Video; ದಂಪತಿಗಳಿಬ್ಬರೂ ಒಬ್ಬರಿಗೊಬ್ಬರು ಮದುವೆಯ ಸ್ವೀಟ್ಸ್ ತಿನ್ನಿಸುವ ಈ ಖತರ್ನಾಕ್ ಪದ್ಧತಿ ಇಲ್ಲಿವರೆಗೆ ನೋಡೇ ಇಲ್ಲ! ಅಲ್ವಾ? ಹಾಗಾದರೆ ಇಲ್ಲಿ ನೋಡಿ.

ಮದುವೆ ಒಂದು ಪವಿತ್ರ ಬಂಧನ. ಇಲ್ಲಿ ಎರಡು ಜೀವಗಳು ಸದಾಕಾಲ ಕೊನೆಯವರೆಗೂ ಒಂದುಗೂಡಿ ಬಾಳಲು ಜೊತೆಯಾಗಿ ಹೆಜ್ಜೆ ಇಡುತ್ತಾರೆ. ಹೀಗೆಲ್ಲಾ ನಡೆದಿರುವಾಗ ಮದುವೆಯಲ್ಲಿ ನಡೆದ ಅನೇಕ ವಿಶೇಷ ಘಟನೆಗಳು ಇಂಟರ್ನೆಟ್ ನಲ್ಲಿ ನಮಗೆ ನೋಡಲು ಸಿಗುತ್ತವೆ. ಸದ್ಯ ಮದುವೆಯಲ್ಲಿಯ ಮದುಮಕ್ಕಳ ತುಂಬಾ ವಿಶೇಷವಾದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿ ಎಲ್ಲೆಡೆಯೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬನ್ನಿ ಅದ್ಯಾವುದು ಎಂಬುದು ನೋಡೋಣ.

ಪ್ರಸ್ತುತ ವಿಡಿಯೋದಲ್ಲಿ ಮದುಮಕ್ಕಳು ಇಬ್ಬರೂ ಸ್ಟೇಜ್ ಮೇಲೆ ನಿಂತಿದ್ದಾರೆ. ಆರತಕ್ಷತೆಯ ಕಾರ್ಯಕ್ರಮ ಅದೇ ಜಸ್ಟ್ ಮುಗಿದೇ ಹೋಗಿರುತ್ತದೆ. ತದ ನಂತರ ಸಂಬಂಧಿಕರು ಇಬ್ಬರಿಗೂ ಸಂತೋಷವನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಸ್ವೀಟ್ಸ್ ತಿನ್ನಲು ಹೇಳುತ್ತಾರೆ. ಮೊದಲು ವರ ವಧುವಿಗೆ ಪ್ರೀತಿಯಿಂದ ಸಿಹಿಯನ್ನು ತಿನ್ನಿಸಲು ಮುಂದಾಗುತ್ತಾನೆ. ಆಗ ವಧು ವರನಿಗೆ ತನಗೆ ಸಿಹಿ ಬೇಡ ಎಂದು ನಿರಾಕರಿಸಲು ಪ್ರಯತ್ನಿಸುತ್ತಾಳೆ. ಆದರೂ ವರ ಸ್ವಲ್ಪ ಹೊತ್ತು ಕಾಯ್ದು ನಂತರ ತನ್ನ ಭಾವಿ ಪತ್ನಿಯ ಬಾಯಿಯಲ್ಲಿ ಸಿಹಿಯನ್ನು ಸಿಟ್ಟಿನಿಂದ ತುರುಕಿ ಬಿಡುತ್ತಾನೆ. ಈಗ ಸರದಿ ವಧು ವರನ ಬಾಯಿಗೆ ಸಿಹಿ ಹಾಕುವ ಸಮಯ. ವಧು ಸಹ ತನ್ನ ಪತಿಯ ಬಾಯಿಯಲ್ಲಿ ಸಿಹಿ ಹಾಕಲು ಮುಂದಾದಾಗ ವರನು ಸಹ ತನ್ನ ಪತ್ನಿಯ ಹಾಗೆ ಮೊದಲು ನಿರಾಕರಿಸಲು ಮುಂದಾಗುತ್ತಾನೆ. ಆಗ ಪತ್ನಿಯು ಸ್ವಲ್ಪ ಹೊತ್ತು ಕಾಯ್ದು ಆಕೆಯೂ ತನ್ನ ಗಂಡನ ಹಾಗೆಯೇ ಬಾಯಿಯಲ್ಲಿ ಸಿಹಿಯನ್ನು ತುರುಕುತ್ತಾಳೆ. ಆಗ ವರ ಔಟ್ ಆಫ್ ಕಂಟ್ರೋಲ್ ಆಗಿ ವಧುವಿನ ಕೆನ್ನೆಗೆ ಸಿಟ್ಟಿನಿಂದ ಬಾರಿಸುತ್ತಾನೆ, ಆಮೇಲೆ ವಧು ಸುಮ್ಮನೆ ಬಿಡುತ್ತಾಳೆಯೇ? ತೊಗೊ ಅವಳೊಂದು ವರನ ಕೆನ್ನೆಗೆ ಬಿಗಿದೇ ಬಿಡುತ್ತಾಳೆ. ಹೀಗೆಯೇ ಶುರುವಾಗುತ್ತದೆ ಅವನೊಂದು ತಾನೊಂದು ಅಂತ ಇಬ್ಬರೂ ಸ್ವೀಟ್ ನಂತರ ಒಬ್ಬರ ನಂತರ ಒಬ್ಬರು ಕೆನ್ನೆಗೆ ಮಸಾಜ್ ಮಾಡಲು ಶುರು ಮಾಡುತ್ತಾರೆ. ಒಂದು ದುಃಖ ಏನೆಂದರೆ ಏತನ್ಮಧ್ಯೆ ಯಾರು ಈ ರಾದ್ಧಾಂತವನ್ನು ಬಿಡಿಸಲು ಮುಂದೆ ಬರುವುದಿಲ್ಲ. ಈ ಎಲ್ಲ ದೃಶ್ಯವೂ ಮದುವೆಯ ಕ್ಯಾಮೆರಾದಲ್ಲಿ ಶೂಟ್ ಆಗಿದೆ. ಸದ್ಯ ಪ್ರಸ್ತುತ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ @NehaV_೦೦೦7_ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 7 ಲಕ್ಷಕ್ಕೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಹಾಗೂ ಮೂರು ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ.