ಕೆಲವೊಂದು ಗುಣಗಳು ರಕ್ತದಲ್ಲಿಯೇ ಬಂದಿರುತ್ತವೆ; ಮದ್ದಳೆ ಬಾರಿಸುವ ಬಾಲಕನ ಜೋಶ್ ಒಮ್ಮೆ ನೋಡಿ, ನಿಜಕ್ಕೂ ಅದ್ಭುತ!
ಕೆಲವೊಂದು ಮಕ್ಕಳಲ್ಲಿ ಕಲೆ ಅನ್ನೋದು ರಕ್ತದಲ್ಲಿಯೇ ಬಂದಿರುತ್ತದೆ ಎಂಬ ಮಾತುಗಳನ್ನು ಎಷ್ಟೋ ಸಲ ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಈ ಲೇಖನದಲ್ಲಿಯ ವಿಡಿಯೋ ನೋಡಿದಾಗ ಈ ಮಾತುಗಳು ತುಂಬಾ ನಿಜವೆನಿಸುತ್ತವೆ.
ಪ್ರಸ್ತುತ ವಿಡಿಯೋದಲ್ಲಿ ಬಾಲಕನೊಬ್ಬ ಮದ್ದಳೆಯನ್ನು ಬಾರಿಸುತ್ತಿದ್ದಾನೆ. ಆತ ಬಾರಿಸುತ್ತಿರುವ ಮದ್ದಳೆಯಲ್ಲಿ ಅಂಥದ್ದೇನು ವಿಶೇಷ ಎನ್ನಬಹುದು.
ಹೀಗಾಗಿ ಮೊದಲು ಆತನ ಕಲೆಯನ್ನು ಈ ವಿಡಿಯೋದಲ್ಲಿ ನೋಡಿ ಗೊತ್ತಾಗುತ್ತೆ…👇
काही गुण हे रक्तातच असावे लागतात…. pic.twitter.com/UOHXHDiSYL
— Deepak™ (@Maratha__96k) July 8, 2022
ಹೇಗನಿಸಿತು ಮಿತ್ರರೇ, ತುಂಬಾ ಅದ್ಭುತವಾಗಿದೆ ಅಲ್ವಾ?
@Maratha_96k ಹೆಸರಿನ ಖಾತೆಯಿಂದ instagram ನಲ್ಲಿ ಶೇರ್ ಮಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಾಲಕನೊಬ್ಬ ಮೈಮರೆತು ಮದ್ದಳೆಯನ್ನು ಬಾರಿಸುತ್ತಿದ್ದಾನೆ. ಆತ ಬಾರಿಸುವ ವಿಧಾನ ನೋಡಿದರೆ ತನ್ನ ಕಾರ್ಯದಲ್ಲಿ ಅಕ್ಷರಶಃ ಮುಳಗಿ ಹೋಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಆತ ತೋರಿಸುತ್ತಿರುವ ಮದ್ದಳೆಯ ಪ್ರತಿ ಎಫೋರ್ಟ್ ನೋಡುಗರನ್ನು ಅಚ್ಚರಿಪಡಿಸುವಂತಿದೆ. ಮದ್ದಳೆಯನ್ನು ಬಾರಿಸುವಾಗ ಬಾಲಕ ಪರಿಪೂರ್ಣವಾಗಿ ಅದರಲ್ಲಿ ಲೀನವಾದದ್ದು ಕಂಡುಬರುತ್ತದೆ. ಅರ್ಧ ನಿಮಿಷದ ಈ ವಿಡಿಯೋ ನೋಡುವಾಗ ನೋಡುಗರು ತಮ್ಮ ಕಣ್ಣುಗಳು ಸಹ ಬಡಿಯುವುದಿಲ್ಲ.
ಅದಕ್ಕಾಗಿ ಹಿರಿಯರು ಹೇಳುತ್ತಾರೆ ಕೆಲವೊಂದು ಗುಣಗಳು ರಕ್ತದಲ್ಲಿಯೇ ಬಂದಿರುತ್ತವೆ. ಎಷ್ಟೇ ಪ್ರಯತ್ನ ಮಾಡಿದರೂ ಇನ್ನೊಬ್ಬರಿಗೆ ಕಲಿಯಲು ಸಾಧ್ಯವಾಗುವುದಿಲ್ಲ, ಅಲ್ವಾ?