ವೇಗದ ರೈಲಿಗಿಂತಲೂ ಸೂಪರ್ ಫಾಸ್ಟ್ ಮೋಷನ್ ನಲ್ಲಿ ಟಿಕೆಟ್ ನೀಡುವ ಅಜ್ಜನ ವಿಡಿಯೋ ಆಯಿತು ವೈರಲ್!

ದೊಡ್ಡ ದೊಡ್ಡ ಮಹಾನಗರಗಳಲ್ಲಿ ಟ್ರೈನ್ ಟಿಕೆಟ್ ತೆಗೆಯಲು ತುಂಬಾ ಉದ್ದವಾದ ಲೈನ್ ನಲ್ಲಿ ನಿಂತು ಬುಕಿಂಗ್ ಆಫೀಸ್ ವರೆಗೆ ಹೋಗಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ. ಎಷ್ಟೋ ಜನರಿಗೆ ಸಾಕಷ್ಟು ಸಮಯ ಟಿಕೆಟ್ ಗಾಗಿ ನಿಲ್ಲುವದೂ ಕೂಡ ಆಗುವದಿಲ್ಲ. ಇದು ಹೆಚ್ಚು ಕಡಿಮೆ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಯಾತ್ರಿಕರಿಗಾಗಿ ಕೆಲವೊಂದು ಸೌಲಭ್ಯಗಳನ್ನು ರೇಲ್ವೆ ಬೋರ್ಡ್ ಮಾಡಿದೆ. ಸ್ವತಂತ್ರ ಮಶೀನ್ ಗಳನ್ನು ಸಹ ಬುಕಿಂಗ್ ಆಫೀಸ್ ಹೊರಗಡೆ ಇಟ್ಟಿದ್ದಾರೆ. ಇಲ್ಲಿಯೂ ನಾವೇ ಟಿಕೆಟ್ ತೆಗೆಯಲು ಬರುತ್ತದೆ, ಇಲ್ಲವೇ ಕೆಲವರು ಟಿಕೆಟ್ ತೆಗೆದು ಕೊಡಲು ಉಪಸ್ಥಿತರಿರುತ್ತಾರೆ. ಹೀಗೆ ನಿಂತವರಲ್ಲಿ ಒಬ್ಬ ಟಿಕೆಟ್ ನೀಡುವ ಅಜ್ಜನ ಕಮಾಲ್ ಸೂಪರ್ ಆಗಿದೆ ಎಂದೇ ಹೇಳಬಹುದು. ಈ ವ್ಯಕ್ತಿಯು ಟಿಕೆಟ್ ನೀಡುವ ವೇಗ ಸ್ಟೈಲ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋ ಮುಂಬಯಿಯಲ್ಲಿಯದಿದೆ. ಇಲ್ಲಿಯ ಲೋಕಲ್ ಟ್ರೈನ್ ಗಳ ಓಡಾಟ ಬೆಂಗಳೂರಲ್ಲಿ ಸಿಟಿಬಸ್ ಗಳು ಒಡಾಡಿದಂತೆ. ಅಷ್ಟೊಂದು ಟ್ರೈನ್ ಗಳು ನಿಮಿಷ ನಿಮಿಷಕ್ಕೆ ಇತ್ತಿಂದ ಅತ್ತ, ಅತ್ತಿಂದ ಇತ್ತ ಸದಾ ನಡೆದೇ ಇರುತ್ತವೆ. ಇಷ್ಟಿದ್ದರೂ ಜನರಿಗೆ ಇಲ್ಲಿ ಸಮಯದ ಅಭಾವ ಕಂಡು ಬರುತ್ತದೆ ಮತ್ತು ಸದಾ ಗಡಿಬಿಡಿಯಲ್ಲಿಯೇ ಇಲ್ಲಿಯ ಜನರು ಸುತ್ತಾಡುತ್ತಾರೆ. ಈ ವಿಡಿಯೋದಲ್ಲಿ ಅಜ್ಜನೊಬ್ಬ ಇಂತಹ ಗಡಿಬಿಡಿಯ ಜನಕ್ಕೆ ಅವರ ಗಡಿಬಿಡಿಗಿಂತ 50 ಪಟ್ಟು ವೇಗದಲ್ಲಿ ಟ್ರೈನ್ ಟಿಕೆಟ್ ನೀಡುತ್ತಾನೆ. ಅವರ ಟಿಕೆಟ್ ನೀಡುವ ಸ್ಪೀಡ್ ನೋಡಿದರೆ ಮನುಷ್ಯ ದಂಗಾಗುತ್ತದೆ. ಒಂದು ಟಿಕೆಟ್ ಬರೀ 5 ಸೆಕೆಂಡುಗಳ ಒಳಗಾಗಿಯೇ ತೆಗೆದು ಕೊಡುತ್ತಾನೆ.

ನೋಡಿ ಈ ವಿಡಿಯೋ…

ಈ ಅಜ್ಜ ಟಿಕೆಟ್ ತೆಗೆದು ಕೊಡುವ ಸ್ಟೈಲ್ ನೋಡಿದರೆ ಇವರಿಗೆ ಇದರ ಸೂಪರ್ ಎಕ್ಸ್ಪಿರಿಯನ್ಸ್ ಇದ್ದದ್ದು ಕಂಡು ಬರುತ್ತದೆ. ಇವರು ಮೂರು ಟಿಕೆಟ್ ಗಳನ್ನು ಬುಕ್ ಮಾಡಿ ಕೊಡಲು 15 ಸೆಕೆಂಡುಗಳಿಗಿಂತಲೂ ಕಡಿಮೆ ಸಮಯ ತೆಗೆದುಕೊಂಡಿದ್ದಾರೆ.

ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 8 ಲಕ್ಷಕ್ಕೂ ಹೆಚ್ಚಿನ ಜನರು ನೋಡಿದ್ದಾರೆ. ಮತ್ತು 30 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.