆಲವೇ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ನನ್ನ ಗಂಡ ನನ್ನ ಮಾತೃಭಾಷೆಯಾದ ಮಲಯಾಳಂ ನಲ್ಲಿ ಮದುವೆಯ ಪ್ರತಿಜ್ಞೆಯನ್ನು ಕಲಿತಿದ್ದಾರೆ ಮತ್ತು ಅವರು ಹೇಳಿದ್ದನ್ನು ಕೇಳಿ ನಾನು ತುಂಬಾ ಎಮೋಷನಲ್ ಆಗಿದ್ದೇನೆ ಎಂದಿದ್ದಾರೆ.
ವೈರಲ್ ವಿಡಿಯೋದಲ್ಲಿ ವರ ಡೆನಜೆಲ್ ಎ ಪಾಯರೊರ್ ಮೊದಲು ತನ್ನ ಮಾತುಗಳನ್ನು ಇಂಗ್ಲಿಷ್ ನಲ್ಲಿ ಪ್ರಾರಂಭ ಮಾಡಿದ ನಂತರ ಕೆಲವೇ ಸೆಕೆಂಡುಗಳಲ್ಲಿ ಒಮ್ಮೆಲೆ ಮಲಯಾಳಂ ಭಾಷೆಯಲ್ಲಿ ಮಾತನಾಡಲು ಸ್ಟಾರ್ಟ್ ಮಾಡುತ್ತಾರೆ.
ಮದುಮಗ, ‘ನನಗೆ ನನ್ನ ಪತ್ನಿ, ಬಾಳಸಂಗಾತಿ ಸಿಕ್ಕಿದ್ದಾಳೆ, ನಾನಿಲ್ಲಿ ಸ್ವಲ್ಪ ಮಲಯಾಳಂ ಮಾತನಾಡುವವನಿದ್ದೇನೆ. ನಾನು ನಿನಗೆ ಪ್ರೀತಿ ಮಾಡುತ್ತೇನೆ’, ಎಂದಿದ್ದಾನೆ. ಈ ಮಾತುಗಳನ್ನು ಕೇಳಿ ಅಲ್ಲಿರುವವರೆಲ್ಲರೂ ಚಪ್ಪಾಳೆ ತಟ್ಟಲು ಶುರುಮಾಡುತ್ತಾರೆ.
ವಿಡಿಯೋ ನೋಡಿ
View this post on Instagram
ಒಟ್ಟಿನಲ್ಲಿ ವರನು ಪತ್ನಿಯ ಮಾತೃಭಾಷೆಯನ್ನು ಕಲಿತು ಆಕೆಗೆ ತೀರ ಹತ್ತಿರವಾಗಲು ಹಾಗೂ ಆಕೆಯ ವಿಶ್ವಾಸ ಗಳಿಸಲು ಪ್ರಯತ್ನಿಸಿದ್ದಾನೆ. ಆತನ ಈ ಸುಂದರವಾದ ಪ್ರಯತ್ನವು ಪತ್ನಿಯ ಜೊತೆಗೆ ನೇಟಿಜನ್ಸ್ ಗಳಿಗೂ ತುಂಬಾ ಇಷ್ಟವಾಗಿದೆ.