Video: ಯುವತಿಗೆ ಫ್ಯೂಲ್ ಟ್ಯಾಂಕ್ ಮೇಲೆ ಕೂಡಿಸಿ ಸ್ಟಂಟ್ ಮಾಡಲು ಶುರು ಮಾಡಿದ ಯುವಕ! ನೆಕ್ಸ್ಟ್ ಸೀನ್ ಆಗಿತ್ತು ಸೂಪರ್

ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆಲೆ ಪ್ರಸಿದ್ಧಿ ಪಡೆಯಬೇಕೆಂದು ಹದಿಹರೆಯದ ಹುಡುಗ ಹುಡುಗಿಯರು ಏನಾದರೊಂದು ವಿಚಿತ್ರ ಕೆಲಸಕ್ಕೆ ಕೈ ಹಾಕುತ್ತಾರೆ. ಅದರಲ್ಲೂ ಇತ್ತೀಚೆಗೆ ಬೈಕ್ ಮೇಲಿನ ಸ್ಟ್ರೆಂಟ್ ಗಳನ್ನು ಮಾಡಲು ಈಗಿನ ಯುವಕ ಯುವತಿಯರು ಸ್ವಲ್ಪವೂ ಹೆದರದೆ ತುಂಬಾ ಇಷ್ಟ ಪಡುತ್ತಾರೆ. ಈ ರೀತಿಯ ವಿಡಿಯೋಗಳು ಕೆಲವೊಂದು ಸಲ ತುಂಬಾ ಒಳ್ಳೆಯ ಪಾಠವನ್ನು ಸಮಾಜಕ್ಕೆ ನೀಡುವುದು ಉಂಟು. ಸದ್ಯ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಸ್ಟಂಟ್ ಮಾಡಲು ಮುಂದಾದ ಈ ಹದಿಹರೆಯದ ಹಕ್ಕಿಗಳ ಅವಸ್ಥೆ ಏನಾಗಿದೆ ನೋಡಿ.

ರಸ್ತೆಯ ಮೇಲೆ ಹುಡುಗನೊಬ್ಬ ಸ್ಪೋರ್ಟ್ಸ್ ಬೈಕ್ ಮೇಲೆ ತನ್ನ ಗೆಳತಿಯನ್ನು ಕೂಡಿಸಿಕೊಂಡು ಹೋಗುತ್ತಿರುತ್ತಾನೆ. ಮಧ್ಯದಲ್ಲಿ ಹಿಂದೆ ಕುಳಿತ ಹುಡುಗಿಗೆ ಫ್ಯೂಲ್ ಟ್ಯಾಂಕ್ ಮೇಲೆ ಕುಳಿತುಕೊಳ್ಳಲು ಹೇಳುತ್ತಾನೆ. ಆಕೆಯೂ ಸಹ ತನ್ನ ಬಾಯ್ ಫ್ರೆಂಡ್ ಹೇಳುವುದಷ್ಟೇ ತಡ ಫ್ಯೂಲ್ ಟ್ಯಾಂಕ್ ಮೇಲೆ ಹೋಗಿ ಕುಳಿತುಕೊಳ್ಳುತ್ತಾಳೆ. ಆಕೆ ಕುಳಿತುಕೊಳ್ಳುವುದೇ ತಡ ಹುಡುಗ ಜೋರಾಗಿ ರೇಸ್ ಮಾಡಿ ಬೈಕ್ ಓಡಿಸುತ್ತಾ ಹೋಗುತ್ತಾನೆ. ಆ ವೇಗದಲ್ಲಿಯೇ ತನ್ನ ಹಾಗೂ ಆ ಗೆಳತಿಯ ಹೀಗೆ ಇಬ್ಬರ ಜೀವವನ್ನು ಅಪಾಯದಲ್ಲಿ ಸಿಲುಕಿಸಿ ಸ್ಟಂಟ್ ಮಾಡಲು ಶುರು ಮಾಡುತ್ತಾನೆ. ಇಷ್ಟೆಲ್ಲ ನಡೆಯುವಾಗ ವಿಡಿಯೋದಲ್ಲಿ ಹಠಾತ್ತನೆ ಒಂದು ಟ್ವಿಸ್ಟ್ ನೋಡಲು ಸಿಗುತ್ತದೆ. ನೆಟ್ಟಿಗರಿಗೆ ಈ ದೃಶ್ಯ ನೋಡಿದ ನಂತರ ತುಂಬಾ ಖುಷಿಯಾಗಿದೆ. ಕಾರಣ ಬೈಕ್ ಮೇಲೆ ಸ್ಟಂಟ್ ಮಾಡುತ್ತಾ ನಡೆದಿರುವಾಗ ಎದುರಿಗೆ ಪೊಲೀಸ್ ಬಂದೇ ಬಿಡುತ್ತಾನೆ. ಪೊಲೀಸನ ಕೈಗೆ ಸಿಕ್ಕ ನಂತರ ಕಂಡು ಬಂದ ದೃಶ್ಯ ನೋಡಲು ತುಂಬಾ ವಿಶೇಷವಾಗಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋದಲ್ಲಿ ಕೊನೆಗೆ ಪೊಲೀಸ್ ಎಂಟ್ರಿ ಆಗುತ್ತಾನೆ ಮತ್ತು ಬೈಕ್ ನಿಂದ ಅವರನ್ನು ಇಳಿಸುವದರ ಜೊತೆಗೆ ವಾಹನದ ಕೀ ಸಹ ತೆಗೆದುಕೊಳ್ಳುತ್ತಾನೆ. ಮುಂದೇನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ನೋಡುಗರಿಗೆ ಈ ದೃಶ್ಯ ತುಂಬಾ ಖುಷಿಯೂ ನೀಡುತ್ತದೆ. ಈ ವಿಡಿಯೋದಿಂದ ನೋಡುಗರು ಒಂದು ಒಳ್ಳೆಯ ಪಾಠವಂತೂ ಕಲಿತೆ ಕಲಿಯುತ್ತಾರೆ ಅಲ್ವಾ? ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ punjabi_industry__ ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ.