ಅಕ್ಷಯ ಕುಮಾರ್ ಬಳಿ ಇವೆ ಈ ಐದು ಅತ್ಯಂತ ದುಬಾರಿ ವಸ್ತುಗಳು; ಪ್ರೈವೇಟ್ ಜೆಟ್’ನಿಂದ ಹಿಡಿದು 3.34 ಕೋಟಿಯ Rolls Royce ವರೆಗೆ!

ಅಕ್ಷಯ ಕುಮಾರ ಹತ್ತಿರ ಎಲ್ಲಕ್ಕಿಂತ ದುಬಾರಿ ಮೌಲ್ಯ ಹೊಂದಿದ ಈ 5 ವಸ್ತುಗಳಿವೆ.

ಅಕ್ಷಯ ಕುಮಾರ್ ಅವರನ್ನು ಬಾಲಿವುಡ್‌ನ ಅಲ್ಟಿಮೇಟ್ ‘ಖಿಲಾಡಿ’ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಚಲನಚಿತ್ರಗಳಿಂದ ಹಿಡಿದು ಕ್ಲಾಸ್ ಆಕ್ಟಿಂಗ್‌ವರೆಗೆ ಅಭಿಮಾನಿಗಳು ಅವರನ್ನು ಎಲ್ಲ ರೀತಿಯಲ್ಲೂ ಇಷ್ಟಪಡುತ್ತಾರೆ. ಅವರು ಅನೇಕ ದೊಡ್ಡ ಬ್ರಾಂಡ್ ಅನುಮೋದನೆಗಳನ್ನು ಹೊಂದಿದ್ದಾರೆ ಮತ್ತು ಚಲನಚಿತ್ರೋದ್ಯಮದ ಎ-ಲಿಸ್ಟ್ ನಟರಲ್ಲಿ ಅವರನ್ನು ಪರಿಗಣಿಸಲಾಗುತ್ತದೆ. ಅಕ್ಷಯ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ ಅವರು ತಮ್ಮದೇ ಆದ ಜಗತ್ತನ್ನು ಸೃಷ್ಟಿಸಿದ್ದಾರೆ. ಅವರ ಹತ್ತಿರ ಕೆಲವು ಅತ್ಯಂತ ದುಬಾರಿ ಮಟ್ಟದ ವಸ್ತುಗಳನ್ನು ಇವೆ ಸಾಮಾನ್ಯ ಜನರು ಕನಸಿನಲ್ಲಿ ಮಾತ್ರ ಯೋಚಿಸಬಹುದಾದ ದುಬಾರಿ ವಸ್ತುಗಳಾಗಿವೆ. ಹಾಗಿದ್ದರೆ ಬನ್ನಿ ಆ ದುಬಾರಿ ವಸ್ತುಗಳ ಬಗ್ಗೆ ತಿಳಿಕೊಳ್ಳೋಣ…..

ಜುಹು ಪ್ರೈಮ್ ಬೀಚ್‌ನಲ್ಲಿ sea -facing ಮನೆ – ಬೆಲೆ 80 ಕೋಟಿ

ಜುಹುವಿನಲ್ಲಿರುವ ಅಕ್ಷಯ್ ಅವರ ಮನೆಯ ಮುಂಭಾಗದಲ್ಲಿ ಅರಬಿ ಸಮುದ್ರದ ಸುಂದರವಾದ ದೃಶ್ಯ ಕಾಣಿಸುತ್ತದೆ. ಅಲ್ಲದೆ ಈ ಮನೆಯ ಒಳಾಂಗಣದಲ್ಲಿಯ ಇಂಟರಿಯರ್ ಡಿಸೈನ್ ಅವರ ಪತ್ನಿ ಟ್ವಿಂಕಲ್ ಖನ್ನಾ ಸ್ವತಃ ಮಾಡಿದ್ದಾರೆ. ಈ ಮನೆಯ ಬೆಲೆ ಸುಮಾರು 80 ಕೋಟಿ ರೂ.ಇದೆ.

ಪ್ರೈವೇಟ್ ಜೆಟ್ – ಬೆಲೆ 260 ಕೋಟಿ

ಅಕ್ಷಯ ಕುಮಾರ ಒಬ್ಬ ರಾಜನಂತೆ ಜೀವನವನ್ನು ನಡೆಸುತ್ತಾರೆ. ಅವರ ಹತ್ತಿರ ಒಂದು ಪ್ರೈವೇಟ್ ಜೆಟ್ ಇದೆ ಅದರ ಬೆಲೆ ಸುಮಾರು 260 ಕೋಟಿ ರೂ.ಗಳಿಷ್ಟಿದೆ. ಅಕ್ಷೆಯ ಕುಮಾರ ಜೆಟ್‌ನಲ್ಲಿ ಕುಳಿತಿರುವ ಚಿತ್ರಗಳು ಹಲವು ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಅವರು ಕೇವಲ ಬಾಕ್ಸ್ ಆಫೀಸ್ ಮಾತ್ರವಲ್ಲದೆ ಅವರ ಜೀವನಶೈಲಿಯೂ ಸಹ ತುಂಬಾ ದುಬಾರಿಯಾಗಿದೆ.

Bentley Flying Spur- ಬೆಲೆ 3.2 ಕೋಟಿ

ಅಕ್ಷಯ ಅವರಿಗೆ ದುಬಾರಿ ಐಷಾರಾಮಿ ಕಾರುಗಳೆಂದರೆ ತುಂಬಾ ಪ್ರೀತಿ. ಉತ್ತಮ ಕಾರುಗಳ ಸಂಗ್ರಹವನ್ನು ಹೊಂದಿರುವ ಬಾಲಿವುಡ್‌ನ ಆಯ್ದ ನಟರಲ್ಲಿ ಅವರು ಒಬ್ಬರು. ಇವರು Bentley Flying Spur ಅನ್ನು ಹೊಂದಿದ್ದಾರೆ, ಈ ಕಾರನ್ನು ಕೇವಲ ಆಯ್ದ ಜನರಿಗಾಗಿ ತಯಾರಿಸಲಾಗುತ್ತದೆ ಅದರಲ್ಲಿ ಅಕ್ಷಯ ಕುಮಾರ್ ಒಬ್ಬರು. ಈ ಕಾರಿನ ಬೆಲೆ ಸುಮಾರು 3.2 ಕೋಟಿ ಇದೆ

Rolls Royce Phantom- ಬೆಲೆ 3.34 ಕೋಟಿ ರೂ.

 ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರಂತೆ ಅಕ್ಷಯ್ ಕುಮಾರ್ ಕೂಡ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೊಂದಿದ್ದಾರೆ. ಈ ಕಾರಿನ ಬೆಲೆ 3.34 ಕೋಟಿ ರೂ. ಅಲ್ಲದೆ ಪ್ರತಿಯೊಬ್ಬರೂ ಈ ಕಾರನ್ನು ಖರೀದಿಸಲು ಸಾಧ್ಯವಿಲ್ಲ.

Harley Davidson V-Rod – ಬೆಲೆ 20 ಲಕ್ಷ ರೂ.

ಅಕ್ಷಯ ಕುಮಾರ ಹತ್ತಿರ ಕೇವಲ ಲಕ್ಸರಿ ಕಾರಗಳಷ್ಟೇ ಅಲ್ಲ ಅವರ ಹತ್ತಿರ ಕ್ರೂಜರ್ ಬೈಕ್ಸ್ ಗಳ ಸಂಗ್ರಹ ಕೂಡಾ ಸಾಕಷ್ಟಿದೆ. ಅವರ ಹತ್ತಿರ ವಿರುವ ವಸ್ತುಗಳಲ್ಲಿ ಎಲ್ಲಕ್ಕಿಂತ ಕಡಿಮೆ ಬೆಲೆ ಹೊಂದಿದ ವಸ್ತು ವೆಂದರೆ ಈ ಬೈಕ್ ಆಗಿದೆ. Harley Davidson V-Rod ಬೈಕ್ ನ್ನು ಬಾಲಿವುಡ್ ನಟ ಹಾಗೂ ಅವರ ಗೆಳೆಯ ಜಾನ್ ಅಬ್ರಾಹಂ ಅವರು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಇದರ ಮೌಲ್ಯ 20 ಲಕ್ಷ ರೂಪಾಯಿ ಇದೆ.