ನಕ್ಕು ನಗಿಸುವ ಜೋಕ್ಸ್ ನ ಸಖತ್ ಪಂಚ್ ಗಳು; ಗಂಡ ಫೋನ್ ನಲ್ಲಿ ತುಂಬಾ ಮೆಲ್ಲಗೆ ಮಾತನಾಡುತ್ತಿದ್ದ, ಅಷ್ಟರಲ್ಲಿ ಹೆಂಡತಿ ಬಂದು…

ಜೀವನಕ್ಕೆ ನಗುವಿನ ಸಂಜೀವಿನಿ ಆಗಾಗ ಹನಿಸುತ್ತ ಇರಬೇಕು. ಇದರಿಂದ ಜೀವನದಲ್ಲಿ ಮನುಷ್ಯ ರಿಲ್ಯಾಕ್ಸ್ ಆಗಿ ಇರಲು ಸಹಾಯವಾಗುತ್ತದೆ. ನಗು ಮನುಷ್ಯ ಜೀವನದ ಮಹತ್ವದ ಹಾಗೂ ಅಷ್ಟೇ ಅವಶ್ಯಕ ಘಟಕವಾಗಿದೆ. ಇದನ್ನು ಬೇರೆ ಇಟ್ಟು ಜೀವಿಸುವ ಮನುಷ್ಯ ಜೀವಿಗಳು ಅದ್ಹೇಗೆ ಭೂಮಿಯ ಮೇಲೆ ಬದುಕುತ್ತಾರೆ ಗೊತ್ತಿಲ್ಲ. ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಹಾಗೂ ಮುಖದಲ್ಲಿ ಹಾಸ್ಯವನ್ನು ಅರಳಿಸಲು ಕೆಲವು ಜೋಕ್ಸ್ ಗಳನ್ನು ಈ ಅಂಕಣದಲ್ಲಿ ತಂದಿದ್ದೇವೆ. ಒಮ್ಮೆ ನೋಡಿ. ಈ ಜೋಕ್ಸ್ ಗಳು ನಿಮ್ಮ ಮುಖದ ಮೇಲೆ ಹಾಸ್ಯವನ್ನು ಅರಳಿಸಿದ್ದೇ ಆದರೆ ನಿಮ್ಮ ಮಿತ್ರರಿಗೂ ಈ ಹಾಸ್ಯ ಸಂಜೀವಿನಿ ಶೇರ್ ಮಾಡಿ.

* ಗಂಡ ತುಂಬಾ ಮೆಲ್ಲಗೆ ಫೋನ್ ನಲ್ಲಿ ಮಾತನಾಡುತ್ತಿದ್ದ…
ಹೆಂಡತಿ – ಇಷ್ಟೊಂದು ಸಣ್ಣ ದನಿಯಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೀರಿ? ಎಂದು ಮಧ್ಯೆ ಬಂದು ಕೇಳುತ್ತಾಳೆ.
ಗಂಡ – ತಂಗಿಯ ಜೊತೆಗೆ
ಹೆಂಡತಿ – ಓ ಹೌದಾ, ಅಂತದ್ದೇನಿದೆ ಅದರಲ್ಲಿ? ಇಷ್ಟೊಂದು ಮೆಲ್ಲಗೆ ಮಾತನಾಡಲು.
ಗಂಡ – ನನ್ನ ತಂಗಿ ಅಲ್ಲ, ನಿನ್ನ ತಂಗಿಯ ಜೊತೆಗೆ..!

* ರಮೇಶ್ – ಗೆಳೆಯ, ನನ್ನ ಗರ್ಲ್ ಫ್ರೆಂಡ್ ಗೆ ಒಂದು ಗಿಫ್ಟ್ ಕೊಡೋಣಂತ ಇದ್ದೀನಿ, ಏನು ಕೊಡ್ಲಿ ಸ್ವಲ್ಪ ಗೈಡನ್ಸ್ ಮಾಡಲೋ.
ಗೆಳೆಯ – ಒ ಹೀಗಾ, ಒಂದು ಕೆಲ್ಸ ಮಾಡು ಗೋಲ್ಡನ್ ರಿಂಗ್ ಕೊಟ್ಟುಬಿಡು.
ರಮೇಶ್ – ಅಯ್ಯೋ ನಿನ್ನ, ಏನಾದರೂ ದೊಡ್ಡ ವಸ್ತು ಹೇಳಲೇ.
ಗೆಳೆಯ – ಹಾಗಾದರೆ MRF ಟೈರ್ ಕೊಟ್ಟುಬಿಡು.

* ಟೀಚರ್ – ಮಕ್ಕಳೇ 4 ಮತ್ತು 4 ಕೂಡಿಸಿದಾಗ ಎಷ್ಟು ಉತ್ತರ ಬರುತ್ತೆ ಹೇಳಿ ನೋಡೋಣ.
ಸಂತೂ – 10
ಟೀಚರ್ – ತಪ್ಪು, ಸರಿಯಾದ ಉತ್ತರ 8
ಸಂತೂ – ಟೀಚರ್ ನನ್ನ ಮನಸ್ಸು ಸ್ವಲ್ಪ ದೊಡ್ಡದು, ಮತ್ತು ನಾನು ತುಂಬಾ ಶ್ರೀಮಂತ ಮನೆಯವನು ಅದಕ್ಕೆ ಎರಡು ನಾನಾಗಿಯೇ ಹೆಚ್ಚಿಗೆ ಮಾಡಿಕೊಟ್ಟೆ. ಇರ್ಲಿ ಬೇಡ ಎನ್ನಬೇಡಿ ತೊಗೊಳ್ಳಿ.

* ಟೀಚರ್ – ಸಂತೂ, ನಮ್ಮ ದೇಶದಲ್ಲಿ ಮೃತ್ಯುದರ ಪ್ರತಿಶತ ಪ್ರಮಾಣ ಏನಿದೆ?
ಸಂತೂ – 100 ಪ್ರತಿಶತ.
ಟೀಚರ್ – 100 % ಅದ್ಹೇಗೆ?
ಸಂತೂ – ಅಂದ್ರೆ, ಹುಟ್ಟಿದವರು ಸಾಯಲೇಬೇಕಲ್ಲಾ, ಅದಕ್ಕೆ.

* ರಾಜು ಒಂದು ಹುಡುಗಿಯ ಜೊತೆಗೆ ಮದುವೆಯ ಪ್ರಸ್ತಾಪವನ್ನಿಟ್ಟ…
ಹುಡುಗಿ – ಆದರೆ ನಾನು ನಿನಗಿಂತಲೂ ಮೂರು ವರ್ಷ ದೊಡ್ಡವಳು.
ರಾಜು – ಹೌದಾ, ಏನೂ ಅಡ್ಡಿ ಇಲ್ಲ, ನಾನು ಇನ್ನೂ ಮೂರು ವರ್ಷ ಕಾಯುತ್ತೇನೆ, ಆನಂತರ ಮದುವೆಯಾಗೋಣ ಆಯ್ತಾ.

* ಸಂತಾ ಮನೆಯಲ್ಲಿ ಸ್ಟಡಿ ಮಾಡಿ ಬಂದಿರಲಿಲ್ಲ,
ಟೀಚರ್ – ನಿನ್ನೆ ಹೇಳಿದ ಅಭ್ಯಾಸ ಯಾಕೆ ಮಾಡಿಲ್ಲ?
ಸಂತಾ – ಸಾರಿ ಮ್ಯಾಮ್ ನಿನ್ನೆ ನಾನು ಇನ್ನೇನು ಅಭ್ಯಾಸ ಮಾಡಬೇಕು ಎನ್ನುವಷ್ಟರಲ್ಲಿ ಕರೆಂಟ್ ಹೋಗಿಬಿಡ್ತು.
ಟೀಚರ್ – ಮತ್ತೆ ಕರೆಂಟ್ ಬರಲೇ ಇಲ್ವಾ?
ಸಂತಾ – ಬಂತು ಟೀಚರ್, ಮತ್ತೆ ಓದಲು ಶುರು ಮಾಡುವಷ್ಟರಲ್ಲಿ ಮತ್ತೊಮ್ಮೆ ಕರೆಂಟ್ ಹೋಯ್ತು ಟೀಚರ್.
ಟೀಚರ್ – ಆಮೇಲೆ ಮತ್ತೆ ಕರೆಂಟ್ ಬರಲಿಲ್ವೆ?
ಸಂತಾ – ಬಂತು ಟೀಚರ್, ಆದರೆ ಕರೆಂಟ್ ಮತ್ತೆ ಹೋಗಿಬಿಡುತ್ತದೆ ಎನ್ನೋ ಭಯದಲ್ಲಿ ನಾನು ಅಭ್ಯಾಸವನ್ನೇ ಮಾಡಲಿಲ್ಲ.

ಮಗ – ಅಪ್ಪ, ಮಗನಿಗಿಂತಲೂ ಅಪ್ಪನಿಗೆ ಎಲ್ಲವೂ ಜಾಸ್ತಿ ಗೊತ್ತಿರುತ್ತಾ?
ತಂದೆ – ಹೌದು ಕಂದಾ
ಮಗ – ಬಲ್ಬ್ ಯಾರು ಶೋಧಿಸಿದರು?
ತಂದೆ – ಥಾಮಸ್ ಎಡಿಸನ್
ಮಗ – ಹಾಗಾದರೆ ಆತನ ತಂದೆಗೆ ಯಾಕೆ ಬಲ್ಬ್ ನ ಶೋಧ ಮಾಡಲು ಸಾಧ್ಯವಾಗಲಿಲ್ಲ?
ತಂದೆ – (ಸಿಟ್ಟಿನಿಂದ) ಯಾಕೆಂದರೆ ಆತನಿಗೆ ಕತ್ತಲೆಯಲ್ಲಿ ಎಡಿಸನ್ ನ ಶೋಧ ಮಾಡುವದಿತ್ತು, ಹೋಗು ಆಚೆಗೆ ಮುಠ್ಠಾಳನನ್ನು ತಂದು.