ದಾರಿ ಮಧ್ಯದಲ್ಲಿ ಮನುಷ್ಯರಂತೆ ತಬ್ಬಿಕೊಂಡ ಕೊಮೊಡೋ ಡ್ರ್ಯಾಗನ್ (ಭಾರೀ ಗಾತ್ರದ ಹಲ್ಲಿಗಳು). ವಿಡಿಯೋ ವೈರಲ್!
ನವದೇಹಲಿ: ಸಾಮಾನ್ಯವಾಗಿ ಹಲ್ಲಿ(lizard)ಗಳನ್ನು ಮನೆಯಲ್ಲಿ ಎಷ್ಟೋ ನೋಡಿರುತ್ತೇವೆ. ಅವು ಲೈಟ್ ಕೆಳಗೆ, ಗೋಡೆಯ ಮೇಲಿರುವ ಫೋಟೊಗಳ ಹಿಂದೆ ಹೀಗೆ ಮನೆಯಲ್ಲಿಯ ಎಷ್ಟೋ ಸ್ಥಳಗಳಲ್ಲಿ ಅಡಗಿಕೊಂಡಿರುತ್ತವೆ. ಅವುಗಳನ್ನು ನೋಡಿದರೆ ಕೆಲವರಿಗೆ ತುಂಬಾ ಹೆದರಿಕೆಯೂ ಸಹ ಆಗುವದು. ಹಲ್ಲಿಯೂ ತಮ್ಮದೇ ಆದ ಬೇರೆ ಜಗತ್ತೇ ನಿರ್ಮಾಣ ಮಾಡಿಕೊಂಡಿರುತ್ತವೆ. ಅದರಲ್ಲಿ ಅವು ತಮ್ಮ ಸ್ಥಳಕ್ಕೆ ತಕ್ಕಂತೆ ಬದುಕುತ್ತವೆ. ಸಣ್ಣ ಹಲ್ಲಿಗಳ ಹೊರತಾಗಿ ಅವುಗಳ ಜಾತಿಯಲ್ಲಿ ದೊಡ್ಡ ಅಥವಾ ಭಾರಿ ಗಾತ್ರದ ಹಲ್ಲಿಗಳೂ ಸಹ ಇರುತ್ತವೆ. ಅವುಗಳಿಗೆ ಕೊಮೊಡೋ ಡ್ರ್ಯಾಗನ್ ಎನ್ನುತ್ತಾರೆ. ಕೆಲವು ದಿನಗಳಿಂದ ಈ ಕೊಮೊಡೋ ಡ್ರ್ಯಾಗನ್ ಗಳ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಸು ಕಾಬಾರಾ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎರಡು ಕೊಮೊಡೋ ಡ್ರ್ಯಾಗನ್ ಗಳು, ಮನುಷ್ಯರು ಬಹಳಷ್ಟು ದಿವಸಗಳ ಮೇಲೆ ಭೇಟಿಯಾದಾಗ ಹೇಗೆ ಒಬ್ಬರಿಗೊಬ್ಬರು ತಬ್ಬಿಕೊಳ್ಳುವರೋ ಹಾಗೇ ಈ ಎರಡು ಡ್ರ್ಯಾಗನ್ ಗಳು ಒಂದನ್ನೊಂದು ಅಪ್ಪಿಕೊಳ್ಳುತ್ತಿವೆ. ಈ ಒಂದು ಸುಂದರವಾದ ದೃಶ್ಯ ರಸ್ತೆಯ ಬದಿಗೆ ಕಂಡುಬಂದಿದೆ. ಅಲ್ಲಿ ಹೋಗಿ ಬರುತ್ತಿರುವ ಜನರು ಈ ದೃಶ್ಯ ಕಣ್ತುಂಬ ನೋಡುತ್ತಿದ್ದರೂ ಸಹ ಅವು ತಮ್ಮ ಪ್ರೀತಿಯಿಂದ ಇನ್ನಷ್ಟು ಜೋರಾಗಿ ಅಪ್ಪಿಕೊಳ್ಳುತ್ತಿವೆ. ಅಲ್ಲದೆ ಒಂದಕ್ಕೊಂದು ಜೋರಾಗಿ ಎಳೆದುಕೊಳ್ಳುತ್ತ ರಸ್ತೆಯ ಮೇಲೆ ತಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತಿವೆ.
Meeting your bestie after 3 months of #Lockdown. 😂.#FridayThoughts.#BestFriends. pic.twitter.com/0bmBtN4FAr
— Dipanshu Kabra (@ipskabra) June 12, 2020
ವಿಶೇಷವೆಂದರೆ, ಎರಡೂ ಡ್ರ್ಯಾಗನ್ ಗಳ ಉತ್ಸಾಹವನ್ನು ನೋಡುವುದಕ್ಕೆ ಕಣ್ಣುಗಳೇ ಸಾಲದು. ಅಲ್ಲದೆ ಅವೆರಡೂ ಮನುಷ್ಯರಂತೆ ಪರಸ್ಪರ ತಬ್ಬಿಕೊಳ್ಳುತ್ತಿವೆ. ಲಾಕ್ಡೌನ್ ಕಾಲದಲ್ಲಿ ಈ ಭೇಟಿ ನೋಡಿ ತಮ್ಮ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತ ವಿಡಿಯೋ ನೋಡುತ್ತಿದ್ದಾರೆ. ಈ ವಿಡಿಯೋವನ್ನು ನೋಡಿ ‘ಎ ದೊಸತಿ ಹಮ್ ನಹೀ ಛೋಡೆಂಗೆ…..ಛೋಡೆಂಗೆ ಗಮ್ ಅಗರ್ ತೇರಾ ಸಾಥ್ ನಹೀ ಛೋಡೆಂಗೆ…..ಎಂದು ಕಾಮೆಂಟ್ ಮಾಡುತ್ತಿದ್ದಾರೆ ಅಲ್ಲದೆ ಇನ್ನೊಬ್ಬರು ಏಕ್ ಪ್ಯಾರ್ ಕೀ ಛಪ್ಪಿ ತೋ ಬನತಾ ಹೈ…ಎಂದು ಸಹ ಪ್ರತಿಕ್ರಿಯೆ ನೀಡಿದ್ದಾರೆ.