Video; ಫೇಮಸ್ ಹಾಡೊಂದಕ್ಕೆ ಭಾರತೀಯಳ ಜೊತೆಗೆ ಉದ್ದನೆಯ ಐರಿಷ್ ಹುಡುಗಿ ಹೊಡೆದ ಡಾನ್ಸ್ ಸ್ಟೈಲ್ ಆಯಿತು ವೈರಲ್.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವೈರಲ್ ವಿಡಿಯೋಗಳು ನೋಡಲು ಸಿಗುತ್ತವೆ. ಅದರಲ್ಲೂ ಡಾನ್ಸ್ ಗಳ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತವೆ. ಈಗ ಭಾರತೀಯ ಹುಡುಗಿಯ ಜೊತೆಗೆ ಐರಿಷ್ ಗರ್ಲ್ ಬಾಲಿವುಡ್ ನ ಸೂಪರ್ ಹಿಟ್ ಹಾಡಿಗೆ ಮಾಡಿದ ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ sahirataneja ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ವಿಡಿಯೋ ಇಂಗ್ಲೆಂಡ್ ನಲ್ಲಿಯದಿದೆ. ವಿಡಿಯೋದಲ್ಲಿ ಒಬ್ಬಳು ಭಾರತೀಯ ಹುಡುಗಿ ತನ್ನ ಐರಿಷ್ ಗೆಳತಿಯನ್ನು ಜೊತೆಗೆ ತೆಗೆದುಕೊಂಡು ಬಾಲಿವುಡ್ ಚಿತ್ರ ಅಗ್ನಿಪಥ್ ದಲ್ಲಿಯ ಸೂಪರ್ ಹಿಟ್ ಸಾಂಗ್ ಚಿಕನಿ ಚಮೇಲಿ ಹಾಡಿಗೆ ಕುಣಿದಿದ್ದಾಳೆ. ಇಬ್ಬರೂ ಈ ಹಾಡಿಗೆ ತುಂಬಾ ಮಸ್ತಿ ಮಾಡುತ್ತ ಹಾಗೆಯೇ ನ್ಯಾಚುರಲ್ ಆಗಿ ಮೂವ್ ಮೆಂಟ್ ಮಾಡಿದ್ದಾರೆ. ವಿಶೇಷವೆಂದರೆ ಡಾನ್ಸ್ ಮುಗಿದ ತಕ್ಷಣ ತಮ್ಮ ನೃತ್ಯಕ್ಕೆ ತಾವೇ ಮನಸೋ ಇಚ್ಛೆ ನಕ್ಕಿದ್ದಾರೆ. ಹೀಗಾಗಿ ಈ ವಿಡಿಯೋದ ಕ್ಯಾಪ್ಶನ್ ನಲ್ಲಿ ‘ನಾವು ವಿಫಲರಾಗಿದ್ದು ನಿಜ, ಆದರೆ ಎಂಜಾಯ್ ಮಾತ್ರ ಫುಲ್ ಮಾಡಿದ್ದೇವೆ’ ಎಂದಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Sahira Taneja Dockx (@sahirataneja)

ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 7 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು 50 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.