Video; ಮಂಗನ ಜೊತೆಗಿನ ಮಂಗಾಟ ಹುಡುಗಿಗೆ ಬಿತ್ತು ದುಬಾರಿ; ಇದು ಏಳೇಳು ಜನ್ಮ ಆಕೆ ಮರೆಯಲು ಸಾಧ್ಯವಿಲ್ಲ!
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಖತ್ತಾಗಿ ವೈರಲ್ ಆಗುತ್ತವೆ. ಈ ವಿಡಿಯೋಗಳಲ್ಲಿ ಪ್ರಾಣಿಗಳ ಪ್ರೀತಿ ನೋಡುವುದರ ಜೊತೆಗೆ ಕೆಲವೊಮ್ಮೆ ಅವುಗಳ ರೋಷವು ನೋಡಲು ಸಿಗುತ್ತದೆ. ಕೆಲವು ಜನರು ಪ್ರಾಣಿಸಂಗ್ರಹಾಲಯಗಳಲ್ಲಿ ಹೋಗಿ ಪ್ರಾಣಿಗಳ ಜೊತೆಗೆ ತುಂಟಾಟ ಅಥವಾ ಮಸ್ತಿ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅವುಗಳ ಜೊತೆಗೆ ಮಾಡುವ ಈ ಮಸ್ತಿ ತುಂಬ ದುಬಾರಿಯಾಗಿ ಪರಿಣಮಿಸುತ್ತದೆ. ಪ್ರಸ್ತುತ ವಿಡಿಯೋ ಒಂದು ಮಂಗ ಮತ್ತು ಹುಡುಗಿಗೆ ಸಂಬಂಧಿಸಿದೆ. ಹುಡುಗಿಗೆ ಮಂಗದ ಜೊತೆ ಮಂಗಾಟ ಮಾಡಿದ್ದು ತುಂಬಾ ದುಬಾರಿಯಾಗಿ ಪರಿಣಮಿಸಿದೆ. ನನ್ನ ಜೊತೆ ಹೀಗಾಗುತ್ತದೆ ಎಂದು ಆ ಹುಡುಗಿಯು ಕನಸಿನಲ್ಲಿಯೂ ವಿಚಾರ ಮಾಡಲಿಕ್ಕಿಲ್ಲ. ಬನ್ನಿ ನೋಡೋಣ ಏನಾಗಿದೆ ಎಂದು…
ಈ ವಿಡಿಯೋ ಯಾವುದೋ ಒಂದು ಪ್ರಾಣಿ ಸಂಗ್ರಹಾಲಯದಲ್ಲಿಯದಿದೆ. ಹುಡುಗಿಯೊಬ್ಬಳು ತನ್ನ ಕುಟುಂಬದವರ ಜೊತೆಗೆ ಪ್ರಾಣಿಗಳನ್ನು ನೋಡಲು ಬಂದಿದ್ದಾಳೆ. ಆ ಸಂದರ್ಭದಲ್ಲಿ ಆಕೆ ನೆಟ್ ನ ಹಿಂದಿರುವ ಮಂಗನ ಜೊತೆ ಮಸ್ತಿ ಮಾಡಲು ಶುರುಮಾಡುತ್ತಾಳೆ. ಹೀಗೆ ಮಸ್ತಿ ಮಾಡುತ್ತಾ ಮಾಡುತ್ತಾ ಗೊತ್ತಿಲ್ಲದಂತೆ ಹುಡುಗಿಯು ಮಂಗನ ಹತ್ತಿರ ಹೋಗುತ್ತಾಳೆ. ಆಗ ಮಂಗ ಹಠಾತ್ ಆಕೆಯ ತಲೆಯ ಮೇಲಿನ ಕೂದಲನ್ನು ಹಿಡಿದು ಒಂದೇ ಸಮನೆ ಎಳೆಯಲು ಶುರುಮಾಡುತ್ತದೆ. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಹುಡುಗಿಯು ಒಮ್ಮೆಲೇ ತಬ್ಬಿಬ್ಬಾಗಿ ಸಹಾಯಕ್ಕಾಗಿ ಕಿರುಚಲು ಶುರುಮಾಡುತ್ತಾಳೆ. ಈ ದೃಶ್ಯ ಕೆಲವು ಕ್ಷಣಗಳವರೆಗೆ ಹಾಗೆಯೇ ನಡೆಯುತ್ತದೆ. ಕೊನೆಗೆ ಹುಡುಗಿಯ ತಂದೆ ಮಗಳನ್ನು ಮಂಗನ ಕೈಯಿಂದ ಬಿಡಿಸಲು ಯಶಸ್ವಿಯಾಗುತ್ತಾನೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋ instagram ನಲ್ಲಿ gieddee ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋ ಸಾವಿರಾರು ವೀಕ್ಷಣೆ ಹಾಗೂ ಲೈಕ್ಸ್ ಗಳನ್ನು ಪಡೆದಿದೆ. ಕಾಮೆಂಟ್ ನಲ್ಲಿ ನೆಟ್ಟಿಗರು ಪ್ರಾಣಿಗಳ ಜೊತೆ ಈ ರೀತಿ ವ್ಯವಹರಿಸಬಾರದು ಎಂದು ತಿಳಿ ಹೇಳಿದ್ದಾರೆ.