ರಾ..ರಾ..ರಕ್ಕಮ್ಮಾ ಹಾಡಿಗೆ ವಿಷ್ಣು ದಾದಾ 1984 ರಲ್ಲಿಯೇ ಸಖತ್ ಡಾನ್ಸ್ ಹೊಡೆದಿದ್ದಾರೆ ಎಂದರೆ ನಂಬುತ್ತೀರಾ? ವಿಡಿಯೋ ನೋಡಿ.

ಅನುಪ್ ಭಂಡಾರಿ ಅವರ ಡೈರೆಕ್ಷನ್ ನಲ್ಲಿ ತಯಾರಾದ ವಿಕ್ರಾಂತ್ ರೋಣ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಬಾಲಿವುಡ್ ಫೇಮಸ್ ತಾರೆ ಹಾಗೂ ಶ್ರೀಲಂಕನ್ ಬೆಡಗಿ ಜಾಕ್ಲಿನ್ ಫರ್ನಾಂಡಿಸ್ ತೆರೆ ಹಂಚಿಕೊಂಡಿದ್ದಾರೆ. ಇವರ ಹೊರತಾಗಿ ಈ ಚಿತ್ರದ ಲೀಡ್ ರೋಲ್ ನಲ್ಲಿ ನಿರೂಪ್ ಭಂಡಾರಿ ಮತ್ತು ರವಿಶಂಕರ್ ಗೌಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರ ನಟನೆಯಲ್ಲಿ ಭಾರಿ ಭರವಸೆಯನ್ನು ಹುಟ್ಟಿಸಿದ ವಿಕ್ರಾಂತ ರೋಣ ಮಲ್ಟಿ ಲಾಂಗ್ವೇಜಸ್ ಚಿತ್ರ ಜುಲೈ 28 ಕ್ಕೆ ಚಿತ್ರಮಂದಿರದಲ್ಲಿ ರಾರಾಜಿಸಲಿದೆ. ಚಿತ್ರವು ಬಿಡುಗಡೆಯಾಗುವ ಮುನ್ನವೇ ಸಾಕಷ್ಟು ಸುದ್ದಿ ಮಾಡುತ್ತಲೇ ಇದೆ. ಈ ಚಿತ್ರದಲ್ಲಿ ಟ್ರೆಂಡಿಂಗ್ ಸಾಂಗ್ ರಾ.. ರಾ.. ರಕ್ಕಮ್ಮ ಸದ್ಯ ಎಲ್ಲೆಡೆಯೂ ಕೇಳಿಬರುತ್ತಿದೆ. ದಿನೇದಿನೇ ಈ ಹಾಡಿನ ಹುಕ್ ಸ್ಟೆಪ್ ತುಂಬಾನೇ ಫೇಮಸ್ ಆಗುತ್ತಿದೆ.

ಸದ್ಯ ನಿಮಗೊಂದು ವಿಶೇಷ ಮಾಹಿತಿಯನ್ನು ನೀಡಲಿದ್ದೇವೆ. ಅದೇನೆಂದರೆ ವಿಕ್ರಾಂತ್ ರೋಣ ಚಿತ್ರದಲ್ಲಿಯ ಫೇಮಸ್ ಹಾಡು ರಾ.. ರಾ.. ರಕ್ಕಮ್ಮಾ ಈ ಹಾಡಿಗೆ ನಮ್ಮ ಪ್ರೀತಿಯ ಸಾಹಸಸಿಂಹ ವಿಷ್ಣುವರ್ಧನ್ ಅವರು ಈ ಮೊದಲೇ ಡಾನ್ಸ್ ಮಾಡಿದ್ದಾರೆ.

ಹೇಗೆ ಅಂತೀರಾ?

‘ಮೈಸೂರು ಮ್ಯಾಂಗೋ’ ಹೆಸರಿನ ಯುಟ್ಯೂಬ್ ಚಾನೆಲ್ ನಲ್ಲಿ ಸದ್ಯ ಒಂದು ವಿಡಿಯೋ ಧೂಳೆಬ್ಬಿಸುತ್ತಿದೆ. ಈ ಚಾನಲ್ ನಲ್ಲಿ ವಿಷ್ಣು ದಾದಾ ಅವರ 1984 ರಲ್ಲಿ ನಟಿಸಿದ ಚಿತ್ರದಲ್ಲಿಯ ಹಾಡೊಂದು ಹುಬೇಹುಬ್ ವಿಕ್ರಾಂತ್ ರೋಣ ಚಿತ್ರದ ರಾ.. ರಾ.. ರಕ್ಕಮ್ಮಾ ಹಾಡಿಗೆ ಸರಿಯಾಗಿ ತಳಕು ಹಾಕಲಾಗಿದೆ. ವಿಡಿಯೋ ಬರೀ ಒಂಬತ್ತು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು ಇಲ್ಲಿಯವರೆಗೆ 3.5 ಲಕ್ಷ ಜನರು ವೀಕ್ಷಿಸಿದ್ದಾರೆ.

ನೋಡಿ ಈ ಸಖತ್ ಎಡಿಟೆಡ್ ಸಾಂಗ್…

ಈ ವಿಡಿಯೋ ನೋಡಿದ ನಂತರ ಯೂಟ್ಯೂಬ್ ವೀಕ್ಷಕರು ಯುಟ್ಯೂಬ್ ಚಾನೆಲ್ ಗೆ ಉಘೇ ಉಘೇ ಎಂದು ಹರಿಸಿದ್ದಾರೆ. ತಮ್ಮ ಪ್ರತಿಕ್ರಿಯೆಗಳಲ್ಲಿ ನೆಟ್ಟಿಗರು ಇದು ನಿಜಕ್ಕೂ ಅದ್ಭುತವಾದ ಎಡಿಟಿಂಗ್ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಈ ಹಾಡು ನೋಡಿದ ನಂತರ ಒರಿಜಿನಲ್ ಹಾಡೇ ಇದೇ ಆಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.