ಜುಗಾಡ್ ಮತ್ತು ಕಾಮೆಡಿ ಮಿಕ್ಸ್ ಅಪ್! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ 14 ಫೋಟೋಗಳು ಸಖತ್ ಕಾಮಿಡಿ…

ಹಿಂದಿಯಲ್ಲಿ ಒಂದು ಗಾದೆ ಮಾತಿದೆ, ‘ಕಬಾಡ್ ಸೆ ಜೂಗಾಡ್’ ನಿರುಪಯೋಗ ವಸ್ತುಗಳಿಂದ ಏನಾದರೂ ಒಂದು ಉಪಯುಕ್ತ ವಸ್ತುವನ್ನು ತಯಾರಿಸಿಕೊಳ್ಳುವುದು ಅದನ್ನೇ ನಾವು ಕನ್ನಡದಲ್ಲಿ ‘ಕಸದಿಂದ ರಸ’ ಹೇಳಬಹುದು. ಇದರ ಮುಂದೆ ಒಳ್ಳೆಯ ಟೆಕ್ನಿಕ್ ಸಹ ಫೇಲ್ ಆಗುತ್ತದೆ. ಈ ರೀತಿಯ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿಯವರೆಗೆ ಎಷ್ಟೋ ನೋಡಿರಬಹುದು. ಅಂತಹ ವಿಶೇಷ 14 ಫೋಟೋಗಳನ್ನು ಈ ಲೇಖನದಲ್ಲಿ ನಿಮಗಾಗಿ ತಂದಿದ್ದೇವೆ. ಇಲ್ಲಿರುವ ಕೆಲವು ಫೋಟೋಗಳು ಅಂತ ನಿಮಗೆ ತುಂಬಾ ವಿಚಾರ ಮಾಡಲು ಜೊತೆಗೆ ನಗಿಸಲು ಹಚ್ಚುತ್ತವೆ. ಇಲ್ಲಿ ಜೂಗಾಡ್ ಹಾಗೂ ಕಾಮಿಡಿ ಎರಡು ಮಿಕ್ಸ್ ಅಪ್ ಆಗಿವೆ. ನೋಡಿ ಅವು ಯಾವುವು?

1. ಟ್ರೈನ್ನಲ್ಲಿ ರಿಸರ್ವೇಶನ್ ಸಿಕ್ಕಿಲ್ಲ ಅಂದರೆ ಚಿಂತಿಸಬೇಡಿ, ಜನರಲ್ ಬೋಗಿಯಲ್ಲಿ ಈ ಬರೀ ಕುಳಿತುಕೊಳ್ಳಲು ಸಿಕ್ಕರೂ ಸಾಕಾಗಿರುತ್ತದೆ. ಅಂಥದ್ದರಲ್ಲಿ ಈ ಭೂಪ ಆರಾಮಾಗಿ ಮಲಗಲು ಈ ದಾರಿ ಹುಡುಕಿದ್ದಾನೆ ನೋಡಿ.

2. ಕೆಲಸವೂ ಮಾಡಬೇಕಾಗಿದೆ ಜೊತೆಗೆ ಮಗುವಿನ ಕಡೆಗೆ ಗಮನವೂ ನೀಡಬೇಕು ಅಂದಾಗ ಅದೇಗೆ ಸಾಧ್ಯ? ಅದು ಹೀಗೆ ಸಾಧ್ಯ. ಈ ಮಹಿಳೆಗೆ ನೋಡಿದರೆ ಇದು ಅಷ್ಟೊಂದು ಕಷ್ಟದ ಕೆಲಸವಲ್ಲ ಎನಿಸುತ್ತದೆ. ಆದರೆ ಮಗುವಿಗೆ ಗ್ಯಾಸ್ ನ ಹತ್ತಿರ ಕೂಡಿಸುವುದು ಸರಿಯಲ್ಲ ಅಲ್ಲವೇ?

3. ಈತನಿಗೆ ಎನನ್ನಬೇಕು? ಮಳೆಯಲ್ಲಿಯೇ ಗಿಡಗಳಿಗೆ ನೀರು ಹನಿಸುತ್ತಿದ್ದಾನೆ. ಅದು ತಾನು ಕೊಡೆ ಹಿಡಿದುಕೊಂಡು. ಫೋಟೋ ನೋಡಿದ ಯೂಸರ್ಸ್ ಗಳು ನೀರು ಮುಂದಿನ ಬೇಸಿಗೆಗಾಗಿ ಸೇವ್ ಮಾಡಪ್ಪ ಎಂದು ಸಲಹೆ ನೀಡುತ್ತಿದ್ದಾರೆ.

4. ಎರಡು ಪುಟ್ಟ ಮಕ್ಕಳನ್ನು ಒಂದೇ ಬೈಕ್ ಮೇಲೆ ಒಬ್ಬನೇ ವ್ಯಕ್ತಿ ಅದ್ಹೇಗೆ ಒಯ್ಯುವುದು? ಎಂಬ ಚಿಂತೆಯೇ? ಅದಕ್ಕೆ ತುಂಬಾ ಸಿಂಪಲ್ ಆನ್ಸರ್ ಇಲ್ಲಿದೆ ನೋಡಿ.

5. ನಿದ್ರೆಯಂತೂ ತುಂಬಾ ಜೋರಾಗಿ ಬರುತ್ತಿದೆ ಆದರೆ ಸುತ್ತಮುತ್ತ ಪಲ್ಲಂಗವೇ ಇಲ್ಲ. ಏನು ಮಾಡೋದು? ಓಕೆ, ಏನು ಅಡ್ಡಿಯಿಲ್ಲ, ಇವತ್ತಿನ ದಿವಸ ಎಮ್ಮೆಯ ಬೆನ್ನ ಮೇಲೆಯೇ ಆರಾಮ ಮಾಡಿದರಾಯ್ತು.

6. ಈ ಆಂಟಿಗೆ ಯಾರು ಹೇಳಬೇಕು ಬರುತ್ತಿರುವುದು ಬೈಕ್ ಅಲ್ಲ ದೊಡ್ಡದಾದ ಟ್ರೈನ್ ಅಂತ. ಈ ಟ್ರೈನಿಗೂ ಆಂಟಿ ಕೈ ಮಾಡಿ ನಿಲ್ಲಲು ಅಥವಾ ಲಿಫ್ಟ್ ಕೇಳಲು ನಿಂತ ಹಾಗೆ ಕಾಣುತ್ತಿದೆ.

7. ‘ನೀ ನನಗಾದರೆ ನಾ ನಿನಗೆ’ ಎಂಬ ನುಡಿಯಂತೆ ಇಬ್ಬರು ಕೊರೆಯುವ ಚಳಿಯಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿದ್ದಾರೆ. ಇದನ್ನೇ ವಿಚಾರ ಮಾಡಿ ಇಬ್ಬರೂ ಈ ಐಡಿಯಾಗೆ ಒಪ್ಪಿರಬೇಕು.

8. ಈ ಭೂಪ ಹಣ ತೆಗೆಯಲು ತನ್ನ ಬೈಕನ್ನು ನೇರ ಎಟಿಎಂ ನಲ್ಲಿಯೇ ತೆಗೆದುಕೊಂಡು ಹೋಗಿದ್ದಾನೆ. ಯಾವ ಕಾರಣಕ್ಕೆ ಗೊತ್ತಿಲ್ಲ. ರಾತ್ರಿಯ ಸಮಯದಲ್ಲಿ ಬೈ ಚೋರಿ ಯಾಗುತ್ತದೆ ಅಂತಲೋ ಅಥವಾ ಈ ಭೂಪನ ಹತ್ತಿರ ಬೈಕ್ ನಿಲ್ಲಿಸಿ ಎಟಿಎಂ ನಲ್ಲಿ ಹೋಗಿ ಬರುವಷ್ಟು ಸಮಯವೂ ಇಲ್ಲವೋ ಆತನಿಗೆ ಮಾತ್ರ ಗೊತ್ತು.

9. ಕಸದಿಂದ ರಸ ಎನ್ನುವ ಹಾಗೆ ಜನ ಈ ಐಡಿಯಾ ನೋಡಿ ಇದನ್ನು ತಯಾರಿಸಿದ ವ್ಯಕ್ತಿಯ ವಿಳಾಸ ಕೇಳ್ತಿದ್ದಾರೆ.

10. ನನ್ನ ಕೆಲಸವಂತೂ ಬರೀ ಬೋರ್ಡ್ ಹಚ್ಚುವದಿದೆ. ತಿಳಿದವರು ತಿಳಿದುಕೊಳ್ಳಲಿ ಅಥವಾ ಬಿಡಲಿ. ನಾನಂತೂ ನನ್ನ ಬಾಯಿಂದ ಸಿಗರೇಟ್ ತೆಗೆಯುವುದಿಲ್ಲ.

11. ತಳ್ಳೋ ಗಾಡಿಯ ಮುಂದೆ ಎಷ್ಟೊತ್ತು ನಿಲ್ಲುವುದು? ನಿಂತು ನಿಂತು ಸಾಕಾದಾಗ ಈ ಐಡಿಯಾ ಕೆಲಸಕ್ಕೆ ಬಂತು.

12. ಇದ್ಹೇಗಿದೆ ಐಡಿಯಾ? ಒಡೆದು ಹೋದ ನೀರಿನ ಟ್ಯಾಂಕನಿಂದ ಸರಿಯಾದ ಉಪಯೋಗ.

13. ಬೆಂಚ್ ಮೇಲೆ ಮಲಗಲು ಹೊಟ್ಟೆಯಾಗುತ್ತಿದೆಯಾ ಸಮಸ್ಯೆ? ಚಿಂತೆಯೇ ಬೇಡ ಇಲ್ಲಿದೆ ನೋಡಿ ಸೂಪರ್ ಐಡಿಯಾ. ಮಾಡಿ ಆರಾಮಾಗಿ ನಿದ್ದೆ.

14. ಹೇಗಿದೆ ಈ ಹೊಸ ಮಾಡೆಲ್ ಗಡಿಯಾರ. ಅರ್ಧ ಒಡೆದು ಹೋದರೆ ಏನಂತೆ. ಸಮಯವೇ ನೋಡುವುದಿದೆಯಲ್ಲ? ಮಷೀನ್ ಒಳ್ಳೆಯದಿದ್ದರೆ ಆಯಿತು. ಈ ರೀತಿ ಗೋಡೆಯ ಮೇಲೆ ನಂಬರ್ ಹಾಕಿಬಿಡಿ.