Video: ಡಾನ್ಸೇ ಗೊತ್ತಿಲ್ಲದ ಯುವಕ, ಆದ್ರೂ ತನ್ನ ಭಾವಿ ಪತ್ನಿಗಾಗಿ ಎಲ್ಲರೆದುರು ಡಾನ್ಸ್ ಮಾಡಿಯೇ ಬಿಟ್ಟ! ಆ ಮಜವಾದ ಸೀನ್ ನೋಡಲೇಬೇಕಲ್ಲ..!

ಮೇ, ಏಪ್ರಿಲ್ ತಿಂಗಳುಗಳು ಉರುಳಿ ಹೋದರೂ ಮದುವೆಗಳು ಮಾತ್ರ ನಿಲ್ಲುತ್ತಿಲ್ಲ. ಹಾಗೂ ಅಲ್ಲಿ ನಡೆದ ವಿವಿಧ ದೃಶ್ಯಗಳು ವೈರಲ್ ಆಗುವುದೂ ಸಹ ನಿಲ್ಲುತ್ತಿಲ್ಲ. ಈಗ ಮದುವೆಯಲ್ಲಿಯ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮಾಡುತ್ತಿದೆ. ಈ ವಿಡಿಯೋದಲ್ಲಿ ಯುವಕ ಡಾನ್ಸ್ ಮಾಡಿದ ದೃಶ್ಯವೊಂದು ತುಂಬಾ ವಿಶೇಷವಾಗಿದೆ. ಹಾಗೂ ಚರ್ಚೆಯ ವಿಷಯವಾಗಿದೆ.

ಈ ವಿಡಿಯೋದಲ್ಲಿಯ ಯುವಕನಿಗೆ ಡಾನ್ಸ್ ಎಂಬುದೇ ಗೊತ್ತಿಲ್ಲ. ಆದರೂ ತನ್ನ ಭಾವಿ ಪತ್ನಿಯ ಮೇಲಿನ ಪ್ರೀತಿಗಾಗಿ ತುಂಬಾ ಸಖತ್ ಡಾನ್ಸ್ ಹೊಡೆದಿದ್ದಾನೆ. ಮತ್ತು ಅಲ್ಲಿದ್ದವರೆಲ್ಲರ ಮನಸ್ಸು ಗೆದ್ದಿದ್ದಾನೆ. ಈ ದೃಶ್ಯ ಯಂಗೆಜ್ ಮೆಂಟ್ ಸಂದರ್ಭದಲ್ಲಿ ನಡೆದಿದೆ. ಯುವಕ ಅನಿರೀಕ್ಷಿತವಾಗಿ ಕುಣಿದು ತನ್ನ ಪತ್ನಿಯಾಗುವವಳಿಗೆ ಸರ್ಪೈಸ್ ನೀಡಿದ್ದಾನೆ. ಮೊದಲು ಮೊಳಕಾಲಿನ ಮೇಲೆ ಕುಳಿತು ತನ್ನ ಭಾವಿ ಪತ್ನಿಗೆ ರಿಂಗ್ ತೊಡಿಸುತ್ತಾನೆ. ತದನಂತರ ಆಕೆಯ ಸುತ್ತುಗಟ್ಟಿ ಡ್ಯಾನ್ಸ್ ಬರದೆ ಇದ್ದರೂ ಒಂದೊಂದೇ ಸ್ಟೆಪ್ಸ್ ಗಳನ್ನು ಉಪಯೋಗಿಸಿ ಹೊಡೆಯಲು ಶುರು ಮಾಡುತ್ತಾನೆ. ತನಗೆ ಎಳ್ಳಷ್ಟೂ ಕುಣಿಯಲು ಬಾರದಿದ್ದರೂ ತನ್ನ ಪತ್ನಿಯ ಆಸೆಗಾಗಿ ಯುವಕ ಕುಣಿಯಲು ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ಯುವಕ 90 ಮತ್ತು 20 ದಶಕದ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾನೆ.

ವಿಡಿಯೋ ನೋಡಿ

ತನ್ನ ಭಾವಿ ಪತಿಗೆ ಕುಣಿಯಲು ಬರುವದಿಲ್ಲ ಎಂಬುದು ಆ ಹುಡುಗಿಗೂ ಮೊದಲೇ ಗೊತ್ತಿತ್ತು. ಆದರೂ ಆಕೆಯ ಮುಂದೆ ಕುಣಿಯುವ ಪ್ರಯತ್ನವನ್ನು ಈ ಯುವಕ ಮಾಡಿದ್ದ. ಆ ಹುಡುಗಿಗೂ ತನ್ನ ಭಾವಿ ಗಂಡನ ಈ ಗುಣ ತುಂಬಾ ಇಷ್ಟವಾಗಿದೆ. ಮತ್ತು ಆಕೆಯ ಕಣ್ಣಲ್ಲಿ ಸಂತಸದ ಭಾಷ್ಪಗಳು ತಾನಾಗಿಯೇ ಬಂದಿವೆ.