ಅಜ್ಜನ ರಿಯಲ್ ಬೈಕ್ ಸ್ಟಂಟ್ ಮುಂದೆ ಭಾರಿ ನಟರ ರೀಲ್ ನಲ್ಲಿಯ ಡಮ್ಮಿ ಸ್ಟಂಟ್ ಮಟಾಷ್! ವಿಡಿಯೋ ವೈರಲ್…

ಸೋಶಿಯಲ್ ಮೀಡಿಯಾದಿಂದ ಯಾರ್ಯಾರ ಹತ್ತಿರ ಯಾವ್ಯಾವ ಟ್ಯಾಲೆಂಟ್ ತುಂಬಿದ ಗುಣಗಳಿವೆ ಎಂಬುದು ತಿಳಿದುಬರುತ್ತಿದೆ. ಇವುಗಳನ್ನು ನೋಡಿದಾಗ ನಿಜಕ್ಕೂ ನಂಬಲಿಕ್ಕೇ ಸಾಧ್ಯವೇ ಆಗುವುದಿಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಜ್ಜನೊಬ್ಬ ಬೈಕ್ ಮೇಲೆ ಮಾಡುತ್ತಿರುವ ಸ್ಟಂಟ್ ಒಂದು ತುಂಬಾನೇ ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧ ಪಟ್ಟ ಸುದ್ದಿಯನ್ನು ಈ ಲೇಖನದಲ್ಲಿ ನಿಮಗಾಗಿ ತಂದಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಸುಮಾರು 70/75 ರ ಹರೆಯದ ಬೆಳಿತಲೆಯ ಅಜ್ಜ ಬೈಕ್ ಮೇಲೆ ಸ್ಟಂಟ್ ಮಾಡುತ್ತಾ ಒಂದೇ ಸವನೆ ಕುಣಿಕುಣಿದು ಕುಪ್ಪಳಿಸುತ್ತಿದ್ದಾನೆ. ನಂತರ ಮುಖ ಮೇಲೆ ಮಾಡಿ ಆರಾಮಾಗಿ ಚಲಿಸುತ್ತಿರುವ ಬೈಕ್ ಮೇಲೆಯೇ ಮಲಗಿಕೊಳ್ಳುತ್ತಾನೆ, ಜೊತೆಗೆ ಭಾಂಗ್ರಾ ನೃತ್ಯ ಶೈಲಿಯಂತೆ ಎರಡು ಕೈಗಳನ್ನು ಮೇಲೆ ಮಾಡಿ ಆಕ್ಷನ್ ಮಾಡುತ್ತಾನೆ ಹಾಗೂ ಕೊನೆಗೆ ಎರಡು ಕೈಗಳನ್ನು ಜೋಡಿಸಿ ಕೈ ಮುಗಿಯುತ್ತಿರುವುದು ಕಂಡುಬರುತ್ತಿದೆ. ಬೈಕ್ ಮೇಲೆ ಸ್ಟಂಟ್ ಮಾಡುತ್ತಿರುವ ಈ ಅಜ್ಜನ ವಯಸ್ಸೇನು ಮತ್ತು ಆತ ಮಾಡುವ ಕೆಲಸವೇನು? ನೀವೇ ನೋಡಿ. ಇದು ನಿಜಕ್ಕೂ ರಿಸ್ಕ್ ನೊಂದಿಗೆ ಆಶ್ಚರ್ಯವೇ ಸರಿ. ಅಜ್ಜನಂಥ ಈ ವಯಸ್ಸಿನಲ್ಲಿ ಮಾಡುವ ಸ್ಟಂಟ್ ಇದು ನಿಜಕ್ಕೂ ಸರಿ ಅಲ್ಲ ಅಲ್ವೇ? ಕಾರಣ ಇಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಆಸ್ಪತ್ರೆಗೆ ಹೋಗುವ ಅವಶ್ಯಕತೆಯೇ ಬೀಳುವುದಿಲ್ಲ ಎಂದು ನನ್ನ ಅನಿಸಿಕೆ. ನೇರ ಲಾಸ್ಟ್ ಡೆಸ್ಟಿನೇಷನ್…. ಅಷ್ಟೇ.

ವಿಡಿಯೋ ನೋಡಿ

 

View this post on Instagram

 

A post shared by Lalaji Thakor (@lalothakor9481)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ lalothakor9481 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 2 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಪಡೆದಿದೆ.