Viral Video: ಚಲಿಸುತ್ತಿರುವ ಟ್ರೈನ್ ನ ಬಾಗಿಲಿಗೆ ನಿಂತು ಶೋಕಿ ಮಾಡಲು ಹೋದ ಹುಡುಗಿಯ ಆವಾಂತರ ನೋಡಿ ಏನಾಗಿದೆ?
ಸೋಶಿಯಲ್ ಮೀಡಿಯಾದಲ್ಲಿ ಯೂಸರ್ ಗಳಿಗೆ ಅನೇಕ ರೀತಿಯ ವಿಚಿತ್ರ ಮತ್ತು ರೋಚಕತೆಯಿಂದ ಕೂಡಿದ ಕಂಟೆಂಟ್ ಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳು ನೋಡುಗರಿಗೆ ಕೆಲವೊಮ್ಮೆ ತುಂಬಾ ಶಾಕ್ ನೀಡುತ್ತವೆ. ಈಗ ನೋಡಲಿರುವ ವಿಡಿಯೋ ಸಹ ಇದೇ ರೀತಿ ಆಶ್ಚರ್ಯದಿಂದ ತುಂಬಿದ ವಿಡಿಯೋನೆ ಆಗಿದೆ.
ಪ್ರಸ್ತುತ ಘಟನೆ ಮುಂಬಯಿಯ ಲೋಕಲ್ ಟ್ರೈನ್ ನಲ್ಲಿಯದಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಲೋಕಲ್ ಟ್ರೈನ್ ನ ಬಾಗಿಲಲ್ಲಿ ನಿಂತು ಸ್ಟೈಲ್ ಹೊಡೆಯಲು ಹೋಗಿದ್ದು ಆಕೆಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ. ಆದರೆ ಅದೃಷ್ಟ ಮಾತ್ರ ಆಕೆಗೆ ಕೈಕೊಟ್ಟಿಲ್ಲ.
ಹುಡುಗಿಯು ಚಲಿಸುತ್ತಿರುವ ಲೋಕಲ್ ಟ್ರೈನ್ ನ ಬಾಗಿಲಲ್ಲಿ ನಿಂತು ಸ್ವಲ್ಪ ಸ್ಟೈಲ್ ಹೊಡೆಯಬೇಕೆಂದು ಹೊರಗಡೆ ವಾಲಿದ್ದಾಳೆ. ಸರಿಯಾಗಿ ಅದೇ ಸಮಯಕ್ಕೆ ಎದುರಿನಿಂದ ಹಠಾತ್ ಬೇರೊಂದು ಲೋಕಲ್ ಟ್ರೈನ್ ಶರವೇಗದಲ್ಲಿ ಬಂದಿದೆ. ರಭಸದಲ್ಲಿ ಒಮ್ಮೆಲೇ ಬಂದ ಟ್ರೈನ್ ನೋಡಿದ್ದರಿಂದ ಹಾಗೂ ಅದರ ಗಾಳಿಗೆ ಹುಡುಗಿಯ ಬ್ಯಾಲೆನ್ಸ್ ತಪ್ಪಿ ಟ್ರೈನಿನ ಹೊರಗಡೆ ಜಾರಿದ್ದಾಳೆ. ಆಗ ಆಕೆ ಭಾರದಿಂದಾಗಿ ಹಿಡಿದ ಕೈ ಒಮ್ಮೆಲೆ ಬಿಟ್ಟುಬಿಟ್ಟಿದ್ದಾಳೆ. ಇನ್ನೇನು ಆಕೆ ಕೆಳಗೆ ಬೀಳುತ್ತಾಳೆ ಎನ್ನುವಷ್ಟರಲ್ಲಿ ಒಂದು ಚಮತ್ಕಾರ ಘಟಿಸಿದೆ.
ಆಕೆ ಬೀಳುವಾಗ ಆಕೆಯ ಹತ್ತಿರ ನಿಂತ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ತಕ್ಷಣ ಆಕೆಯ ಜಾರಿದ ಕೈಯನ್ನು ಹಿಡಿದು ಬಿಟ್ಟಿದ್ದಾನೆ. ಆ ಸಂದರ್ಭದಲ್ಲಿ ಹುಡುಗಿಯು ಕೆಲವು ಕ್ಷಣಗಳವರೆಗೆ ಟ್ರೈನಿನ ಬಾಗಿಲಲ್ಲಿಯೇ ನೇತಾಡುತ್ತಿದ್ದಳು. ತದನಂತರ ತಕ್ಷಣ ಇಬ್ಬರು ಕೂಡಿ ಆಕೆಯನ್ನು ಮೇಲಕ್ಕೆತ್ತಿದ್ದಾರೆ. ಹುಡುಗಿಯ ಮುಖದಲ್ಲಿಯ ಭಾವ ಆ ಸಂದರ್ಭದಲ್ಲಿ ಪುನರ್ಜನ್ಮವಾದಂತೆ ಕಂಡುಬರುತ್ತಿತ್ತು.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು gieddee ಹೆಸರಿನ ಇನ್ಸ್ಟಾ ಗ್ರಾಮ್ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ ಮತ್ತು ಲೈಕ್ ಸಹ ಮಾಡಿದ್ದಾರೆ.