J&K ಮಾಜಿ ಡಿಜಿಪಿ ಹೇಳಿಕೆ – ಕಾಶ್ಮೀರದ ಹಿಂದೂಗಳಿಗೆ ಕೊಡಿ ಶ’ಸ್ತ್ರಾಸ್ತ್ರ ಮತ್ತು ಟ್ರೇನಿಂಗ್!
ಜಮ್ಮು ಕಾಶ್ಮೀರದ ಪೊಲೀಸ್ ಡಿಪಾರ್ಟ್ ಮೆಂಟಿನ ಪೂರ್ವ ಡಿಜಿಪಿ. ವೈದ್ಯ ರು ಹೇಳುವ ಹಾಗೆ ಕಣಿವೆ ರಾಜ್ಯದಲ್ಲಿ ಉಗ್ರರೊಂದಿಗೆ ಹೋರಾಡಲು ಬಲಹೀನ ಮುಸ್ಲಿಮರಿಗೂ ಶಸ್ತ್ರಾಸ್ತ್ರಗಳನ್ನು ಕೊಡಬೇಕು.
ಪೂರ್ವ ಡಿಜಿಪಿ. ಹೇಳಿದರು- ಪ್ಲಾನಿಂಗ್ ನೊಂದಿಗೆ ಜಾರಿಗೊಳಿಸಬೇಕು ವಿಲೇಜ್ ಡಿಫೆನ್ಸ್ ಕಮೀಟಿ ಫಾರ್ಮುಲಾ.
ಚೀನಾಬ್ ಕಣಿವೆಯಲ್ಲಿನ ಹಿಂದೂಗಳಿಗೆ ಶಸ್ತ್ರಗಳನ್ನು ಕೊಡುವದರಿಂದ ಅವರ ಪಲಾಯನವನ್ನು ನಿಲ್ಲಿಸಲು ಸಹಾಯವಾಗಿತ್ತು.

ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ನಿರ್ದೇಶಕರಾದ (ಡಿಜಿಪಿ) ಎಸ್ ಪಿ ವೈದ್ಯರು ಹೇಳುವ ಪ್ರಕಾರ ಕಾಶ್ಮೀರದಲ್ಲಿಯ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ಉಪಲಬ್ಧ ಮಾಡಿ ಕೊಡುವದರೊಂದಿಗೆ ಅವರಿಗೆ ಯೋಗ್ಯವಾದ ಟ್ರೇನಿಂಗ್ ಸಹಿತ ಕೊಡಬೇಕು ಎನ್ನುವಂಥ ಮಾತು ಹೇಳಿದರು. ವಿಲೇಜ್ ಡಿಫೆನ್ಸ್ ಕಮೀಟಿ ಫಾರ್ಮೂಲಾವನ್ನು ಜಾರಿಗೊಳಿಸುದರಿಂದ ಯಾವುದೇ ಹಾನಿ ಇಲ್ಲ. ಯಾಕೆಂದರೆ ಚೀನಾಬ್ ಕಾಣಿವೆಯಲ್ಲಿಯ ಹಿಂದೂಗಳಿಗೆ 90 ರ ದಶಕದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದೆವು. ಇದರಿಂದ ಅವರ ಪಲಾಯನವನ್ನು ತಡೆ ಗಟ್ಟಲು ಸಹಾಯವಾಗಿತ್ತು.
ಹೀಗಾಗಿ ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಲು ಅಥವಾ ಅವರಿಂದ ಸ್ವರಕ್ಷಣೆಯನ್ನು ಪಡೆಯಲು ಬಲಹೀನ ಮುಸ್ಲಿಮರಿಗೂ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಬೇಕು.
ಜಮ್ಮು ಕಾಶ್ಮೀರ ಪ್ರದೇಶದಲ್ಲಿ ವಿಲೇಜ್ ಡಿಫೆನ್ಸ್ ಕಮೀಟಿಯನ್ನು ಜಾರಿಯಲ್ಲಿ ತಂದ ಮೊದಲ ವ್ಯಕ್ತಿ ನಾನೇ. ಇಜ್ರೆಲ್ ತರಹ ಕಣಿವೆಯಲ್ಲಿ ಬಲಹೀನ ಪ್ರಜೆಗಳಿಗಾಗಿ ವಿಶೇಷ ಸೌಲಭ್ಯಗಳನ್ನು ಕೊಡುವ ಅವಶ್ಯಕತೆ ಇದೆ.

ಕಣಿವೆ ರಾಜ್ಯದ ಮಾಜಿ ಡಿಜಿಪಿ ಯವರ ಪ್ರಕಾರ ಈ ಫಾರ್ಮೂಲಾವನ್ನು ಜಾರಿ ಗೊಳಿಸುವದು ಕಠಿಣದ ಕೆಲಸವಾಗಿದೆ, ಆದರೆ ಅಸಾಧ್ಯವಲ್ಲ. ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಅಲ್ಲಿಯ ಸರಪಂಚರಾದ ಅಜಯ್ ಪಂಡಿತಾ ಅವರ ಕೊಲೆ ಮಾಡಿದ ಸಂದರ್ಭವನ್ನು ಮುಂದಿಟ್ಟುಕೊಂಡು ಈ ಮೇಲಿನ ವಿಚಾರವನ್ನು ವ್ಯಕ್ತಪಡಿಸಿದ್ದಾರೆ. ಅಜಯ್ ಅವರ ಹತ್ಯೆಯ ಜವಾಬ್ದಾರಿಯನ್ನು ಲಷ್ಕರ್-ಎ-ತೈಯಬಾ ಸಂಘಟನೆಯೊಂದಿಗೆ ಕೂಡಿದ ದ ರೇಜಿಸ್ಟನ್ಸ್ ಫ್ರಂಟ್ (TRF) ತೆಗೆದುಕೊಂಡಿದೆ.
ಉಗ್ರರು ಕಳೆದ ಸೋಮವಾರ ಸಾಯಂಕಾಲ 6 ಗಂಟೆಗೆ ಸರಪಂಚ ಅಜಯ್ ಪಂಡಿತಾ ಅವರ ಹತ್ಯೆಗೈದರು. ಅಜಯ್ ಅವರು ಕಾಂಗ್ರೆಸ್ಸಿನ ಸದಸ್ಯರಾಗಿದ್ದರು. ಉಗ್ರರು ಅಜಯ್ ಅವರಿಗೆ ಬುಲೆಟ್ ನಿಂದ ಗಾಯಗೊಳಿಸಿದಾಗ ಅವರಿಗೆ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅವರಿಗೆ ಸಾಯುವದರಿಂದ ಉಳಿಸಲು ಸಾಧ್ಯವಾಗಲಿಲ್ಲ. ಅಜಯ್ ಅವರ ಹತ್ಯೆಯಿಂದಾಗಿ ದೇಶದ ತುಂಬೆಲ್ಲ ರೋಷ ಉಕ್ಕಿದೆ. ಜೊತೆಗೆ ಕಣಿವೆಯಲ್ಲಿನ ಹಿಂದೂಗಳ ಸಮಸ್ಯೆಯ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ.