“ಟಾಟಾ ಕಾರುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?” ವ್ಯಕ್ತಿಯೊಬ್ಬನ ಪ್ರಶ್ನೆಗೆ, ಆನಂದ್ ಮಹೀಂದ್ರಾ ನೀಡಿದ ಉತ್ತರ ಗೆದ್ದಿತು ನೆಟ್ಟಿಗರ ಹೃದಯ…❤️
ದೇಶದ ಪ್ರಮುಖ ಹಾಗೂ ಶ್ರೀಮಂತ ಹೃದಯದ ಉದ್ಯಮಿಯಾದ ಆನಂದ್ ಮಹಿಂದ್ರ ಅವರನ್ನು ಯಾರು ಗುರುತಿಸುವುದಿಲ್ಲ ಹೇಳಿ. ಇವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವಿಶೇಷವಾದ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುವುದರೊಂದಿಗೆ ಸದಾ ಆಕ್ಟಿವ್ ಆಗಿರುತ್ತಾರೆ. ಜೊತೆಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಯಾವತ್ತೂ ಸ್ಪಂದಿಸುತ್ತಾರೆ. ಎಷ್ಟೋ ಸಲ ಸೋಶಿಯಲ್ ಮೀಡಿಯಾ ಮುಖಾಂತರ ಅನೇಕರಿಗೆ ಸಹಾಯ ಹಸ್ತವನ್ನು ಸಹಿತ ಚಾಚುತ್ತಾರೆ. ಇಂಟರ್ನೆಟ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ತುಂಬಾ ಜಾಣತನದಿಂದ ಉತ್ತರಿಸುವುದರಲ್ಲೂ ಆನಂದ್ ಮಹೀಂದ್ರ ಅವರ ಕೈ ಹಿಡಿಯಲು ಯಾರಿಗೂ ಸಾಧ್ಯವಿಲ್ಲ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಯೂಸರ್ ನೊಬ್ಬ ಆನಂದ್ ಮಹೀಂದ್ರ ಅವರಿಗೆ, “ಟಾಟಾ ಅವರ ಕಾರುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನೆಯನ್ನು ಕೇಳಿದ್ದ. ಈ ಪ್ರಶ್ನೆಗೆ ಆನಂದ್ ಸರ್ ಅವರು ತುಂಬಾ ಮಾರ್ಮಿಕವಾಗಿ ಉತ್ತರವನ್ನು ನೀಡಿದ್ದಾರೆ. ಅವರು ನೀಡಿದ ಉತ್ತರದಿಂದ ಆನಂದ್ ಮಹೀಂದ್ರ ಅವರು ರತನ್ ಟಾಟಾ ಅವರಿಗೆ ಎಷ್ಟೊಂದು ಗೌರವವನ್ನು ನೀಡುತ್ತಾರೆಂಬದು ನೆಟ್ಟಿಗರಿಗೆ ತಿಳಿಯಿತು.
‘ಟಾಟಾ ಅವರ ಕಾರುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದ ಪ್ರಶ್ನೆಗೆ ಆನಂದ್ ಮಹೀಂದ್ರ ಅವರು ತಮ್ಮ ಉತ್ತರದಲ್ಲಿ, “ಟಾಟಾ ಮೋಟರ್ ನಂತಹ ಬಲಶಾಲಿಯಾದ ಪ್ರತಿಸ್ಪರ್ತಿ ಇರುವುದು ನಿಜಕ್ಕೂ ಪ್ರಯೋಜನಕಾರಿಯಾಗಿದೆ. ಅವರು ಸಮಯ ಸಮಯಕ್ಕೆ ತಮ್ಮನ್ನು ರೀಇವೆಂಟ್ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ನಮಗೆ ಸೇವೆಯಲ್ಲಿ ಇನ್ನಷ್ಟು ಉತ್ತಮ ಹಾಗೂ ಹೊಸತನವನ್ನು ನೀಡುವ ಸ್ಪೂರ್ತಿ ದೊರೆಯುತ್ತದೆ. ಈ ರೀತಿಯ ಸ್ಪರ್ಧೆ ಯಾವತ್ತೂ ಇನ್ನೋವೇಶನ್ ಗೆ ಜನ್ಮ ನೀಡುತ್ತದೆ” ಎಂದು ಹೇಳಿದ್ದಾರೆ.
Sir what about your feelings about Tata cars ?@anandmahindra
— Phanindra Kopparthi (@PhanindraBobby) July 9, 2022
ಈ ಟ್ವೀಟ್ ಮುಖಾಂತರ ಆನಂದ್ ಮಹೀಂದ್ರ ಅವರು ಭಾರತದ ಮೇರು ಉದ್ಯಮಿ ರತನ್ ಟಾಟಾ ಅವರಿಗೆ ಎಷ್ಟೊಂದು ಗೌರವವನ್ನು ನೀಡುತ್ತಾರೆಂಬದು ತಿಳಿದು ಬರುತ್ತದೆ. ಇದನ್ನು ಓದಿದ ಅನೇಕ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂಟರ್ನೆಟ್ ಯೂಸರ್ ಒಬ್ಬನು, ನಿಜಕ್ಕೂ ಆನಂದ್ ಮಹಿಂದ್ರ ಅವರು ಅದ್ಭುತವಾದ ವ್ಯಕ್ತಿಯಾಗಿದ್ದಾರೆ ಎಂದಿದ್ದಾನೆ. ಇನ್ನೊಬ್ಬ ಈ ಇಬ್ಬರೂ ಉದ್ಯಮಿಗಳು ದೇಶ ಹೆಮ್ಮೆ ಪಡುವಂತಹ ವ್ಯಕ್ತಿಯಾಗಿದ್ದಾರೆ ಎಂದಿದ್ದಾನೆ.