Viral Video: ಯಮರಾಜನ ಮಿಸ್ ಕಾಲ್..! ಸಾವು ಯುವಕನಿಗೆ ಟಚ್ ಮಾಡಿ ಹೋಯಿತು; ಮೈನವಿರೇಳಿಸುವ ದೃಶ್ಯ!

ಜೀವನ ತುಂಬಾ ಅನಿಶ್ಚಿತತೆಯಿಂದ ಕೂಡಿದೆ. ಈಗಷ್ಟೇ ಮಾತನಾಡಿ ಹೋದ ವ್ಯಕ್ತಿ ಒಮ್ಮೆಲೆ ಇಲ್ಲ ಎಂಬಂತೆ ಎಷ್ಟೋ ಶಾಕಿಂಗ್ ಸುದ್ದಿಗಳನ್ನು ಈ ಮೊದಲು ಕೇಳಿದ್ದೇವೆ. ಆಗ ಜೀವನ ಎಲ್ಲವೂ ಶೂನ್ಯ ಎನಿಸಿ ಬಿಡುತ್ತದೆ. ಈಗಿನ ಸಂದರ್ಭದಲ್ಲಿ ಯಾರ ಜೊತೆಗೆ ಯಾವಾಗ ಎಂಥ ದುರ್ಘಟನೆಗಳು ನಡೆಯುತ್ತವೆ ಎಂಬುದು ಹೇಳಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇದೇ ರೀತಿಯ ಒಂದು ವಿಶೇಷ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ಸಾವು ಯುವಕನ ಅತೀ ಸಮೀಪಕ್ಕೆ ಬಂದು ಆತನಿಗೆ ಸ್ಪರ್ಶ ಮಾಡಿ ಹೋಗಿದೆ ಎಂದರೆ ತಪ್ಪಾಗಲಾರದು.

ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಯುವಕನೊಬ್ಬ ಕೈಯಲ್ಲಿ ಹೆಲ್ಮೆಟ್ ಹಿಡಿದು ರಸ್ತೆಯ ಬದಿಗಿರುವ ಫುಟ್ ಪಾತ್ ಮೇಲೆ ಯಾವುದೋ ಕಾಗದ ಪತ್ರಗಳನ್ನು ವೀಕ್ಷಿಸುತ್ತಾ ನಿಂತಿದ್ದಾನೆ. ಸರಿಯಾಗಿ ಅದೇ ಸಮಯಕ್ಕೆ ವೇಗದ ಓವರ್ ಲೋಡೆಡ್ ಟ್ರಕ್ ಒಂದು ಹಿಂದಿನಿಂದ ಹಠಾತ್ತನೆ ಬಂದು ವ್ಯಕ್ತಿಯ ಮಗ್ಗುಲಲ್ಲಿಯೇ ಜೋರಾಗಿ ಅಪ್ಪಳಿಸಿದೆ. ಇದಕ್ಕೆ ಕಾರಣ ಟ್ರಕ್ ನ ಮೇಲಿನ ಭಾಗ ರಸ್ತೆಯ ಬದಿಯಲ್ಲಿರುವ ಮರದ ರೆಂಬೆಗೆ ಸಿಕ್ಕಿ ಹಾಕಿಕೊಂಡಿದೆ ಮತ್ತು ವಾಹನ ತನ್ನ ನಿಯಂತ್ರಣವನ್ನು ಕಳೆದುಕೊಂಡು ಟ್ರಕ್ ನ ಮುಂದಿನ ಅರ್ಧ ಭಾಗ ಮೇಲಕ್ಕೆದ್ದು ಬದಿಯ ಫುಟ್ ಪಾತ್ ಮೇಲೆ ಯುವಕನ ಹತ್ತಿರ ಅಪ್ಪಳಿಸಿದೆ. ಈ ದೃಶ್ಯ ನೋಡುವಾಗ ಯುವಕನ ಕಥೆ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿಯೇ ಟ್ರಕ್ ಆತನನ್ನು ಬದಿಗೆ ಸರಿಸಿದೆ. ಈ ಭಯಂಕರ ದುರಂತದಲ್ಲಿ ಯುವಕ ಅದೃಷ್ಟವಶಾತ್ ಪಾರಾಗಿ ಉಳಿದಿದ್ದಾನೆ. ಆತನಿಗೆ ಚಿಕ್ಕಪುಟ್ಟ ಗಾಯವೂ ಆಗಿಲ್ಲ ಎಂಬುದು ವಿಶೇಷ. ಕಾರಣ ಯುವಕ ಬದುಕಿದೆಯಾ ಬಡಜೀವವೇ ಎಂದು ಮೊದಲು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ವಿಡಿಯೋ ನೋಡಿ

ಒಟ್ಟಿನಲ್ಲಿ ಯಮರಾಜನ ಮಿಸ್ ಕಾಲ್ ಮಾತ್ರ ಬಂದು ಹೋಗಿದೆ ಎನ್ನುವ ಹಾಗೆ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ ದಿಪಾಂಶು ಕಾಬರಾ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ 30 ಲಕ್ಷಕ್ಕೂ ಮೀರಿ ವೀಕ್ಷಣೆ ಪಡೆದಿದೆ.