ಕ್ಯಾಪ್ಟನ್ ಕೂಲ್ ಧೋನಿ, ಪತ್ನಿ ಸಾಕ್ಷಿ ಜೊತೆಗೆ ಇಂಗ್ಲೆಂಡ್ ನಲ್ಲಿ BIRTH DAY ಆಚರಣೆ; ವಿಡಿಯೋ ನೋಡಿ…!!

ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಎರಡು ವಿಶ್ವಕಪ್ ಜಯಗಳಿಸಿದ ಮಹೇಂದ್ರ ಸಿಂಗ್ ಧೋನಿ ಇಂದು 41 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 41 ನೇ ಹುಟ್ಟುಹಬ್ಬವನ್ನು ಮಾಹಿಯವರು ಇಂಗ್ಲೆಂಡ್‌ನಲ್ಲಿ ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.

ಜುಲೈ 4 ರಂದು ಧೋನಿ ಮತ್ತು ಸಾಕ್ಷಿ ವಿವಾಹ ವಾರ್ಷಿಕೋತ್ಸವ ಇತ್ತು. ದಂಪತಿಗೆ ಮದುವೆಯಾಗಿ 12 ವರ್ಷಗಳಾಗಿವೆ. ಹೀಗಿರುವಾಗ ಇಬ್ಬರೂ ರಜೆಯ ಮೇಲೆ ಇಂಗ್ಲೆಂಡಿಗೆ ಹೋಗಿದ್ದಾರೆ. ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಇಲ್ಲಿಯೇ ಆಚರಿಸಿದರು ಮತ್ತು ಇದೀಗ ಧೋನಿ ಅವರ ಜನ್ಮದಿನವನ್ನೂ ಸಹ ಆಚರಿಸಿದ್ದಾರೆ

ಧೋನಿ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಮತ್ತು ಫೋಟೋಗಳನ್ನು ಸಾಕ್ಷಿ ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನೀವು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ನೋಡಬಹುದು. ಪಂತ್ ಪ್ರಸ್ತುತ ಟೀಂ ಇಂಡಿಯಾದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅಲ್ಲಿ ಅವರು ಟೆಸ್ಟ್ ಪಂದ್ಯವನ್ನು ಆಡುತ್ತಿದ್ದರು. ಸದ್ಯಕ್ಕೆ ಟೀಮ್ ಇಂಡಿಯಾ ಇಂಗ್ಲೆಂಡ್ ದೊಂದಿಗೆ ಮೂರು ಟಿ-20 ಪಂದ್ಯ ಮತ್ತು ಮೂರು ಏಕದಿನ ಪಂದ್ಯ ಆಡಲಿದ್ದಾರೆ. ಸಾಕ್ಷಿಯವರು ಶೇರ್ ಮಾಡಿರುವ ಈ ವಿಡಿಯೋದಲ್ಲಿ ದೋನಿಯವರು ಭರ್ಜರಿಯಾಗಿ ಕಾಣುತ್ತಿದ್ದಾರೆ. ಧೋನಿ ಮೊದಲು ಮೋಂಬತ್ತಿಯನ್ನು ಆರಿಸುತ್ತಾರೆ ತದನಂತರ ಅವರು ಎರಡು ಕೈಯಲ್ಲಿ ಚಾಕು ಹಿಡಿದು ಚಾಕುವಿನಿಂದ ಕೇಕ್ ಕಟ್ ಮಾಡುತ್ತಿರುವದನ್ನು ನೋಡಬಹುದು. ಈ ಸಮಯದಲ್ಲಿ ಹಿಂಬದಿಯಲ್ಲಿ ಇಂಗ್ಲಿಷ್ ಹಾಡು ಹಚ್ಚಿರುವದನ್ನು ನೀವು ಕೇಳಬಹುದು.

ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ 15 ಆಗಸ್ಟ್ 2020 ರಂದು ನಿವೃತ್ತ ತಗೆದುಕೊಂಡರು. ಧೋನಿಯವರು ಟೀಮ್ ಇಂಡಿಯಾದ ಸಲುವಾಗಿ ಕೊನೆಯ ಪಂದ್ಯ 2019 ರ ವಿಶ್ವಕಪ್ ನಲ್ಲಿ ಆಡಿದ್ದರು. ಮಾಹಿ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಅಷ್ಟೇ ಅಲ್ಲ ಚೆನ್ನೈ ತಂಡದ ನಾಯಕ ಸಹ ಇದ್ದಾರೆ. ಇವರು ಭಾರತೀಯ ತಂಡದ ಸರ್ವಶ್ರೇಷ್ಠ ನಾಯಕರಾಗಿದ್ದರು. ಇವರು ತಮ್ಮ ನಾಯಕತ್ವದಲ್ಲಿ ದೇಶದ ಸಲುವಾಗಿ ಮೂರು ಐಸಿಸಿ ಸ್ಪರ್ಧೆ ಗೆದ್ದಿದ್ದಾರೆ. ಧೋನಿಯವರ ನೇತೃತ್ವದಲ್ಲಿ ಪ್ರಥಮ 2007 ರಲ್ಲಿ ಟೀ-20 ವಿಶ್ವಕಪ್, 2011 ರಲ್ಲಿ ಏಕದಿನ ವಿಶ್ವಕಪ್ ಮತ್ತು 2013 ರಲ್ಲಿ ಚಾಂಪಿಯನ್ ಟ್ರಾಫಿ ಸಹ ಗೆದ್ದು ಕೊಟ್ಟಿದ್ದಾರೆ. ಈ ಮೂರು ಸ್ಪರ್ಧೆಯಲ್ಲಿ ಗೆಲ್ಲುವ ಜಗತ್ತಿನಲ್ಲಿಯ ಏಕೈಕ್ ಕ್ಯಾಪ್ಟನ್ ಮಾಹಿಯಾಗಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Sakshi Singh (@sakshisingh_r)