Video; ಮದುವೆಯಲ್ಲಿ ಮಿತ್ರರು ನೀಡಿದ ಚಿಕ್ಕ ಪ್ಯಾಕೆಟ್ ನಲ್ಲಿಯ ಗಿಫ್ಟ್ ನೋಡಿ ನಾಚಿ ನೀರಾದಳು ವಧು; ವರನ ಮುಖ ನೀವೇ ನೋಡಿ…
ಮದುವೆ ಯಾರದೇ ಫಿಕ್ಸ್ ಆಗಲಿ, ಎಲ್ಲರಿಗಿಂತಲೂ ಖುಷಿ ಜಾಸ್ತಿ ಆಗೋದು ಮೊದಲು ಅವರ ಫ್ರೆಂಡ್ ಗಳಿಗೆ ಅಲ್ವಾ? ಮದುವೆಯಲ್ಲಿ ಮಿತ್ರರು ಇಲ್ಲದೆ ಇದ್ದರೆ ಆ ಮದುವೆ ಮದುವೆಯೇ ಎನಿಸುವುದಿಲ್ಲ. ಆಮೇಲೆ ಇನ್ನೊಂದು ಹೇಳುವುದೆಂದರೆ ಗೋಳು ಹೊಯ್ದುಕೊಳ್ಳುವ ಸಲುವಾಗಿ ಸದ್ಯದ ಮದುವೆಗಳಲ್ಲಿ ಮಿತ್ರರು ವರನಿಗೆ ತುಂಬಾ ವಿಚಿತ್ರವಾದ ಗಿಫ್ಟ್ಗಳನ್ನು ನೀಡುತ್ತಿರುವುದು ಕಂಡುಬರುತ್ತಿದೆ. ಈ ರೀತಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಇಂತದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ತೂಫಾನ್ ವೈರಲ್ ಆಗುತ್ತಿದೆ. ಅದೇನಿದೆ ನೋಡೋಣ ಬನ್ನಿ…
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ಆರತಕ್ಷತೆಯ ಕಾರ್ಯಕ್ರಮದ ನಂತರ ವಧುವರ ಇಬ್ಬರು ಚೇರ್ ಮೇಲೆ ಕುಳಿತಿದ್ದಾರೆ. ಅದೇ ಸಮಯಕ್ಕೆ ಆತನ ಮಿತ್ರರು ಚಿಕ್ಕದಾದ ಪಾಲಿಥಿನ್ ಪ್ಯಾಕೆಟ್ ನಲ್ಲಿ ಪ್ಯಾಕ್ ಮಾಡಿದ ಗಿಫ್ಟ್ ಒಂದನ್ನು ವರನಿಗೆ ನೀಡಿದ್ದಾರೆ. ಅದನ್ನು ನೋಡಿದ ಸ್ಟೇಜ್ ಮೇಲಿದ್ದವರೆಲ್ಲರಿಗೂ ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಮಿತ್ರರೆಲ್ಲರೂ ವರನಿಗೆ ಗಿಫ್ಟ್ ನೀಡಿದ ನಂತರ ಅದನ್ನು ಅಲ್ಲಿಯೇ ಓಪನ್ ಮಾಡಲು ಒತ್ತಾಯಿಸಿದ್ದಾರೆ. ಇದನ್ನು ತಿಳಿದ ವರ ತನ್ನ ಮಿತ್ರರು ತನ್ನ ಜೊತೆಗೆ ಏನೋ ಕುಚೇಷ್ಟೆ ಮಾಡಿದ್ದಾರೆಂದು ತಿಳಿದುಕೊಂಡಿದ್ದಾನೆ. ಇಲ್ಲಿ ನೋಟಿಸ್ ಮಾಡಬಹುದಾದ ಮುಖ್ಯ ವಿಷಯವೇನೆಂದರೆ ಬದಿಯಲ್ಲಿದ್ದ ವಧು ತುಂಬಾ ಕಾತುರದಿಂದ ಒಳಗೆ ಏನು ಇರಬಹುದು ಎಂದು ನೋಡುತ್ತಿದ್ದಾಳೆ. ವರ ಪ್ಯಾಕೆಟ್ ಓಪನ್ ಮಾಡುವಾಗ ಮಿತ್ರರು ಒಂದೇ ಸವನೆ ಜೋರು ಜೋರಾಗಿ ಕಿರುಚುತ್ತಿದ್ದಾರೆ.
ಈ ಸಂದರ್ಭದಲ್ಲಿ ವರ ಪಾಲಿಥೀನ್ ಪ್ಯಾಕೆಟ್ ಓಪನ್ ಮಾಡುತ್ತಲೇ ಅದರಲ್ಲೇನಿದೆ ಎಂಬುದು ನೋಡಿ ತಿಳಿದುಕೊಳ್ಳುತ್ತಾನೆ, ಮತ್ತು ಆ ಗಿಫ್ಟನ್ನು ಪಾಲಿಥಿನ್ ನಿಂದ ಹೊರಗೆ ತೆಗೆಯುವುದೇ ಇಲ್ಲ. ವರನ ಬದಿಯಲ್ಲಿ ಕುಳಿತ ವಧುವಿನ ಎಕ್ಸ್ಪ್ರೆಶನ್ ಮಾತ್ರ ಆ ಸಮಯದಲ್ಲಿ ನೋಡುವಂತಿತ್ತು. ಆ ವಸ್ತು ತುಂಬಾನೇ ಸರ್ಪ್ರೈಸ್ ಇತ್ತು ಎಂದೇ ಹೇಳಬೇಕಾಗುತ್ತದೆ. ನೀವು ಮಾತ್ರ ಕಾಮೆಂಟ್ ಮಾಡಿ ಅದರಲ್ಲೇನಿತ್ತು ಎಂಬುದನ್ನು ಜಾಹೀರು ಪಡಿಸಬೇಡಿ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಆದ instagram ನಲ್ಲಿ kichus_abi ಹೆಸರಿನಿಂದ ಶೇರ್ ಮಾಡಲಾಗಿದೆ. ನೇಟಿಜನ್ಸ್ ಗಳು ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಪ್ರಸ್ತುತ ವಿಡಿಯೋಗೆ ಇಲ್ಲಿಯವರೆಗೆ 5 ಲಕ್ಷಕ್ಕೂ ಮೀರಿ ವೀಕ್ಷಣೆ ಪಡೆದಿದೆ. ಸಾಕಷ್ಟು ನೆಟ್ಟಿಗರು ಕಮೆಂಟ್ ಸಹಿತ ಮಾಡಿದ್ದಾರೆ. ಪಕ್ಕಾ ಫ್ರೆಂಡ್ಗಳು ಇದೇ ರೀತಿ ಇರುತ್ತಾರೆ ಎಂದು ವರ್ಣಿಸಿದ್ದಾರೆ.