ನೀರಿನಲ್ಲಿ ಕರೆಂಟ್ ಇಳಿದು ಚಡಪಡಿಸಿ ಸಾಯುತ್ತಿರುವ ಹಸುವಿಗೆ ಬಟ್ಟೆಯಿಂದ ಜಗ್ಗಿ ಜೀವ ಉಳಿಸಿದ ಮಹಾನುಭಾವನ ವಿಡಿಯೋ ವೈರಲ್!

ಸದ್ಯ ಎಲ್ಲೆಡೆಯೂ ಮಳೆಯ ರಭಸ ಹೆಚ್ಚಾಗಿದೆ. ಅನೇಕ ಕಡೆಗೆ ಪ್ರವಾಹ ಮತ್ತು ಇನ್ನು ಕೆಲವು ಕಡೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮನುಷ್ಯರ ಜೊತೆಗೆ ಮೂಕಪ್ರಾಣಿಗಳು ಸಹ ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ಮಳೆಯ ಪರಿಸ್ಥಿತಿಯಲ್ಲಿ ಅನೇಕ ಸಲ ನೀರಿನಲ್ಲಿ ವಿದ್ಯುತ್ ಪ್ರವಾಹ ಹರಿದು ಅನೇಕ ಜೀವಿಗಳ ಜೀವಕ್ಕೆ ಕುತ್ತು ಉಂಟಾಗುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಹಸುವೊಂದು ಕರೆಂಟ್ ನಿಂದ ಚಡಪಡಿಸುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಏನದು ನೋಡಿ…

ಪ್ರಸ್ತುತ ವಿಡಿಯೋದಲ್ಲಿ ಹಸು ನೀರಿನಲ್ಲಿ ತಿರುಗಾಡುತ್ತ ವಿದ್ಯುತ್ ಕಂಬದ ಹತ್ತಿರ ಬಂದಿದೆ. ದೃಶ್ಯದಲ್ಲಿ ರಸ್ತೆಯ ಮೇಲೆ ಎಲ್ಲಿ ಬೇಕಾದಲ್ಲಿ ನೀರು ನಿಂತಿರುವುದು ಕಂಡು ಬರುತ್ತಿದೆ. ಆ ನೀರಿನಲ್ಲಿಯೇ ದಾರಿ ತೆಗೆಯುತ್ತ ಹಸು ತನ್ನಷ್ಟಕ್ಕೆ ತಾನು ವಿದ್ಯುತ್ ಕಂಬದ ಹತ್ತಿರ ಬರುತ್ತದೆ. ಅಲ್ಲಿ ಬರುತ್ತಲೇ ಅದಕ್ಕೆ ವಿದ್ಯುತ್ ಶಾಕ್ ತಗುಲಲು ಶುರುವಾಗಿದೆ. ಪಾಪ ಹಸುವಿಗೆ, ತನಗೆ ಏನಾಗುತ್ತಿದೆ ಎಂಬುದು ಹೇಗೆ ತಿಳಿಯಬೇಕು? ಅದು ಹಾಗೆಯೇ ಚಡಪಡಿಸುತ್ತಾ ಅಲ್ಲಿಯೇ ಒದ್ದಾಡುತ್ತಾ ಒದ್ದಾಡುತ್ತಾ ದೂರ ಸರಿಯಲು ಅಸಾಧ್ಯ ಪ್ರಯತ್ನ ಮಾಡಿದೆ. ಇದು ಅದಕ್ಕೆ ಸಾಧ್ಯವಾಗದೆ ನಂತರ ಅಲ್ಲಿಯೇ ಕೆಳಗೆ ಬಿದ್ದು ಬಿಟ್ಟಿದೆ. ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವ ಹಸುವಿನ ದೃಶ್ಯ ಅಲ್ಲಿಯೇ ಇರುವ ಅಂಗಡಿ ಮಾಲೀಕನ ಗಮನಕ್ಕೆ ಬಂದಿದೆ. ಇದನ್ನು ನೋಡುತ್ತಲೇ ಅಂಗಡಿ ಮಾಲೀಕ ಹಠಾತ್ ಆಕ್ಟಿವ್ ಆಗಿದ್ದಾನೆ. ಮತ್ತು ತಕ್ಷಣ ಹಸುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ವ್ಯಕ್ತಿ ಅಂಗಡಿಯೊಳಗೆ ಹೋಗಿ ಒಂದು ಉದ್ದವಾದ ಬಟ್ಟೆಯನ್ನು ತಂದು ಹಸುವಿನ ಕಾಲಿಗೆ ಸುತ್ತಿ ಅದನ್ನು ಹಿಡಿದು ಎಳೆಯುವಾಗ ಆತನ ಸಹಾಯಕ್ಕೆ ಇನ್ನಿಬ್ಬರು ಬಂದು ಕೈ ಜೋಡಿಸಿದ್ದಾರೆ. ಹೀಗಾಗಿ ಆತನ ಕೆಲಸ ಇನ್ನಷ್ಟು ಸುಲಭವಾಗಿ ಹಸು ಸಾವಿನಿಂದ ಪಾರಾಗಿದೆ. ಆ ವ್ಯಕ್ತಿ ಮತ್ತು ಇನ್ನಿಬ್ಬರು ಕೂಡಿ ಹಸುವಿನ ಜೀವ ಉಳಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಮತ್ತು ಮೂವರು ಕೂಡಿ ಮೂಕ ಪ್ರಾಣಿಯ ಜೀವ ಉಳಿಸಲು ಮಾಡಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯವೇ ಸರಿ, ಅಲ್ವಾ?

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ ‘ಅನಾಮಿಕ ಜೈನ್ ಅಂಬರ್’ ಹೆಸರಿನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1.2 ಮಿಲಿಯನ್ ವರೆಗೆ ವೀಕ್ಷಣೆಯನ್ನು ಪಡೆದಿದ್ದು 1 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಪಡೆದಿದೆ.