ಮೇಡಂ ಮುಂದೆ ‘ಯಾಕೆ ಬುಲ್ ಬುಲ್ ಮಾತಾಡಕಿಲ್ವಾ’ ಎಂದು ಸಖತ್ತಾಗಿ ಡೈಲಾಗ್ ಹೇಳಿದ ಪುಟಾಣಿ ಕಂದ!! ಕೇಳಿ ಬೆರಗಾದ ನೆಟ್ಟಿಗರು……

‘ಚಿಕ್ಕ ಮಕ್ಕಳು ದೇವರ ಸಮಾನ’ ಅಂತ ದೊಡ್ಡವರು ಪದೇ ಪದೇ ಹೇಳುತ್ತಾರೆ. ಅದು ನಿಜನೂ ಸಹ ಏಕೆಂದರೆ ಸಣ್ಣ ಮಕ್ಕಳ ಮನಸ್ಸು ಎಷ್ಟು ನಿಷ್ಕಲ್ಮಶವಾಗಿರುತ್ತದೆ ಎಂದರೆ ಅದರಲ್ಲಿ ಯಾವುದೇ ಕುರಿತು ಸ್ವಾರ್ಥ ಇರುವದಿಲ್ಲ ಅಲ್ಲದೆ ತಪ್ಪು ಸರಿ ಎನ್ನದೆ ಇದ್ದದ್ದನ್ನು ಹೇಳಬಲ್ಲ ಏಕೈಕ ಮನಸ್ಸು ಎಂದರೆ ಅದು ಮಕ್ಕಳ ಮನಸ್ಸು ಮಾತ್ರ. ಚಿಕ್ಕವರಿದ್ದಾಗ ನಾವು ನೀವೆಲ್ಲ ಶಾಲೆಗೆ ಹೋದಾಗ ಏನೆಲ್ಲಾ ಕೀಟಲೆ ಮಾಡುತ್ತಿದ್ದೇವೆ ಎಂಬುದು ಒಂದು ಬಾರಿ ನೆನಪಿಸಿಕೊಂಡು ನೋಡಿ ನಿಮ್ಮಷ್ಟಕ್ಕೆ ನೀವು ಮನದಲ್ಲಿ ನಕ್ಕು ಬಿಡುವಿರಿ. ನಾವು ಚಿಕ್ಕವರಿರುವಾಗ ಬೇಗ ದೊಡ್ಡವರಗಬೇಕು ಎಂಬ ಆಸೆ ಮೂಡುತ್ತದೆ. ಆದರೆ ದೊಡ್ಡವರಾದ ಮೇಲೆ ಮನೆ, ಸಂಸಾರ ಕೊರಳಿಗೆ ಬಿದ್ದಾಗ ನಾವು ಮರಳಿ ಚಿಕ್ಕವರಾಗಬೇಕು ಎಂದು ಆಸೆ ಪಡುತ್ತೇವೆ. ಬೆಳೆಯುವುದು ಇದು ನಿಸರ್ಗದ ನಿಯಮ. ಆದರೆ ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನ ತುಂಬಾ ಮರೆಯಲಾಗದ ನೆನಪಾಗುತ್ತದೆ. ಅದಕ್ಕೆ ಇಂಗ್ಲಿಷ್ ನಲ್ಲಿ ಒಂದು ಗಾದೆ ಮಾತು ಇದೆ ಅಲ್ಲವೇ, ‘ ಸ್ಟುಡೆಂಟ್ ಲೈಫ್ ಇಜ್ ಗೋಲ್ಡನ್ ಲೈಫ್ ‘ ಅಂತ. ನಾವು ಶಾಲೆಯಲ್ಲಿ ಏನೇ ತಪ್ಪು ಮಾಡಿದರು ನಮಗೆ ಅದನ್ನು ತಿದ್ದಿ ಹೇಳಲು ಶಿಕ್ಷಕರಿರುತ್ತಿದ್ದರು. ಅವರು ಹೇಳಿದ ದಾರಿಯಲ್ಲಿ ನಡೆದ ಪ್ರತಿಯೊಬ್ಬರೂ ಇಂದು ಉತ್ತಮವಾದ ಜೀವನ ನಡೆಸುತ್ತಿದ್ದಾರೆ ಅನ್ನೋದರಲ್ಲಿ ತಪ್ಪೇ ಇಲ್ಲ. ಸದ್ಯಕ್ಕೆ ಒಂದು ಪುಟ್ಟ ಹುಡುಗನ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಶಾಲೆಯಲ್ಲಿ ಮೇಡಂ ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಒಂದು ಚಟುವಟಿಕೆ ನಡೆಸುತ್ತಿರುತ್ತಾರೆ ಅದರಲ್ಲಿ ಮಕ್ಕಳು ಯವಾದಾದರು ಒಂದು ಹಾಡು ಹಾಡುವದು, ಡ್ಯಾನ್ಸ್ ಮಾಡುವದು, ಜೋಕ್ಸ್ ಹೇಳುವದು ಮತ್ತು ಯಾವುದೇ ಫಿಲ್ಮಿ ಡೈಲಾಗ್ ಹೇಳಬಹುದು ಎಂದು ಮೊದಲೇ ತಿಳಿಸಿದ್ದರು. ತದನಂತರ ಆ ಮಕ್ಕಳಲ್ಲಿ ಒಬ್ಬ ಪುಟಾಣಿ ಮುಂದೆ ಬಂದು ನಿಂತು ಮೇಡಂ ನನ್ನ ಜೊತೆಗೆ ಒಬ್ಬ ಹುಡುಗಿ ಬೇಕು ಎಂದು ಹೇಳಿದನು. ಮೇಡಂ ಸಹ ಏನು ಯೋಚನೆ ಮಾಡದೆ ಕ್ಲಾಸ್ ನಲ್ಲಿಯ ಒಬ್ಬ ಹುಡುಗಿಯನ್ನು ಆತನ ಹತ್ತಿರ ಹೋಗಿ ನಿಲ್ಲಲು ಹೇಳಿದರು.

ಹುಡುಗಿ ಆ ಹುಡುಗನ ಹತ್ತಿರ ಹೋಗಿ ನಿಲ್ಲುವ ತಡವೆ ಹುಡುಗ ಒಂದು ಡೈಲಾಗ್ ಹೇಳಲು ಶುರು ಮಾಡಿದನು. ಇದನ್ನು ಕೇಳಿ ಅಲ್ಲಿದ್ದ ಮಕ್ಕಳು ಮತ್ತು ಮೇಡಂ ಸಹ ಆಶ್ಚರ್ಯಗೊಂಡರು. ಏಕೆಂದರೆ ಈತನು ಅಷ್ಟೊಂದು ದೊಡ್ಡದಾದ ಡೈಲಾಗ್ ತಪ್ಪದೆ ಮತ್ತು ಆಕ್ಷನ್ ಮಾಡುವದರೊಂದಿಗೆ ಹೇಳಿದ್ದಾನೆ. ಅವನು ‘ಯಾಕೆ ಬುಲ್ ಬುಲ್ ಮಾತಡಕಿಲ್ವಾ’ ಎಂಬ ಡೈಲಾಗ್ ಹೇಳಿದ್ದಾನೆ. ಈ ಪುಟಾಣಿಯ ಡೈಲಾಗ್ ಹೇಳುವ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ

ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ kannada_true_talent ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ. ಪುಟಾಣಿಯ ಡೈಲಾಗ್ ಕೇಳಿ ನೆಟ್ಟಿಗರು ತುಂಬಾ ಹೊಗಳುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಎನರ್ಜಿ ಎಲ್ಲಿಂದ ಬರುತ್ತದೆ ಅಂತ ಕೆಲವರು ತಮ್ಮಷ್ಟಕ್ಕೆ ತಾವೇ ಪ್ರಶ್ನೆ ಕೇಳಿದ್ದಾರೆ.