Video; ಮೋಜು, ಮಸ್ತಿ, ನೀವಷ್ಟೇ ಮಾಡೋದಾ? ನಾವು ಮಾಡ್ತೇವೆ ಎಂದು ಪುಟ್ಟ ಕರಡಿ ಮರಿಗಳು ಮಾಡಲು ಹೋಗಿ ಏನಾಯ್ತು ನೋಡಿ.

ಪ್ರಾಣಿಗಳ ವಿಡಿಯೋ ತುಂಬಾ ಕ್ಯೂಟ್ ಆಗಿರುತ್ತವೆ. ಅದರಲ್ಲೂ ಪ್ರಾಣಿಗಳ ಪುಟ್ಟ ಪುಟ್ಟ ಮರಿಗಳ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಈ ಪ್ರಾಣಿಗಳ ಮರಿಗಳು ಮಾಡುವ ಪ್ರತಿಯೊಂದು ಕೃತಿ ತುಂಬಾ ಮೋಜಿನಿಂದ ಕೂಡಿರುತ್ತವೆ. ಕರಡಿಯ ಪುಟ್ಟ ಮರಿಗಳು ನೈಲಾನ್ ದಾರಿನಿಂದ ಕೂಡಿದ ಜೋಕಾಲಿಯ ಮೇಲೆ ಆಟ ಆಡಿ ಮೋಜು ಮಾಡಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ಮೋಜಿನ ವಿಡಿಯೋ ನೋಡಿದಾಗ ನಿಮಗೂ ಸಹ ಕರಡಿಯ ತುಂಟ ಮರಿಗಳ ಮೇಲೆ ಪ್ರೀತಿ ಉಕ್ಕುವುದು.

ವಿಡಿಯೋದಲ್ಲಿ ಕರಡಿ ಮತ್ತು ಕರಡಿಯ ಪುಟ್ಟ ಮರಿಗಳು ಒಂದು ಗಾರ್ಡನ್ನಲ್ಲಿ ಆಡುತ್ತಿರುವುದು ಕಂಡುಬರುತ್ತಿದೆ. ಗಾರ್ಡನ್ ನಲ್ಲಿದ್ದ ಗಿಡಗಳಿಗೆ ಒಂದು ನೈಲಾನ್ ನಿಂದ ಹೆಣದ ಜೋಕಾಲಿಯೊಂದನ್ನು ಕಟ್ಟಿದ್ದಾರೆ. ಎರಡು ಪುಟ್ಟ ಕರಡಿಯ ಮರಿಗಳು ಜೋಕಾಲಿಯ ಮೇಲೆ ಕೂಡಲು ಒಂದೇ ಸಮನೆ ಹೆಣಗಾಡುತ್ತಿವೆ. ಮೇಲಿಂದ ಮೇಲೆ ಪ್ರಯತ್ನ ಮಾಡಿದ ನಂತರ ಅವುಗಳ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಆದರೆ ಅವುಗಳಿಗೆ ಸಕ್ಸಸ್ ಲಭಿಸಿದೆ ಎನ್ನುವಷ್ಟರಲ್ಲಿ ಎರಡು ಮರಿಗಳು ತಲೆಕೆಳಗೆ ಮಾಡಿ ಡಮಾರೆಂದು ಕೆಳಗೆ ಬೀಳುತ್ತವೆ. ವಿಡಿಯೋದ ಈ ದೃಶ್ಯ ಇಂಟರ್ನೆಟ್ ಯೂಸರ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ. ಈ ವಿಡಿಯೋದಲ್ಲಿ ಕರಡಿಯ ಮರಿಗಳು ಬಿಂದಾಸ್ ಆಗಿ ಮೋಜು ಮಸ್ತಿಯಿಂದ ಕುಣಿದಾಡುತ್ತಿವೆ. ಅದೇ ರೀತಿ ಜೋಕಾಲಿಯ ಮೇಲು ತಮ್ಮ ಮೋಜು ಮಾಡಬೇಕೆಂದಾಗ ಜೋಕಾಲಿ ಅವುಗಳಿಗೆ ತಲೆ ಕೆಳಗೆ ಮಾಡಿ ಕೆಡವಿದೆ. ಈ ಸುಂದರವಾದ ದೃಶ್ಯ ನಿಜಕ್ಕೂ ತುಂಬಾ ತಮಾಷೆಯಿಂದ ಕೂಡಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಟ್ವಿಟರ್ ನಲ್ಲಿ IFS ಆಫೀಸರ್ ಆದ ಸುಧಾ ರಾಮೇನ್ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಬರಿ 13 ಸೆಕೆಂಡ್ ಗಳ ಈ ತಮಾಷೆಯಿಂದ ಕೂಡಿದ ಸುಂದರವಾದ ವಿಡಿಯೋ ಇಲ್ಲಿಯವರೆಗೆ 9.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.