ತಮ್ಮ ಪತ್ನಿಗೆ ರಾಣಿಯ ಹಾಗೆ ನೋಡಿಕೊಳ್ಳುತ್ತಾರೆ ಈ ಅಕ್ಷರದಿಂದ ಪ್ರಾರಂಭವಾಗುವ ಯುವಕರು…

Name Astrology: ಪ್ರತಿಯೊಂದು ಹುಡುಗಿ ತನ್ನ ಜೊತೆಗಾರ ತನ್ನ ವುಡ್ ಬಿ ಸದಾಕಾಲ ತನ್ನನ್ನು ಖುಷಿ ನೀಡುವಂಥವನಾಗಿರಬೇಕು ಎಂಬ ಸರಳ ಹಾಗೂ ಸಹಜ ಹಂಬಲ ಹೊಂದಿದವಳಾಗಿರುತ್ತಾಳೆ. ಆಕೆ ತನ್ನ ಗಂಡ ತನ್ನೆಲ್ಲ ಚಿಕ್ಕ ಪುಟ್ಟ ಅವಶ್ಯಕತೆಗಳನ್ನು ಪೂರೈಸಿ ಸಂತೋಷವಾಗಿಡುವವನಾಗಿರಬೇಕು ಎಂಬ ಆಸೆಯನ್ನು ಹೊಂದಿದವಳಾಗಿರುತ್ತಾಳೆ. ಮತ್ತು ಮನಸ್ಸಿನಿಂದ ಸನ್ಮಾನ, ಗೌರವ ನೀಡುವವನಾಗಿರಬೇಕು ಎಂದು ಆಸೆ ಪಡುತ್ತಾಳೆ. ತುಂಬಾ ಅದೃಷ್ಟಶಾಲಿ ಹುಡುಗಿಗೆ ಮಾತ್ರ ಈ ರೀತಿಯ ಬಾಳಸಂಗಾತಿ ಸಿಗುತ್ತಾನೆ.

ಭಾರತದಲ್ಲಿ ಜ್ಯೋತಿಷ ಶಾಸ್ತ್ರ ಇದು ತುಂಬಾ ಪುರಾತನ ಕಾಲದಿಂದಲೂ ನಡೆದು ಬಂದಿದೆ. ಈ ಶಾಸ್ತ್ರದ ಪ್ರಕಾರ ಕೆಲವೇ ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳ ವ್ಯಕ್ತಿಗಳಲ್ಲಿ ಮಾತ್ರ ಈ ವಿಶೇಷವಾದ ಗುಣಗಳು ಇರುತ್ತವೆ ಎಂದು ಹೇಳಲಾಗಿದೆ. ಇವರು ತಮ್ಮ ಪತ್ನಿಯನ್ನು ರಾಣಿಯ ಹಾಗೆ ಇಡುತ್ತಾರೆ. ಅವರ ಪ್ರತಿಯೊಂದು ಚಿಕ್ಕ ಪುಟ್ಟ ಅವಶ್ಯಕತೆಗಳಿಗೆ ತುಂಬಾ ಪ್ರೀತಿಯಿಂದ ಸ್ಪಂದಿಸುತ್ತಾರೆ.

A ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವರು ಇದರಲ್ಲಿ ಸಮಾವೇಶವಾಗುತ್ತಾರೆ. ಮತ್ತು ಇವರು ತಮ್ಮ ವೈವಾಹಿಕ ಸಂಬಂಧವನ್ನು ತುಂಬಾ ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ತನ್ನ ಪತ್ನಿಯ ಜೊತೆಗೆ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಆಕೆಯ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತಾರೆ. ಇವರ ವೈವಾಹಿಕ ಜೀವನ ತುಂಬಾ ಸುಖದಿಂದ ಕೂಡಿರುತ್ತದೆ. ಸಂಬಂಧಗಳನ್ನು ನಿಭಾಯಿಸುವದರಲ್ಲಿ ಎತ್ತಿದ ಕೈ ಉಳ್ಳವರಾಗಿರುತ್ತಾರೆ. ಒಟ್ಟಿನಲ್ಲಿ ತನ್ನ ಪತ್ನಿಯನ್ನು ರಾಣಿಯ ಹಾಗೆ ನೋಡಿಕೊಳ್ಳುತ್ತಾನೆ.

D ಈ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳ ನೇಚರ್ ಪತ್ನಿಯನ್ನು ತುಂಬಾ ಕೇರ್ ತೆಗೆದುಕೊಳ್ಳುವ ಹಾಗಿರುತ್ತದೆ. ಇವರು ತನ್ನ ಪತ್ನಿಯನ್ನು ಹೃದಯದಿಂದ ಪ್ರೀತಿಸುತ್ತಾರೆ. ಜೊತೆಗೆ ಆಕೆಯ ಪ್ರತಿಯೊಂದು ಇಚ್ಛೆಯನ್ನು ಈಡೇರಿಸಲು ಪ್ರಯತ್ನ ಮಾಡುತ್ತಾರೆ. ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಣಯವನ್ನು ತಮ್ಮ ಪತ್ನಿಯ ಜೊತೆಗೆ ಸಲಹೆ, ಸೂಚನೆ ಮತ್ತು ಚರ್ಚಿಸಿದ ನಂತರವೇ ತೆಗೆದುಕೊಳ್ಳುತ್ತಾರೆ. ತಮ್ಮ ಬಾಳಸಂಗಾತಿಯ ಜೊತೆಗೆ ಹೆಚ್ಚು ಹೆಚ್ಚು ಸಮಯವನ್ನು ಕಳೆಯುವ ಉದ್ದೇಶವನ್ನು ಹೊಂದಿರುತ್ತಾರೆ.

N ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿ ತನ್ನ ಪ್ರೀತಿಯ ಪತ್ನಿಗಾಗಿ ಏನೂ ಬೇಕಾದರೂ ಮಾಡಲು ತಯಾರಿರುತ್ತಾರೆ. ತಮ್ಮ ಪತ್ನಿಗೆ ತುಂಬಾ ಮಾನ, ಸನ್ಮಾನ, ಗೌರವ ನೀಡುವಂಥ ಮನಸ್ಸನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರೀತಿಯ ಪತ್ನಿಗೆ ತಲೆಯ ಮೇಲೆ ಕೂಡಿಸಿ ಕೊಂಡಿರುತ್ತಾರೆ ಎಂದರೂ ತಪ್ಪಿಲ್ಲ.

 

P ದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ತಮ್ಮ ಪತ್ನಿಯ ಒಳ್ಳೆಯ ಬಾಳಸಂಗಾತಿಯಾಗಿರುತ್ತಾರೆ. ಇವರು ತಮ್ಮ ಪತ್ನಿಗಾಗಿ ಸಾಕಷ್ಟು ಸಮಯ ನೀಡುವುದರ ಜೊತೆಗೆ ಏನೂ ಬೇಕಾದರೂ ಮಾಡಲು, ನೀಡಲು ಹಿಂಜರಿಯುವುದಿಲ್ಲ. ಅಷ್ಟೇ ಏಕೆ ಇವರು ತಮ್ಮ ಹೆಂಡತಿಗಾಗಿ ತುಂಬಾ ಎಮೋಷನಲ್ ಇರುತ್ತಾರೆ. ತಮ್ಮ ಪತ್ನಿಯ ಪ್ರತಿಯೊಂದು ಮಾತನ್ನು ಕೇಳುತ್ತಾರೆ. ತಮ್ಮ ಬಾಳಸಂಗಾತಿ ಯಾವತ್ತೂ ಖುಷಿಯಲ್ಲಿಯೇ ಇರಬೇಕೆಂದು ಸದಾ ಇದೇ ಪ್ರಯತ್ನದಲ್ಲಿ ಇರುತ್ತಾರೆ.