ಚಾಲೆಂಜ್; ಟೆರೆಸ್ ಮೇಲೆ ಹೋಗಲು ಹುಡುಗಿಗೆ ಬೇಕು ಎಷ್ಟು ಏಣಿಗಳು? Zoom ಮಾಡಿಯೂ ನೋಡಬಹುದು.
ತಲೆ ತಿನ್ನುವ ಮತ್ತೊಂದು ಪಜಲ್ ಫೋಟೋ ನಿಮಗಾಗಿ ತಂದಿದ್ದೇವೆ. ಈ ಪಜಲ್ ಗಳೇ ಹಾಗೆ ಕೆಲವರಿಗೆ ಈ ಒಗಟುಗಳನ್ನು ಬಿಡಿಸದೆ ಇದ್ದರೆ ಸಮಾಧಾನವೇ ಆಗುವದಿಲ್ಲ. ಏನೇ ಆಗಲಿ ಎಷ್ಟೇ ಕ್ಲಿಷ್ಟಕರವಾದ ಒಗಟಾಗಿರಲಿ ಬಿಡಿಸಿಯೇ ತೀರುತ್ತೇನೆ ಎಂಬ ಜಿದ್ದು ಕೆಲವರನ್ನು ಸುಮ್ಮನೆ ಕೂಡಲು ಬಿಡುವುದೇ ಇಲ್ಲ. ಈ ರೀತಿಯ ಚಾಲೆಂಜಿಂಗ್ ಪಜಲ್ ಗಳನ್ನು ಬಿಡಿಸುವದರಿಂದ ಮನುಷ್ಯ ಟ್ರೆಸ್ ನಿಂದ ಮುಕ್ತನಾಗುತ್ತಾನೆ, ಅಲ್ಲದೆ ಮೈಂಡ್, ಮೂಡ್ ಎರಡೂ ಫ್ರೆಶ್ ಆಗಲು ಸಹಾಯವಾಗುತ್ತದೆ. ಇಂಥ ಪ್ರಶ್ನೆಗಳನ್ನು ಬಿಡಿಸಲು ಸಂಯಮ ಒಂದು ಮುಖ್ಯವಾಗಿ ಮನುಷ್ಯನಲ್ಲಿ ಇರುವದು ಅವಶ್ಯಕವಾಗಿರುತ್ತದೆ.

ಇಲ್ಲಿ ಮೇಲೆ ನೀಡಿದ ಇಮೇಜ್ ಒಮ್ಮೆ ಸರಿಯಾಗಿ ಗಮನ ನೀಡಿ ನೋಡಿ. ಈ ಚಿತ್ರದಲ್ಲಿಯ ಕಟ್ಟಡದಲ್ಲಿ ಅನೇಕ ಏಣಿಗಳು ಕಣ್ಣಿಗೆ ಕಂಡು ಬರುತ್ತಿವೆ. ಪ್ರಸ್ತುತ ಚಿತ್ರದಲ್ಲಿಯ ಬಿಲ್ಡಿಂಗ್ ನ ಟಾಪ್ ಮೇಲೆ ಹೋಗಲು ಕೆಳಗೆ ನಿಂತಿರುವ ಹುಡುಗಿಗೆ ಎಷ್ಟು ಏಣಿಗಳ ಸಹಾಯ ಪಡೆಯಬೇಕಾಗುತ್ತದೆ, ಎಂಬ ಪ್ರಶ್ನೆಗೆ ಉತ್ತರವನ್ನು ನಿಮಗೆ ಹೇಳಬೇಕಾಗಿದೆ. ಅದೂ ಬರೀ 20 ಸೆಕೆಂಡುಗಳಲ್ಲಿ ಮಾತ್ರ. ಒಂದು ವೇಳೆ ಉತ್ತರ ಶೋಧಿಸಲು 20 ಸೆಕೆಂಡುಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡರೆ ನೀವು ಈ ಚಾಲೆಂಜ್ ನಲ್ಲಿ ಸೋತ ಹಾಗೆಯೇ ಸರಿ. ಸ್ಕ್ರೋಲ್ ಮಾಡಿ ನೇರ ಕೆಳಗೆ ಹೋಗಬೇಡಿ, ಕಾರಣ ನಾವು ಉತ್ತರವನ್ನು ಕೆಳಗೆ ನೀಡಿದ್ದೇವೆ. ಅದಕ್ಕಾಗಿ ಚೀಟಿಂಗ್ ಬೇಡ.
ಪ್ರಸ್ತುತ ಪಜಲ್ ನ ಉತ್ತರ ಈ ರೀತಿಯಾಗಿದೆ.
ಹುಡುಗಿಯು ಮೊದಲು ಗ್ರೌಂಡ್ ಫ್ಲೋರ್ ನಿಂದ ಮೊದಲ ಅಂತಸ್ತಿಗೆ ಹೋಗಬೇಕಾಗುತ್ತದೆ. ಅಲ್ಲಿ ಬದಿಯ ಕೋಣೆಯ ಬಾಗಿಲು ತೆರೆದಿದೆ, ಅದರೊಳಗಿನಿಂದ ಮತ್ತೆ ವಾಪಸ್ ಗ್ರೌಂಡ್ ಫ್ಲೋರ್ ಗೆ ಬಂದು ಅಲ್ಲಿಂದ ಬದಿಯ ಕೋಣೆಗೆ ಹೋಗಿ ಮತ್ತೆ ಫಸ್ಟ್ ಫ್ಲೋರ್ಗೆ ಹುಡುಗಿಯು ಏರಬೇಕಾಗುತ್ತದೆ. ಆಮೇಲೆ ಸೆಕೆಂಡ್ ಫ್ಲೋರ್ ನಂತರ ಬದಿಯ ಕೋಣೆಗೆ ಹೋಗಿ ಅಲ್ಲಿಂದ ಥರ್ಡ್ ಫ್ಲೋರ್, ಆಮೇಲೆ ಬದಿಯ ಕೋಣೆ ಮತ್ತೆ ಆಚೆ ಬದಿಯ ಕೋಣೆ ಅಲ್ಲಿಂದ ಏಣಿಯ ಮುಖಾಂತರ ಟೆರೇಸ್ ಮೇಲೆ ಹೋಗಬಹುದು. ಹೀಗೆ ಹುಡುಗಿಗೆ ಟೆರೆಸ್ ಮೇಲೆ ಹೋಗಿ ಮುಟ್ಟಲು ಒಟ್ಟು 6 ಏಣಿಗಳ ಉಪಯೋಗವನ್ನು ಪಡೆಯಬೇಕಾಗುತ್ತದೆ.
