Video; ರಾನು ಮಂಡಲ್ ಸೊಂಟಕ್ಕೆ ಟವೆಲ್ ಸುತ್ತಿ ಬೇರೆಯೇ ಅವತಾರ್ ನಲ್ಲಿ ಡಾನ್ಸ್ ಹೊಡೆದು ಮತ್ತೆ ಆದರು ಸುದ್ದಿ..!

ರಾನು ಮಂಡಲ್ ಮತ್ತು ಸೋಶಿಯಲ್ ಮೀಡಿಯಾ ಇಬ್ಬರು ಒಂದಕ್ಕೊಂದು ತಳಕು ಹಾಕಿಕೊಂಡಿದೆ. ರಾನು ಮಂಡಲ್ ಏನೇ ಮಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆಲೇ ಸುದ್ದಿಯಾಗಿ ಬಿಡುತ್ತಾರೆ. ಇದಕ್ಕೂ ಮೊದಲು ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ ಚಿತ್ರ ಪುಷ್ಪಾ ಹಾಡಿಗೆ ನೃತ್ಯ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದರು. ಈಗ ಮತ್ತೊಂದು ಹಾಡಿಗೆ ಕುಣಿದು ರಾನು ಮಂಡಲ್ ಮತ್ತೆ ಸುದ್ದಿಯಲ್ಲಿದ್ದಾರೆ.

ಪ್ರಸ್ತುತ ವಿಡಿಯೋದಲ್ಲಿ ರಾನು ಅವರು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು ನಟಿಸಿದ ಮೇಲಾ ಚಿತ್ರದ ಹಾಡಿಗೆ ಕುಣಿದಿದ್ದಾರೆ.

ಈ ವಿಡಿಯೋ ರಾನು ಮಂಡಲ್ ಫ್ಯಾನ್ಸ್ ಗಳಿಗೆ ಸಕ್ಕತ್ ಇಷ್ಟವಾಗುತ್ತಿದೆ. ವಿಡಿಯೋದಲ್ಲಿ ಕಂಡು ಬರುವ ಹಾಗೆ ರಾನು ಅವರು ಬ್ಲೂ ಬಣ್ಣದ ಮ್ಯಾಕ್ಸಿ ತೊಟ್ಟಿದ್ದಾರೆ. ಅದರ ಮೇಲೆ ಸೊಂಟಕ್ಕೆ ಒಂದು ಕೆಂಪು ಟವಲ್ ಬಿಗಿದು ಬಿಂದಾಸಾಗಿ ನೃತ್ಯ ಮಾಡುತ್ತಿದ್ದಾರೆ. ಈ ಕುಣಿತದಲ್ಲಿ ರಾನು ಅವರ ಮನೆಯ ಸದಸ್ಯನೊಬ್ಬ ರಾನು ಅವರಿಗೆ ತುಂಬಾ ಜೋಶ್ ನಲ್ಲಿ ಸಾತ್ ನೀಡುತ್ತಿದ್ದಾನೆ. ರಾನು ಅವರ ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳು ಲೈಕ್ಸ್ ಮತ್ತು ಕಮೆಂಟ್ಗಳ ಮಳೆ ಸುರಿಸುತ್ತಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗನೊಬ್ಬ ರಾನು ಅವರಿಗೆ ತನ್ನ ಕಮೆಂಟ್ ನಲ್ಲಿ, ವಾವ್ ಗಾಯನದ ನಂತರ ಈಗ ಕುಣಿತವು ಶುರುವಾಯ್ತಾ? ಎಂದಿದ್ದಾನೆ. ಇನ್ನೊಬ್ಬ ಯುಸರ್ ನಿಮ್ಮಲ್ಲಿ ಈ ಟ್ಯಾಲೆಂಟ್ ಇರುವುದು ಗೊತ್ತಾಗಿದ್ದುದು ಇವತ್ತೇ ಎಂದಿದ್ದಾನೆ. ರಾನು ಅವರೇ, ನಿಮ್ಮ ಹಾಡು ನಮಗೆ ಬೇಕಿಲ್ಲ, ನಿಮ್ಮ ಡಾನ್ಸಿನ ನೆಕ್ಸ್ಟ್ ವಿಡಿಯೋ ಯಾವಾಗ ಬರುತ್ತೆ ಹೇಳಿ ನಾವು ಕಾಯುತ್ತಿದ್ದೇವೆ ಎಂದಿದ್ದಾನೆ ಇನ್ನೊಬ್ಬ. ಹಾಗೆ ನೋಡಲಾಗಿ ಕೆಲವು ಅಭಿಮಾನಿಗಳು ರಾನು ಅವರ ವಾಯ್ಸ್ ಈಗಲೂ ಇಷ್ಟಪಡುತ್ತಾರೆ. ರಾನು ಅವರು ಈಗ ಹಾಡುವುದರೊಂದಿಗೆ ನೃತ್ಯವು ಮಾಡುತ್ತಿದ್ದಾರೆ. ಹೀಗಾಗಿ ಅವರು ಮಾಡಿದ ಈ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ