ತುಂಬಿ ಹರಿಯುತ್ತಿರುವ ನದಿ ದಾಟಿ ದಡಕ್ಕೆ ಬರುತ್ತಲೇ ಪೋಷಕರು ಭಾರತೀಯ ಸಂಪ್ರದಾಯದಂತೆ ಸ್ವಾಗತಿಸಿದರು ಅದ್ದೂರಿಯಾಗಿ..!

ಮಳೆಯಲ್ಲಿ ಕೆಲವರಿಗೆ ಇನ್ನೊಬ್ಬರ ಮುಂದೆ ಸಾಹಸವನ್ನು ತೋರಿಸಿ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುವ ಹವ್ಯಾಸ ತುಂಬಾನೇ ಇರುತ್ತದೆ. ಈ ಹವ್ಯಾಸ ಕೆಲವೊಮ್ಮೆ ಇಂಥ ಹುಚ್ಚು ಮನಸ್ಸಿನ ವ್ಯಕ್ತಿಗಳಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ಈ ಹುಚ್ಚಾಟದಲ್ಲಿ ಕೆಲವು ಎಷ್ಟೋ ಸಲ ತಮ್ಮ ಜೀವವನ್ನು ಕಳೆದುಕೊಂಡಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಸದ್ಯ ಇದೇ ರೀತಿ ಯುವಕನೊಬ್ಬ ತುಂಬಿ ಹರಿಯುತ್ತಿರುವ ನದಿಯ ನೀರಿನಲ್ಲಿ ಬಿಂದಾಸ್ ಆಗಿ ತಾನೇ ಹೀರೋ ಎನ್ನುವಂತೆ ತಿರುಗಾಡಿ ಬರುತ್ತಾನೆ, ಆತ ತೀರಕ್ಕೆ ಬಂದ ನಂತರ ಮನೆಯವರು ಆ ಯುವಕನಿಗೆ ಸ್ವಾಗತಿಸಿಕೊಂಡ ರೀತಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಮಳೆಯಿಂದಾಗಿ ನದಿಯು ಸೇತುವೆಯ ಮೇಲಿನಿಂದ ಉಕ್ಕಿ ಹರಿಯುತ್ತಿದೆ. ಆ ತುಂಬಿ ಹರಿಯುತ್ತಿರುವ ಪ್ರವಾಹದಲ್ಲಿ ಯುವಕನೊಬ್ಬ ವೀರನಂತೆ ನಡೆಯುತ್ತಾ ಬರುತ್ತಿದ್ದಾನೆ. ದಡಕ್ಕೆ ನಿಂತ ಜನರ ಮುಂದೆ ಹರಿಯುತ್ತಿರುವ ನೀರಿನಲ್ಲಿ ತುಂಬಾ ಸ್ಟೈಲ್ ನಿಂದ ಬರುತ್ತಿದ್ದಾನೆ. ಸರಿಯಾಗಿ ಅದೇ ಸಮಯಕ್ಕೆ ಆತನ ಪೋಷಕರು ಅಂದರೆ ತಂದೆ ಮತ್ತು ಅಣ್ಣ ದಡಕ್ಕೆ ಬಂದಿದ್ದಾರೆ. ತನ್ನ ಮಗನ ಅವಾಂತರವನ್ನು ನೋಡಿದ ತಂದೆಯ ಸಿಟ್ಟು ನೆತ್ತಿಗೆ ಏರಿದೆ. ಅದೇ ಸಿಟ್ಟಿನಲ್ಲಿ ಮಗನಿಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಅದೇ ಫ್ಲೋ ನಲ್ಲಿ ಆತನ ಅಣ್ಣನೂ ಸಹ ಎಲ್ಲರ ಮುಂದೆ ಎರಡು ಕೆನ್ನೆಗೆ ಬಾರಿಸಿಯೇ ಬಿಟ್ಟಿದ್ದಾನೆ.

ವಿಡಿಯೋ ನೋಡಿ

ಈ ತಮಾಷೆಯ ವಿಡಿಯೋವನ್ನು ಟ್ವಿಟರ್ ನಲ್ಲಿ @vijaykaka ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಮತ್ತು 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಹೊಂದಿದೆ.