ಈ ಕಠಿಣವಾದ ಚಿತ್ರ ತೆಗೆಯುವದು ನಿಜಕ್ಕೂ ಇಷ್ಟೊಂದು ಈಜಿನಾ? ಹೌದು. ಆ ಜಾದೂ ಈ ವಿಡಿಯೋದಲ್ಲಿ ಅಡಗಿದೆ, ನೋಡಿ.

ಕಲೆ ನಿಜಕ್ಕೂ ಅದ್ಭುತವಾಗಿದೆ. ಇದು ಯಾರ ಸ್ವತ್ತೂ ಅಲ್ಲ. ಮನುಷ್ಯನಲ್ಲಿ ಕ್ರಿಯೇಟಿವಿಟಿಯ ಜೊತೆಗೆ ಕಲೆಯ ಬಗ್ಗೆ ಆಸಕ್ತಿ ಇದ್ದರೆ ಆತ ಯಾವುದರಿಂದಲೂ, ಯಾವುದರಲ್ಲೂ ಕಲೆಯನ್ನು ಹುಟ್ಟಿಸಬಲ್ಲ ಅಥವಾ ಅರಳಿಸಬಲ್ಲ. ಒಟ್ಟಿನಲ್ಲಿ ಆತ ಏನು ಬೇಕಾದರೂ ಮಾಡಿ ತನ್ನ ಕಲೆಗೆ ಬೆಲೆಯನ್ನು ತಂದುಕೊಳ್ಳುತ್ತಾನೆ.

ಪ್ರಸ್ತುತ ಈ ವೈರಲ್ ವಿಡಿಯೋದಲ್ಲಿ ನಮಗೆ ಇದೇ ಅದ್ಭುತ ಕಂಡು ಬರುತ್ತದೆ. ಬರೀ ಒಂದು ಕಾಗದದ ಚೂರಿನಿಂದ ಸುಂದರವಾದ ಹಾಗೂ ಅಷ್ಟೇ ಅದ್ಭುತವಾದ ಕಲೆಯನ್ನು ಪೇಪರ್ ಮೇಲೆ ಇಳಿಸಲಾಗಿದೆ. ಇದನ್ನು ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ನೇಟಿಜನ್ಸ್ ಗಳು ಈ ಕಲೆಯನ್ನು ನೋಡಿ ಹುಬ್ಬೇರಿಸಿದ್ದಾರೆ. ಕಲಾಕಾರ ಅಡ್ಡಾದಿಡ್ಡಿಯಾಗಿ ಹರಿದ ಕಾಗದ ಚೂರುಗಳನ್ನು ತೆಗೆದುಕೊಂಡು ಪೇಪರ್ ಮೇಲೆ ಇಟ್ಟು ಅದರ ಅಂಚಿಗೆ ಸುಂದರವಾಗಿ ಬಣ್ಣ ಬಳಿದಿದ್ದಾನೆ. ಸಂಪೂರ್ಣ ಚಿತ್ರ ತಯಾರಾದ ನಂತರ ಅಮೋಘವಾದ ಆರ್ಟ್ ಒಂದು ಪೇಪರ್ ಮೇಲೆ ತಯಾರಾದದ್ದು ಕಂಡುಬರುತ್ತದೆ. ನೋಡುಗನಿಗೆ ಈ ಚಿತ್ರ ತೆಗೆಯುವುದು ಇಷ್ಟೊಂದು ಸರಳವಾಗಿದೆಯೇ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by @only_art8055

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ only_art8055 ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 14.4 ಮಿಲಿಯನ್ ವೀಕ್ಷಣೆ ಪಡೆದಿದ್ದು 6 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.